ಭಾನುವಾರ, ಜೂನ್ 15, 2025
HomeBreakingಕೂದಲು ದಾನ ಮಾಡಿದ ಗಾಯಕಿ…! ಒಂದೊಳ್ಳೆ ಕೆಲಸದಿಂದ ಗಮನಸೆಳೆದ ಅಖಿಲಾ ಪಜಮಣ್ಣು….!!

ಕೂದಲು ದಾನ ಮಾಡಿದ ಗಾಯಕಿ…! ಒಂದೊಳ್ಳೆ ಕೆಲಸದಿಂದ ಗಮನಸೆಳೆದ ಅಖಿಲಾ ಪಜಮಣ್ಣು….!!

- Advertisement -

ಇತ್ತೀಚಿಗಷ್ಟೇ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ರಿಯಾಲಿಟಿ ಶೋಮೂಲಕ ಬೆಳಕಿಗೆ ಬಂದ ಗಾಯಕಿ ಅಖಿಲಾ ಪಜಮಣ್ಣು ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗಾಯನದ ಜೊತೆ ಕ್ಯಾನ್ಸರ್ ಪೀಡಿತರಿಗಾಗಿಯೂ ಮಿಡಿದಿರೋ ಅಖಿಲಾ ಕೇಶದಾನ ಮಾಡಿ ಮಾದರಿ ಎನ್ನಿಸಿದ್ದಾರೆ.

ಕಿರುತೆರೆ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಗಾಯಕಿ ಅಖಿಲಾ ಪಜಮಣ್ಣು ತಮ್ಮ ಸ್ನಿಗ್ಧ ಸೌಂದರ್ಯ ಹಾಗೂ ಮದುರ ಕಂಠದಿಂದ ನಾಡಿನ ಭರವಸೆ ಗಾಯಕಿ ಎನ್ನಿಸಿದವರು.

ಕೆಲದಿನಗಳ ಹಿಂದೆಯಷ್ಟೇ ಟೆಕ್ಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಖಿಲಾ ಇದೀಗ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಸುದ್ದಿಯಾಗಿದ್ದಾರೆ.

ಕ್ಯಾನ್ಸರ್ ಪೀಡಿತರಿಗೆ ವಿಗ್ ತಯಾರಿಸಲು ಕೂದಲು ಬಳಕೆಯಾಗುತ್ತದೆ. ಇದಕ್ಕೆ ಆರೋಗ್ಯವಂತರು ತಲೆಕೂದಲನ್ನು ದಾನ ಮಾಡಬಹುದು. ಇತ್ತೀಚಿಗಷ್ಟೇ ನಟ ಧ್ರುವ್ ಸರ್ಜಾ ಕೂಡ ತಮ್ಮ ಕೂದಲು ದಾನ ಮಾಡಿದ್ದರು. ಈಗ ಅಖಿಲಾ ಪಜಮಣ್ಣು ಕೂಡ ಮಂಗಳೂರಿನ seeds for hope  ಸಂಸ್ಥೆಗೆ ತಮ್ಮ ಕೂದಲನ್ನು ದಾನ ಮಾಡಿದ್ದಾರಂತೆ.

ಈ ವಿಚಾರವನ್ನು ಸ್ವತಃ ಅಖಿಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CNXQSSvr1uK/?igshid=1sllx9v1ud69z

ಲಾಕ್ ಡೌನ್ ಅವಧಿಯಲ್ಲಿ ತಲೆಕೂದಲು ಉದ್ದ ಬೆಳೆದಿತ್ತು. ಸುಮ್ಮನೆ ಕತ್ತರಿಸಿ ಎಸೆಯೋ ಬದಲು ಯಾವುದಾದರೂ ಉದ್ದೇಶಕ್ಕೆ ಬಳಸೋಣ ಎಂದು ಸೀಡ್ಸ್ ಫಾರ್ ಹೋಪ್ ಸಂಸ್ಥೆಗೆ ದಾನ ಮಾಡಿದ್ದೇನೆ ಎಂದಿದ್ದಾರೆ.

https://www.instagram.com/p/CNXQSSvr1uK/?igshid=2p1f9qmyjjiy

ನಾನೊಂದು ಒಳ್ಳೆ ಕೆಲಸಕ್ಕೆ ಕೈ ಜೋಡಿಸಿದ್ದೇನೆ. ನೀವು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಪುತ್ತೂರಿನ ಕೆಲ ವಿದ್ಯಾರ್ಥಿಗಳು ಸೀಡ್ಸ್ ಫಾರ್ ಹೋಪ್ ಹೆಸರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು ಕ್ಯಾನ್ಸರ್ ಪೀಡಿತರ ಸೇವೆಗೆ ಮುಂದಾಗಿದ್ದಾರೆ. ಇದೇ ಸಂಸ್ಥೆಗೆ ಅಖಿಲಾ ಕೇಶದಾನ ಮಾಡಿದ್ದಾರೆ.  

RELATED ARTICLES

Most Popular