ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ದಿನೇಶ್ ಕಲ್ಲಹಳ್ಳಿ ಉಲ್ಟಾ ಹೊಡೆದ್ರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದ್ದು, ಪೊಲೀಸರ ಮುಂದೆ ಗೊಂದಲಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಮಹಿಳೆಯೋರ್ವರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ರಾಸಲೀಲೆ ನಡೆಸಿದ್ದಾರೆನ್ನಲಾದ ಸಿಡಿ ಸ್ಪೋಟಗೊಳ್ಳುತ್ತಿದ್ದಂತೆಯೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ನೀಡುವ ವೇಳೆಯಲ್ಲಿ ಸಂತ್ರಸ್ತ ಮಹಿಳೆಯ ಕಡೆಯವರು ತನಗೆ ಸಿಡಿ ತಲುಪಿಸಿದ್ದಾರೆ. ಮಾರ್ಚ್ 1ರಂದು ರಾಮಕೃಷ್ಣ ಹೋಟೆಲ್ ನಲ್ಲಿ ನನಗೆ ಸಿಡಿ ನೀಡಿದ್ದರು ಎಂದಿದ್ದರು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದರೂ ಕೂಡ ತನಗೆ ಬೆದರಿಕೆಯಿದ್ದು, ಮಾರ್ಚ್ 9ರಂದು ನಾನು ವಿಚಾರಣೆಗೆ ಹಾಜರಾಗುವುದಾಗಿಯೂ ಹೇಳಿದ್ದರು.
ಆದ್ರಿಂದು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅದ್ರಲ್ಲೂ ದಿನೇಶ್ ಕಲ್ಲಹಳ್ಳಿ ಇಂದು ನೀಡಿರುವ ಹೇಳಿಕೆಗಳು ಅನುಮಾನವನ್ನು ಮೂಡಿಸಿದ್ದು, ತಾನು ಕೇವಲ 15 ನಿಮಿಷಗಳ ಕಾಲ ಮಾತ್ರವೇ ರಾಮಕೃಷ್ಣ ಹೋಟೆಲ್ ನಲ್ಲಿ ಇದ್ದಿದ್ದೆ. ಇನ್ನು ತನಗೆ ಸಿಡಿಯನ್ನು ಅಪರಿಚಿತರೋರ್ವರು ನೀಡಿದ್ದಾರೆ ಅಂತಾ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಆರಂಭದಲ್ಲಿ ಮಹಿಳೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತಾರೆ ಎಂದಿದ್ದ ದಿನೇಶ್ ಕಲ್ಲಹಳ್ಳಿ ಇದೀಗ ಸಿಡಿ ಕೊಟ್ಟವರೇ ಅಪರಿಚಿತರು ಅನ್ನೋ ಮೂಲಕ ಗೊಂದಲ ಮೂಡಿಸಿದೆ.