ಉಡುಪಿ : ರಾಜ್ಯದಾದ್ಯಂತ ನಾಳೆ ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ರಾಜ್ಯದಲ್ಲಿ ನಾಳೆ ಬಸ್ ಬಂದ್ ಇಲ್ಲ, ರಾಜ್ಯದಾದ್ಯಂತ ನಾಳೆ 8,500 ಬಸ್ ಗಳು ಸಂಚಾರ ಓಡಾಡಲಿವೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಖಜಾಂಜಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಖಾಸಗಿ ಬಸ್ ಸಂಚಾರ ಬಂದ್ ಮಾಡುವ ವಿಚಾರದಲ್ಲಿ ಖಾಸಗಿ ಬಸ್ ಮಾಲೀಕರ ಸಂಘಟನೆಯ ಮುಖಂಡರಲ್ಲೇ ಇದೀಗ ಭಿನ್ನಮತ ಸ್ಪೋಟಗೊಂಡಿದ. ಬೆಂಗಳೂರಿನ ಖಾಸಗಿ ಬಸ್ ಮಾಲೀಕರು ಬಸ್ ಸಂಚಾರ ಬಂದ್ ಮಾಡಲು ಮುಂದಾಗಿದ್ದರೆ, ಕರಾವಳಿ ಭಾಗದ ಬಸ್ ಮಾಲೀಕರು ಬಂದ್ ಗೆ ಬೆಂಬಲ ಸೂಚಿಸಿಲ್ಲ. ಹೀಗಾಗಿ ಕರಾವಳಿ ಭಾಗದಲ್ಲಿ ನಾಳೆ ಖಾಸಗಿ ಬಸ್ ಸಂಚರಿಸುವುದು ಖಚಿತ.
ಬೆಂಗಳೂರಿನ ಫ್ರೀಡಂ ಫಾರ್ಕ್ ನಲ್ಲಿ ನಡೆದ ಮಾತುಕತೆಯ ಬಳಿಕ ಮಾತನಾಡಿದ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾನಾವು ಸರಕಾರಿ ನೌಕರರ ಜೊತೆ ಬೆಂಬಲಕ್ಕೆ ನಿಂತಿದ್ದು, ಬಸ್ಸುಗಳನ್ನು ರಸ್ತೆಗೆ ಇಳಿಸುವುದಿಲ್ಲ ಎಂದಿದ್ದರು. ಆದರೆ ಕರಾವಳಿ ಭಾಗದ ಬಸ್ ಮಾಲೀಕರು ಇದನ್ನು ವಿರೋಧಿಸಿದ್ದಾರೆ.
ಒಟ್ಟಿನಲ್ಲಿ ಖಾಸಗಿ ಬಸ್ ಮಾಲೀಕರ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನಾಳೆ ಯಾವೆಲ್ಲಾ ಭಾಗಗಳಲ್ಲಿ ಬಸ್ ಸಂಚಾರ ಇರಲಿದೆ ಅನ್ನೋದು ಖಚಿತವಾಗಲಿದೆ.