ಹೋಟೆಲ್ ನ 10 ಸಿಬ್ಬಂದಿಗಳಿಗೆ ಕೊರೊನಾ ಸೋಂಕು : ತಿಂಡಿ ತಿಂದವರಿಗಾಗಿ ಶುರುವಾಯ್ತು ಹುಡುಕಾಟ…!

ಮುಂಬೈ : ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಮುಂಬೈ ಅಕ್ಷರಶಃ ತತ್ತರಿಸಿದೆ. ಅದ್ರಲ್ಲೂ ಹೋಟೆಲ್ ವೊಂದರ 10 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರೋದು ತಲೆನೋವು ತರಿಸಿದ್ದು, ಹೋಟೆಲ್ ನಲ್ಲಿ ತಿಂಡಿ ತಿಂದವರಿಗಾಗಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ.

ಮಹಾರಾಷ್ಟ್ರದಾದ್ಯಂತ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಕೊರೊನಾ ಸೋಂಕು ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಮುಂಬೈ ನಗರದ ಎಸ್.ವಿ.ರಸ್ತೆಯಲ್ಲಿರುವ ರಾಧಾಕೃಷ್ಣ ರೆಸ್ಟೋರೆಂಟ್ ನಲ್ಲಿ ಒಟ್ಟು 35 ಮಂದಿ ಸಿಬ್ಬಂದಿಗಳಿದ್ದು, ಈ ಪೈಕಿ 10 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ರೆಸ್ಟೋರೆಂಟ್ ನಲ್ಲಿ 10 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಹೋಟೆಲ್ ನ್ನು ಸೀಲ್ ಡೌನ್ ಮಾಡಿದ್ದಾರೆ. ಉಳಿದ ಸಿಬ್ಬಂದಿಗಳ ಮೇಲೆಗೂ ನಿಗಾ ನಿರಿಸಿದ್ದಾರೆ. ಅಷ್ಟೇ ಅಲ್ಲಾ ರೆಸ್ಟೋರೆಂಟ್ ನಲ್ಲಿ ತಿಂಡಿ ತಿಂದಿರುವವರ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದು, ಕೊರೊನಾ ತಪಾಸಣೆ ಮಾಡಿಸಲು ಮುಂದಾಗಿದ್ದಾರೆ. ಇದೀಗ ರೆಸ್ಟೋರೆಂಟ್ ಗೆ ತಿಂಡಿ ಸವಿದವರಿಗೆ ತಲೆ ನೋವು ಶುರುವಾಗಿದೆ.

ಈ ನಡುವಲ್ಲೇ ರೆಸ್ಟೋರೆಂಟ್ ನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಕೊರೊನಾ ಸೋಂಕಿನ ಸಿಬ್ಬಂದಿಗಳನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಗೆ ಶಿಫ್ಟ್ ಮಾಡಲಾಗಿದೆ. ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿದ್ರೆ ಹೋಟೆಲ್ ತೆರೆಯಲು ಅವಕಾಶ ಕಲ್ಪಿಸುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.