ಮಂಗಳವಾರ, ಏಪ್ರಿಲ್ 29, 2025
HomeBreakingQuinoa Health Benefits : ಕ್ವಿನೋವಾ ಧಾನ್ಯದ ಪರಿಚಯವಿದೆಯೇ? ಆರೋಗ್ಯಕ್ಕಂತೂ ಇದು ಬಹಳ ಉಪಕಾರಿ

Quinoa Health Benefits : ಕ್ವಿನೋವಾ ಧಾನ್ಯದ ಪರಿಚಯವಿದೆಯೇ? ಆರೋಗ್ಯಕ್ಕಂತೂ ಇದು ಬಹಳ ಉಪಕಾರಿ

- Advertisement -

ಕ್ವಿನೋವಾ(Quinoa) ಒಂದು ಹೋಲ್ ಗ್ರೇನ್(Whole grain) ಧಾನ್ಯವಾಗಿದ್ದು, ಅದರ ಅನೇಕ ಆರೋಗ್ಯ ಪ್ರಯೋಜನಗಳಿಂದಾಗಿ (Quinoa Health Benefits) ಜನಪ್ರಿಯತೆ ಪಡೆದುಕೊಂಡಿದೆ. ಹೆಚ್ಚಿನ ಧಾನ್ಯಗಳಂತೆಯೇ ಜನರು ಕ್ವಿನೋವಾ ಬೀಜಗಳನ್ನು ಬೇಯಿಸಿ ತಿನ್ನಬಹುದು.ಕ್ವಿನೋವಾ ಸಸ್ಯವು ಬೀಟ್ರೂಟ್ಗಳು ಮತ್ತು ಪಾಲಕ್ ಸಸ್ಯವನ್ನು ಹೋಲುತ್ತದೆ. ಈ ಬಹುಮುಖ, ಪೌಷ್ಟಿಕ ಸಸ್ಯದ ಬೀಜಗಳು ಮತ್ತು ಎಲೆಗಳನ್ನು ತಿನ್ನಬಹುದು. ರೈತರು 120 ಕ್ಕೂ ಹೆಚ್ಚು ವಿವಿಧ ರೀತಿಯ ಕ್ವಿನೋವಾವನ್ನು ಬೆಳೆಸುತ್ತಾರೆ. ಆದರೆ ಅಂಗಡಿಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಕ್ವಿನೋವಾ ಮಾತ್ರ ಲಭ್ಯವಿದೆ.

ಏನೆಲ್ಲ ಉಪಯೋಗಗಳಿವೆ?

ಒಂದು ಕಪ್ ಅಂದರೆ ಸುಮಾರು 185 ಗ್ರಾಂ ಬೇಯಿಸಿದ ಕ್ವಿನೋವಾ 8.14 ಗ್ರಾಂ ಪ್ರೊಟೀನ್ ನೀಡುತ್ತದೆ. ಇದು ಸಾಕಷ್ಟು ಅಮಿನೊ ಆಸಿಡ್ ಹೊಂದಿದ್ದು, ಇಮ್ಯುನಿಟಿ ಪವರ್ ಹೆಚ್ಚಲು ಸಹಕಾರಿ.

ಹೈ ಫೈಬರ್: ಉಳಿದ ಧಾನ್ಯಗಳಿಗೆ ಹೋಲಿಸಿದರೆ ಕ್ವಿನೋವಾ ಹೈ ಫೈಬರ್ ಹೊಂದಿದೆ. 185 ಗ್ರಾಂ ನಲ್ಲಿ 5.18 ಗ್ರಾಂ ಫೇಬರ್ ಇರುತ್ತದೆ. ಫೈಬರ್ ನಿಯಮಿತ ಸೇವನೆಯು, ಕೊಲೆಸ್ಟ್ರಾಲ್, ಬ್ಲಡ್ ಪ್ರೆಶರ್ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಅಷ್ಟೇ ಅಲ್ಲದೇ ಹೆಲ್ತಿ ವೇಯ್ಟ್ ಮೈಂಟೈನ್ ಮಾಡಲು ಸಾಧ್ಯವಾಗುತ್ತದೆ.

ಆಂಟಿ ಆಕ್ಸಿಡೆಂಟ್: ಕ್ವಿನೋವಾ ಅಧಿಕ ವಿಟಮಿನ್ ಇ ಹೊಂದಿದೆ. ಇದು ಕಣ್ಣು, ಹೃದಯ ಆರೋಗ್ಯಕ್ಕೆ ಅತಿ ಉತ್ತಮ. ಜೊತೆಗೆ ಕಾನ್ಸರ್ ಬರದಂತೆ ತಡೆಯುತ್ತದೆ.

ಮ್ಯಾಂಗನೀಸ್: ಒಂದು ಕಪ್ ಬೇಯಿಸಿದ ಕ್ವಿನೋವಾ 1.17 ಗ್ರಾಂ ಮ್ಯಾಂಗನೀಸ್ ಹೊಂದಿದೆ. ಇದು ದೇಹದಲ್ಲಿ ಮೆಟಾಬೊಲಿಸಮ್ ಹೆಚ್ಚಲು ಸಹಕಾರಿಯಾಗಿದೆ.

ಅಧಿಕ ಪ್ರಮಾಣದ ಕಬ್ಬಿಣಾಂಶ: ಕಬ್ಬಿಣಾಂಶ ಹಿಮೋಗ್ಲೋಬಿನ್ ಹೆಚ್ಚಲು ಬೇಕೇ ಬೇಕು. ಇದು ಓಕ್ಸಿಜನ್ ಪ್ರಮಾಣ ಹೆಚ್ಚಿಸಿ ಆರೋಗ್ಯ ವೃದ್ಧಿಸಲು ಸಹಾಯಕವಾಗುತ್ತದೆ. ಒಂದು ಕಪ್ ಬೇಯಿಸಿದ ಕ್ವಿನೋವಾದಲ್ಲಿ 2.7 ಗ್ರಾಂ ಕಬ್ಬಿಣಾಂಶ ಇರುತ್ತದೆ.

ಮ್ಯಾಗ್ನಿಶಿಯಂ: ಒಂದು ಕಪ್ ಬೇಯಿಸಿದ ಕ್ವಿನೋವಾ 118 ಗ್ರಾಂ ಮ್ಯಾಗ್ನಿಶಿಯಂ ಹೊಂದಿದೆ. ಇದು ಮೈಗ್ರೇನ್, ಹೃದಯ ಸಂಬಂಧಿ ಕಾಯಿಲೆಗಳು, ಡಯಾಬಿಟಿಸ್ ಬಾರದಂತೆ ತಡೆಯುತ್ತದೆ.

ಇದು ಗ್ಲುಟನ್ ಫ್ರೀ ಸಸ್ಯವಾಗಿದೆ.

ಏನೆಲ್ಲಾ ನ್ಯೂಟ್ರಿಷನ್ ಹೊಂದಿದೆ?

ಒಂದು ಕಪ್ ಕ್ವಿನೋವಾ,
222 ಕ್ಯಾಲೋರಿ
8.14 ಗ್ರಾಂ ಪ್ರೊಟೀನ್
5.18 ಫೈಬರ್ ಹಾಗೂ
39.4 ಗ್ರಾಂ ಕಾರ್ಬೋಹೈಡ್ರೇಟ್ ಹೊಂದಿದೆ.

ಇಷ್ಟೆಲ್ಲಾ ಉಪಯೋಗಗಳಿರುವ ಕ್ವಿನೋವಾ ಹೆಸರು ಬಹುತೇಕ ಜನರಿಗೆ ಗೊತ್ತೆ ಇಲ್ಲ. ಇದು ಇಂದು ಡಯೆಟ್ ಆಹಾರದಲ್ಲಿ ಮುಖ್ಯ ಸ್ಥಾನ ಪಡೆದಿದೆ.

ಇದನ್ನೂ ಓದಿ: Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

(Quinoa health benefits of a A Magic Grain)

RELATED ARTICLES

Most Popular