(Risk Of Eating Rusk)ಸಾಮಾನ್ಯವಾಗಿ ಎಲ್ಲರ ದಿನಚರಿ ಪ್ರಾರಂಭವಾಗುವುದು ಚಹಾದೊಂದಿಗೆ. ಚಹಾ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಇದರೊಂದಿಗೆ ಬಿಸ್ಕೆಟ್, ಬನ್, ರಸ್ಕ್ ತಿನ್ನುಲು ಇಷ್ಟ ಪಡುತ್ತಾರೆ. ಹೆಚ್ಚಿನವರು ಚಹಾದ ಜೊತೆ ರಸ್ಕ್ ತಿನ್ನಲು ಇಷ್ಟ ಪಡುತ್ತಾರೆ. ರಸ್ಕ್ ತಕ್ಷಣಕ್ಕೆ ನಿಮ್ಮ ಹಸಿವು ನೀಗಿಸಿದರು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
Risk Of Eating Ruskರಸ್ಕ್ ಸೇವನೆಯ ಪರಿಣಾಮ
- ರಸ್ಕ್ ಸೇವನೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ
- ಹಾರ್ಮೋನುಗಳ ಬದಲಾವಣೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
- ದೇಹದಲ್ಲಿ ಕೊಬ್ಬು ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ
- ದೇಹದಲ್ಲಿ ಆಲಸ್ಯವನ್ನು ಉಂಟುಮಾಡುತ್ತದೆ.
ತಜ್ಞರ ಪ್ರಕಾರ, ಚಹಾ ಮತ್ತು ರಸ್ಕ್ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ದೇಹದಲ್ಲಿ ಉರಿಯೂತ ಸಮಸ್ಯೆ ಉಂಟುಮಾಡುತ್ತದೆ. ರಸ್ಕ್ ತಿನ್ನುವುದರಿಂದ ನಿಮ್ಮ ಕರುಳಿನ ಮೇಲೆ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆ ಆಗುತ್ತದೆ, ಜೀರ್ಣಕ್ರಿಯೆ ಸಮಸ್ಯೆ ಮತ್ತು ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಈ ರಸ್ಕ್ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:Raw Onion Benefits : ಹಸಿ ಈರುಳ್ಳಿ ತಿನ್ನುವುದರಿಂದಲೂ ಕಡಿಮೆ ಆಗುತ್ತೆ ಕೊಲೆಸ್ಟ್ರಾಲ್; ಹೇಗೆ ಗೊತ್ತಾ…
ಇದನ್ನೂ ಓದಿ:Omicron BF.7:ಕೋವಿಡ್ ಲಸಿಕೆ ಪಡೆದಿದ್ದರೂ ಎಚ್ಚರ ಅಗತ್ಯ; ಇಲ್ಲವಾದ್ರೆ ಬಿಎಫ್.7 ಗೆ ಬಲಿಯಾಗ್ತೀರಾ..!!
ರಸ್ಕ್ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳಿಂದ ಹಾನಿ ಹೇಗೆ?
- ಸಂಸ್ಕರಿಸಿದ ಗೋಧಿ ಹಿಟ್ಟಿನ ತಯಾರಿಕೆಯ ಹಂತದಲ್ಲಿ ಇದರಲ್ಲಿ ಇರುವಂತಹ ಜೀವಸತ್ವಗಳು ಮತ್ತು ಖನಿಜಗಳನ್ನು ಕಡಿಮೆ ಆಗುತ್ತದೆ. ಮತ್ತು ಫೈಬರ್ ಅಂಶದ ಕೊರತೆ ಇರುತ್ತದೆ. ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದ ಅಂಶ ಸಿಗುವುದಿಲ್ಲ. ಹಾಗೂ ಗೋಧಿ ಹಿಟ್ಟು ಸಂಸ್ಕರಿಸಿ ಇಡುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
- ಸ್ವಲ್ಪ ಸಿಹಿ ರುಚಿ ಭರಿಸುವುದಕ್ಕೆ ರಸ್ಕ್ ತಯಾರಿಕೆಯಲ್ಲಿ ಸಕ್ಕರೆ ಬಳಸಲಾಗುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.
- ರಸ್ಕ್ ಕರಿಯಲು ಬಳಸುವಂತಹ ಎಣ್ಣೆ ಪದೇ ಪದೇ ಬಳಕೆ ಮಾಡುವುದರಿಂದ ನಿಮ್ಮ ಆರೋಗ್ಯ ಕೇಡುವಂತೆ ಮಾಡುತ್ತದೆ. ಮತ್ತು ಉರಿಯೂತ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
- ರಸ್ಕ್ ತಯಾರಿಸಲು ಬಳಸುವಂತಹ ರವೆಯನ್ನು ಗೋಧಿಯಿಂದ ತಯಾರಿಸಲಾಗುತ್ತದೆ. ರವೆಯಲ್ಲಿ ಯಾವುದೇ ನಾರಿನಂಶ ಮತ್ತು ಪೋಷಕಾಂಶಗಳು ಇರುವುದಿಲ್ಲ. ಹಾಗಾಗಿ ನಿಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳ ಕೊರತೆ ಆಗುತ್ತದೆ. ಮತ್ತು ರಸ್ಕ್ ಕೆಡದೆ ಹೆಚ್ಚು ದಿನಗಳ ಕಾಲ ಬರಲು ರಾಸಾಯನಿಕ ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಇದನ್ನೂ ಓದಿ:Children Eat Soil:ನಿಮ್ಮ ಮಕ್ಕಳಿಗೆ ಮಣ್ಣು ತಿನ್ನುವ ಹವ್ಯಾಸವೇ ? ಹಾಗಿದ್ದರೆ ಇದನ್ನು ಹೇಗೆ ಬಿಡಿಸುವುದು
Risk to your health if you have a habit of eating rusk with tea!