ನವದೆಹಲಿ : ದೇಶದಲ್ಲಿ ಸದ್ಯದಲ್ಲಿಯೇ ನೋಟ್ ಬ್ಯಾನ್ ಆಗುತ್ತಂತೆ. 100 ರೂಪಾಯಿ, 10 ರೂಪಾಯಿ ಹಾಗೂ 5 ರೂಪಾಯಿಯ ನೋಟ್ ಗಳು ಬ್ಯಾನ್ ಆಗಲಿದ್ದು, ಪ್ರಧಾನಿ ಮೋದಿ ಈ ಕುರಿತು ಘೋಷಣೆ ಮಾಡ್ತಾರಂತೆ ಅನ್ನೋ ಕುರಿತು ಸುದ್ದಿಗಳು ಹರಡಿದಾಡುತ್ತಿದೆ. ಈ ಕುರಿತು ಆರ್ ಬಿಐ ಸ್ಪಷ್ಟನೆ ಕೊಟ್ಟಿದೆ.

2016ರಲ್ಲಿ ಆದ ನೊಟ್ ಬ್ಯಾಂಕ್ ನಿಂದಲೇ ಜನರು ಈಗಾಗಲೇ ಚೇತರಿಸಿಕೊಂಡಿಲ್ಲ. ಜೊತೆಗೆ ಕೊರೊನಾ ವೈರಸ್ ಸೋಂಕಿನಿಂದ ವಿಶ್ವವೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದೆ. ಇಂತಹ ಸ್ಥಿತಿಯಲ್ಲಿ ದೇಶದಲ್ಲಿ ನೋಟ್ ಬ್ಯಾನ್ ಆಗುತ್ತೆ ಅನ್ನೋ ಸುದ್ದಿ ಜನರಲ್ಲಿ ಆತಂಕವನ್ನು ಮೂಡಿಸಿದೆ. ಆದ್ರೀಗ ಆರ್ ಬಿಐ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ.

ದೇಶದಲ್ಲಿ ಎಪ್ರೀಲ್ ಮಾರ್ಚ್ ಬಳಿಕವೂ ಹಳೆಯ ನೋಟುಗಳು ಚಲಾವಣೆಯಲ್ಲಿರಲಿವೆ. ಈ ಕುರಿತು ದೇಶದ ಜನತೆ ಯಾವುದ ಕಾರಣಕ್ಕೂ ಚಿಂತಿಸುವುದು ಬೇಡಾ ಅಂತಾ ಆರ್ ಬಿಐ ಹೇಳಿದೆ. ಹರಿದ ಹಾಗೂ ಕೊಳೆಯಾದ ನೋಟು ಗಳು ಬ್ಯಾಂಕುಗಳಿಗೆ ಬಂದರೆ ಅಂತಹ ನೋಟುಗಳನ್ನು ಗ್ರಾಹಕರಿಗೆ ನೀಡಬೇಡಿ ಅಂತಾ ಹೇಳಿರೋ ಸುದ್ದಿಯನ್ನು ಮಾಧ್ಯಮಗಳು ತಿರುಚಿವೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಗೊಂದಲಗಳು ಸೃಷ್ಟಿಯಾಗಿರೋ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆಯನ್ನು ಕೊಟ್ಟಿದೆ.