ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ದದ ರಾಸಲೀಲೆ CD ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಲಿ ದೂರನ್ನು ವಾಪಾಸ್ ಪಡೆದಿದ್ದಾರೆ.
ಮಾರ್ಚ್ 2 ರಂದು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ದ ದೂರನ್ನು ನೀಡಿದ್ದರು. ಕೆಲಸದ ಆಮಿಷವೊಡ್ಡಿ ಯುವತಿಯೊಂದಿಗೆ ರಾಸಲೀಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ದಿನೇಶ್ ಕಲ್ಲಹಳ್ಳಿ, ಇಂದು ದೂರನ್ನು ಹಿಂಪಡೆಯುತ್ತಿರುವುದಾಗಿ ಪತ್ರ ಬರೆದಿದ್ದಾರೆ. ತಮ್ಮ ವಕೀಲರ ಮೂಲಕ ಪೊಲೀಸ್ ಠಾಣೆಗೆ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ರವಾನೆ ಮಾಡಿದ್ದಾರೆ.
ತನ್ನದೇ ಲೆಟರ್ ಹೆಡ್ ನಲ್ಲಿ ದೂರು ವಾಪಾಸ್ ಪಡೆಯುತ್ತಿರೋದಾಗಿ ತಿಳಿಸಿರೋದು ತೀವ್ರ ಕುತೂಹಲವನ್ನು ಮೂಡಿಸಿದೆ. ರಾಸಲೀಲೆ ಪ್ರಕರಣದಲ್ಲಿ ಕಲ್ಲಹಳ್ಲಿ ಯೂ ಟರ್ನ್ ಹೊಡೆದ್ರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಆರಂಭದಲ್ಲಿ ದೂರು ನೀಡುವಾಗ ಯುವತಿಯ ಕುಟುಂಬಸ್ಥರು ಸಿಡಿ ನೀಡಿದ್ದರು ಎಂದು ಹೇಳಿಕೆ ನೀಡಲಾಗಿತ್ತು. ಆದರೆ ಕಳೆದೆರಡು ದಿನಗಳ ಹಿಂದೆ ಅಪರಿಚಿತರು ಸಿಡಿ ನೀಡಿದ್ದರು ಎನ್ನುವುದಾಗಿ ಕಲ್ಲಹಳ್ಳಿ ಹೇಳಿಕೆ ಕೊಟ್ಟಿದ್ದರು. ಇದೀಗ ದೂರು ವಾಪಾಸ್ ಪಡೆದಿರೋದು ತೀವ್ರ ಕುತೂಹಲವನ್ನು ಮೂಡಿಸಿದೆ.