ಅಮರ್ ಬಳಿಕ ಬ್ಯಾಡ್ ಮ್ಯಾನರ್ಸ್ ಮೂಲಕ ತೆರೆಗೆ ಬರ್ತಿರೋ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ನಾಯಕಿ ಯಾರು ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೈತುಂಬ ಚಿತ್ರಗಳಿದ್ದರೂ ಬ್ಯಾಡ್ ಮ್ಯಾನರ್ಸ್ ಗೆ ಯೆಸ್ ಎಂದಿರೋ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಅಭಿಷೇಕ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಅಭಿಷೇಕ್ ಅಂಬರೀಶ್ ನಟನೆಯ ಎರಡನೇ ಚಿತ್ರ ಬ್ಯಾಡ್ ಮ್ಯಾನರ್ಸ್ ಗೆ ಈಗಾಗಲೇ ಮೈಸೂರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಮುಹೂರ್ತ ನೆರವೇರಿದ್ದು, ಚಿತ್ರತಂಡ ಮಂಡ್ಯದಲ್ಲಿ ಶೂಟಿಂಗ್ ಆರಂಭಿಸಿದೆ. ಈಗ ಅಭಿಷೇಕ್ ಗೆ ನಾಯಕಿಯಾಗಿ ರಚಿತಾರಾಮ್ ಆಯ್ಕೆಯಾಗಿದ್ದು, ಚಿತ್ರತಂಡ ಘೋಷಿಸಿದೆ.

ರಚಿತಾರಾಮ್ ಅಭಿಷೇಕ್ ಅಂಬರೀಶ್ ಮೊದಲ ಚಿತ್ರ ಅಮರ್ ಸಿನಿಮಾದಲ್ಲೂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಬ್ಯಾಡ್ ಮ್ಯಾನರ್ಸ್ ನಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಜೊತೆ ಕಿರುತೆರೆ ಬೆಡಗಿ ಪ್ರಿಯಾಂಕಾ ಕೂಡ ಇನ್ನೊರ್ವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸುಕ್ಕ ಸೂರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬ್ಯಾಡ್ ಮ್ಯಾನರ್ಸ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಕೋರಿದ್ದಾರೆ.

ಶರತ್ ಲೋಹಿತಾಶ್ವ, ತಾರಾ ಸೇರಿದಂತೆ ಅದ್ದೂರಿ ತಾರಾಗಣವಿರುವ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಲುಕ್ ಹೇಗಿರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.