ಮಂಗಳವಾರ, ಏಪ್ರಿಲ್ 29, 2025
HomeBreakingRaghuram Bhat KSCA President : ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ರಘುರಾಮ್ ಭಟ್, ಚುನಾವಣೆಯೇ...

Raghuram Bhat KSCA President : ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ರಘುರಾಮ್ ಭಟ್, ಚುನಾವಣೆಯೇ ಇಲ್ಲದೆ ಗೆದ್ದ ಬ್ರಿಜೇಶ್ ಬಣ

- Advertisement -

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (Karnataka State Cricket Association – KSCA) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ರಘುರಾಮ್ ಭಟ್ (Raghuram Bhat KSCA President) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸಂಪತ್, ಕಾರ್ಯದರ್ಶಿಯಾಗಿ ಶಂಕರ್, ಜೊತೆ ಕಾರ್ಯದರ್ಶಿಯಾಗಿ ಶಾವೀರ್ ತಾರಾಪುರ್ ಮತ್ತು ಖಜಾಂಚಿಯಾಗಿ ಜಯರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬಣದವರು KSCAನಲ್ಲಿ ಮತ್ತೆ ಅಧಿಕಾರ ಹಿಡಿದಿದೆ. ಚುನಾವಣಾ ಕಣದಲ್ಲಿದ್ದ ಎದುರಾಳಿ ಬಣದವವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬ್ರಿಜೇಶ್ ಬಣದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ನವೆಂಬರ್ 20ರಂದು ಚುನಾವಣೆ ನಡೆಯಬೇಕಿತ್ತು. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಕಳೆದ ಐದಾರು ವರ್ಷಗಳಿಂದ ಆರೋಪಗಳ ಸುರಿಮಳೆಗೈಯುತ್ತಿದ್ದವರು ಅಚ್ಚರಿಯ ಬೆಳವಣಿಗೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದಾರೆ.

ಮಂಗಳೂರು ಮೂಲದವರಾದ ರಘುರಾಮ್ ಭಟ್, ಕರ್ನಾಟಕ ಕಂಡ ದಿಗ್ಗಜ ಕ್ರಿಕೆಟಿಗರಲ್ಲೊಬ್ಬರು. 1983ರಲ್ಲಿ ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದ ಎಡಗೈ ಸ್ಪಿನ್ನರ್ ರಘುರಾಮ್ ಭಟ್, ಕರ್ನಾಟಕ ಪರ 82 ಪ್ರಥಮದರ್ಜೆ ಹಾಗೂ 12 ಲಿಸ್ಟ್ ಎ ಪಂದ್ಯಗನ್ನಾಡಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್’ನಲ್ಲಿ 374 ವಿಕೆಟ್ ಉರುಳಿಸಿರುವ ಭಟ್, ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ 15 ವಿಕೆಟ್’ಗಳನ್ನು ಉರುಳಿಸಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 43 ರನ್ನಿಗೆ 8 ವಿಕೆಟ್ ಪಡೆದಿರುವುದು ರಘುರಾಮ್ ಭಟ್ ಅವರ ವೃತ್ತಿಜೀವನ ಬೆಸ್ಟ್ ಬೌಲಿಂಗ್ ಸಾಧನೆ.

ಇನ್ನು KSCA ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸಂಪತ್, 20 ವರ್ಷಗಳಿಂದ ರಾಜ್ಯ ಕ್ರಿಕೆಟ್ ಸಂಸ್ಥೆಯ ಲಾಯರ್ ಹಾಗೂ ಕಾನೂನು ಸಲಹೆಗಾರರಾಗಿದ್ದರು. ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶಂಕರ್, ರಾಜ್ಯ ಕ್ರಿಕೆಟ್ ಸಂಸ್ಥೆಯ ಲೆಕ್ಕಪರಿಶೋಧಕರಾಗಿ ಕಾರ್ಯ ನಿರ್ವಹಿಸಿದ್ದರು

KSCA ನೂತನ ಆಡಳಿತ ಮಂಡಳಿ

ಅಧ್ಯಕ್ಷ: ರಘುರಾಮ್ ಭಟ್
ಉಪಾಧ್ಯಕ್ಷ: ಸಂಪತ್
ಕಾರ್ಯದರ್ಶಿ: ಶಂಕರ್
ಜೊತೆ ಕಾರ್ಯದರ್ಶಿ: ಶಾವೀರ್ ತಾರಾಪುರ್
ಖಜಾಂಚಿ: ಜಯರಾಮ್

ಇದನ್ನೂ ಓದಿ : T20 World Cup 2022 : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮಳೆಯಿಂದ ರದ್ದಾದರೆ ಭಾರತ ಫೈನಲ್‌ಗೆ

ಇದನ್ನೂ ಓದಿ : Virat Kohli batting records: ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಹೇಗಿದೆ ಗೊತ್ತಾ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಖಲೆ ?

Raghuram Bhat KSCA President Karnataka State Cricket Association

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular