7th pay commission formation : ಸರಕಾರಿ ನೌಕರರಿಗೆ ಗುಡ್ ನೈೂಸ್ : 7ನೇ ವೇತನ ಆಯೋಗ ರಚನೆ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯ ಸರಕಾರಿ ನೌಕರರ ಹಲವು ತಿಂಗಳ ಬೇಡಿಕೆಯನ್ನು ರಾಜ್ಯ ಸರಕಾರ ಈಡೇರಿಕೆ ಮಾಡಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅವರ ನೇತೃತ್ವದಲ್ಲಿ 7 ನೇ ವೇತನ ಆಯೋಗ (7th pay commission formation) ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕೆ.ಸುಧಾಕರ್ ರಾವ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಲು ತೀರ್ಮಾನಿಸಲಾಗುವುದು ಎಂದಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ ವರದಿಯಂತೆ ಸದ್ಯ ವೇತನ‌ ನೀಡಲಾಗುತ್ತಿದೆ. ಆದ್ರೆ ಏಳನೇ ವೇತನ‌ ಆಯೋಗ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರಿ ನೌಕಕರರ ಸಂಘ ಒತ್ತಾಯಿಸಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ‌ ಮತ್ತು ಭತ್ಯೆ ನೀಡುವಂತೆ ಮನವಿಯನ್ನು ಸಹ‌ ಮಾಡಿಕೊಂಡಿತ್ತು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿದ್ದರು. ಆದ್ರೆ ಇದು ಕೇವಲ‌ ಭರವಸೆವಾಗಿಯೆ ಉಳಿದಿದ್ದರಿಂದ ನೌಕರರ ಸಂಘ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ವೇತನ‌ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿತ್ತು.

ವೇತನ ಪರಿಷ್ಕರಣೆಗೆ ಈಗಾಗಲೇ ಹಣಕಾಸು ಇಲಾಖೆ ಸಮ್ಮತ ಸೂಚಿಸಿತ್ತು. ಇದೀಗ ವೇತನ ಪರಿಷ್ಕರಣೆಯಾದರೆ ವಾರ್ಷಿಕ ಹನ್ನೆರಡು ಸಾವಿರ ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ರಾಜ್ಯದಲ್ಲಿ ಮಂಜೂರಾದ ಹುದ್ದೆ ಕಡಿಮೆಯಿದ್ದು ಹೆಚ್ಚುವರಿ ಹುದ್ದೆ ಮಂಜೂರು ಮಾಡುವ ಸಾಧ್ಯತೆ‌‌ ಕಡಿಮೆಯಿದೆ. ಹೀಗಾಗಿ ನೌಕರರ ಮೇಲೆ‌ ಹೆಚ್ಚಿನ ಒತ್ತಡವಿದ್ದು,ಈ ಕಾರಣದಿಂದ ವೇತನ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯವಿದೆ.

ವೇತನ ಪರಿಷ್ಕರಣೆಯಿಂದಾಗಿ ರಾಜ್ಯದಲ್ಲಿನ ಸುಮಾರು 5.20 ಲಕ್ಷ ಸರಕಾರಿ ನೌಕರರು, 3.5 ಲಕ್ಷ ನಿಗಮ ಮಂಡಳಿ ಹಾಗೂ ಪ್ರಾಧಿಕಾರಗಳ ನೌಕರರು, ಮತ್ತು 4.5ಲಕ್ಷ ಸರಕಾರಿ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. ಇನ್ನು ಸರಕಾರಿ ನೌಕರರ ಕೇಡರ್ ಗೆ ಅನುಗುಣವಾಗಿ 10,000 ರೂಪಾಯಿಗಳಿಂದ 50,000 ರೂಪಾಯಿ ವರೆಗೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಮೊದಲ ವೇತನ ಆಯೋಗವನ್ನು 1966ರಲ್ಲಿ ರಚಿಸಲಾಗಿತ್ತು. 2017 ರಲ್ಲಿ ರಾಜ್ಯ ಸರಕಾರವು ಮಾಜಿ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಆರನೇ ವೇತನ ಆಯೋಗವನ್ನು ರಚನೆ ಮಾಡಿತ್ತು. ಕೇಂದ್ರ ಸಕರಾರ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಸರಕಾರಿ ನೌಕರರಿಗೆ ಹೋಲಿಕೆ ಮಾಡಿದ್ರೆ ರಾಜ್ಯ ಸರಕಾರಿ ನೌಕರರ ವೇತನ ತೀರಾ ಕಡಿಮೆ.

ರಾಜ್ಯ ಸರ್ಕಾರದ 72 ಇಲಾಖೆಗಳು ರಾಜ್ಯ ಸರ್ಕಾರದಲ್ಲಿ ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ ಮತ್ತು ಇತರ ಇಲಾಖೆಗಳನ್ನು ಒಳಗೊಂಡ 72 ಇಲಾಖೆಗಳಿವೆ. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ರಾಜ್ಯದ ಡಿ ಗ್ರೂಪ್ ಸರ್ಕಾರಿ ನೌಕರರು 8,000 ದಿಂದ 10,000 ಸಾವಿರ ರುಪಾಯಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಅದೇ ರೀತಿ ಸಿ ಗ್ರೂಪ್ ನೌಕರರು 15,000 ದಿಂದ 22,000 ಸಾವಿರ ರುಪಾಯಿ, ಬಿ ಗ್ರೂಪ್ ನೌಕರರು 25,000 ದಿಂದ 35,000 ಸಾವಿರ ರುಪಾಯಿ, ಎ ಗ್ರೂಪ್ ನೌಕರರು 35,000 ದಿಂದ 50, 000 ಸಾವಿರ ರುಪಾಯಿ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Department of Education : ಮೌಲ್ಯಮಾಪನಕ್ಕೆ ತೆರಳೋ ಉಪನ್ಯಾಸಕರೇ ಎಚ್ಚರ: ಕೊಂಚ ಯಾಮಾರಿದ್ರೂ ಹೋಗುತ್ತೆ ಕೆಲಸ

ಇದನ್ನೂ ಓದಿ : Aruna Miller : ಮೇರಿಲ್ಯಾಂಡ್‌ನ ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆ ಅಲಂಕರಿಸಿದ ಅರುಣಾ ಮಿಲ್ಲರ್‌ ಯಾರು?

7th pay commission formation in karnataka Headed by Sudhakar Rao Says CM Basavaraj Bommai

Comments are closed.