(Roasted Chestnuts Benefits) ಚೆಸ್ಟ್‌ನಟ್‌ಗಳು ರುಚಿಯಲ್ಲಿ ರುಚಿಕರವಾಗಿರುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಡಲೆಕಾಯಿ ಮತ್ತು ವಾಲ್‌ನಟ್‌ಗಳಂತಹ ಬೀಜಗಳಿಗೆ ಹೋಲಿಸಿದರೆ ಚೆಸ್ಟ್‌ನಟ್‌ಗಳು ಕೊಬ್ಬನ್ನು ಕಡಿಮೆ ಹೊಂದಿರುತ್ತವೆ. ಅವು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಚೆಸ್ಟ್‌ನಟ್‌ಗಳು ಮ್ಯಾಂಗನೀಸ್‌ನ ಆಗರವಾಗಿದ್ದು, ಮೂಳೆಗಳನ್ನು ಬಲಗೊಳಿಸುತ್ತದೆ. ಅಲ್ಲದೇ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಯಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರುಚಿಯಲ್ಲಿ ಕುರುಕಲು ಮಾತ್ರವಲ್ಲ, ಅದರ ಆರೋಗ್ಯ ಪ್ರಯೋಜನಗಳು ಸಹ ಹಲವು.
ಹುರಿದ ಚೆಸ್ಟ್‌ನಟ್‌ಗಳ ಆರೋಗ್ಯ ಪ್ರಯೋಜನಗಳು:
ಚೆಸ್ಟ್‌ನಟ್‌ಗಳು ಗ್ಯಾಲಿಕ್ ಮತ್ತು ಎಲಾಜಿಕ್ ಆಮ್ಲವನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಿ ನಿಮ್ಮ ಜೀವಕೋಶಗಳು ಇನ್ಸುಲಿನ್‌ಗೆ ಹೆಚ್ಚು ಸ್ಪಂದಿಸುವಂತೆ ಮಾಡುತ್ತದೆ. ಜೊತೆಗೆ, ಚೆಸ್ಟ್‌ನಟ್ ಫೈಬರ್‌ನ ಉತ್ತಮ ಮೂಲವಾಗಿದ್ದು ಅದು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಚೆಸ್ಟ್‌ನಟ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿನ ವಿಟಮಿನ್ ಸಿ, ಗ್ಯಾಲಿಕ್ ಆಮ್ಲ, ಎಲಾಜಿಕ್ ಆಮ್ಲ ಮತ್ತು ವಿವಿಧ ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚೆಸ್ಟ್ ನಟ್ ಫೈಬರ್ ನ ಉತ್ತಮ ಮೂಲವಾಗಿದ್ದು, ಇದು ಜೀರ್ಣ ಸಮಸ್ಯೆಯನ್ನು ಬೆಂಬಲಿಸುತ್ತದೆ. ಇದರಲ್ಲಿನ ಫೈಬರ್ ಸಹ ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸಿ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Fruit Vs Fruit Juice : ಯಾವುದು ಬೆಸ್ಟ್? ತಾಜಾ ಹಣ್ಣುಗಳಾ ಅಥವಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್
ಚೆಸ್ಟ್‌ನಟ್ ಗ್ಯಾಲಿಕ್ ಮತ್ತು ಎಲಾಜಿಕ್ ಆಮ್ಲದಂತಹ ಪಾಲಿಫಿನಾಲ್‌ಗಳ ಮೂಲವಾಗಿರುವುದರಿಂದ, ಇದು ಹೃದಯವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ ಚೆಸ್ಟ್ ನಟ್ ನಲ್ಲಿನ ಪೊಟ್ಯಾಸಿಂ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
Roasted Chestnuts Benefits: Get many health benefits by using chestnuts in your daily diet