5 ವಯಸ್ಸಿನಿಂದಲೂ ನನಗೊಂದು ಕಾಯಿಲೆ ಇದೆ….! ನಟಿ ಕಾಜಲ್ ಅಗರವಾಲ್ ಬೋಲ್ಡ್ ಟಾಕ್….!!

ಸಿನಿಮಾ ನಟಿಯರು ತಮ್ಮ ಸಮಸ್ಯೆಗಳನ್ನು, ಕೊರತೆಗಳನ್ನು ಮುಚ್ಚಿಟ್ಟುಕೊಳ್ಳೋಕೆ ಹರಸಾಹಸ ಮಾಡ್ತಾರೆ. ತಮ್ಮ ಸಮಸ್ಯೆಗಳು ಬಹಿರಂಗವಾದ್ರೆ ಎಲ್ಲಿ ಅವಕಾಶಗಳು ಕೈತಪ್ಪಿ ಹೋಗತ್ತೋ ಅಂತ ಆತಂಕ ಪಡ್ತಾರೆ. ಆದರೇ ಇದಕ್ಕೆ ಅಪವಾದವೆಂಬಂತೆ ಬಹುಭಾಷಾ ನಟಿ  ಕಾಜಲ್ ಅಗರವಾಲ್ ತಮಗೆ ಬಾಲ್ಯದಿಂದಲೂ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ನನಗೆ 5 ವರ್ಷದಿಂದಲೇ ಶ್ವಾಸನಾಳದ  ಅಸ್ತಮಾ ಇದೆ ಎಂದಿರುವ ಕಾಜಲ್ಅಗರವಾಲ್ ಅದಕ್ಕಾಗಿ ತಾನು ಅನುಭವಿಸಿದ ಮುಜುಗರ, ಸಮಸ್ಯೆಗಳನ್ನು  ಮುಕ್ತವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನಗೆ 5 ವರ್ಷವಾದಾಗ ನನಗೆ ಶ್ವಾಸಕೋಶದ ಅಸ್ತಮಾ ಇರುವ ಸಂಗತಿ ಬೆಳಕಿಗೆ ಬಂತು. ತಕ್ಷಣವೇ ನನ್ನ ಆಹಾರದ ಮೇಲೆ ನಿಯಂತ್ರಣ ಹೇರಲಾಯಿತು ಎಂದಿದ್ದಾರೆ.

ನಾನಿನ್ನು ಚಿಕ್ಕವಳು. ನನಗೂ ಎಲ್ಲರಂತೆ ಐಸ್ ಕ್ರೀಂ, ಚಾಕ್ಲೆಟ್ ತಿನ್ನಬೇಕು ಎನ್ನಿಸುತ್ತಿತ್ತು. ಆದರೆ ಆಸ್ತಮಾ ಕಾರಣಕ್ಕೆ ನಾನು ಅವೆಲ್ಲವನ್ನೂ ತಿನ್ನದಂತೆ ನಿರ್ಬಂಧಿಸಲಾಗಿತ್ತು. ಪ್ರತಿ ಚಳಿಗಾಲದಲ್ಲೂ  ಧೂಳು, ಮಾಲಿನ್ಯದಿಂದ ನನ್ನ   ಉಸಿರಾಟದ ಸಮಸ್ಯೆ ಉಲ್ಬಣಿಸುತ್ತಿತ್ತು. ಹೀಗಾಗಿ ನಾನು ಅನಿವಾರ್ಯವಾಗಿ ಇನ್ ಹೇಲರ್ ಮೊರೆ ಹೋದೆ ಎಂದಿದ್ದಾರೆ.

ಇನ್ ಹೇಲರ್ ನಿಂದ ನನ್ನ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ನಾನು ಈಗ ಸದಾ ನನ್ನೊಂದಿಗೆ ಇನ್ ಹೇಲರ್ ಕೊಂಡೊಯ್ಯುತ್ತೇನೆ.  ಇದೇ ಕಾರಣಕ್ಕೆ ನನ್ನನ್ನು ಕೆಲವರು ಕುಹಕವಾಡಿದ್ದಾರೆ. ಅನ್ಯಗ್ರಹದ ಪ್ರಾಣಿಯಂತೆ ನೋಡಿದ್ದಾರೆ. ಆದರೆ ನಾನು ಇದಕ್ಕೆಲ್ಲ ಚಿಂತಿಸುವುದನ್ನು ಹಾಗೂ ಬೇಸರ ಮಾಡಿಕೊಳ್ಳುವುದನ್ನು ಬಿಟ್ಟಿದ್ದೇನೆ ಎಂದಿದ್ದಾರೆ.

ಅಷ್ಟೇ ಅಲ್ಲ ನಾನು ಧೈರ್ಯವಾಗಿ ನನ್ನೊಂದಿಗೆ ಇನ್ ಹೇಲರ್ ಕೊಂಡೊಯ್ಯುತ್ತೇನೆ ಮತ್ತು ಯಾವುದೇ ಕೀಳರಿಮೆ ಇಲ್ಲದೇ ಅದನ್ನು ಬಳಸುತ್ತೇನೆ. ನನ್ನ ಕೈಯಲ್ಲಿ ಇನ್ ಹೇಲರ್ ನೋಡಿ ಹಲವರು ಹಲವು ಪ್ರಶ್ನೆ ಕೇಳಿದ್ದಾರೆ. ದೇಶದಲ್ಲಿ ಲಕ್ಷಾಂತರ ಜನರಿಗೆ ಇನ್ ಹೇಲರ್ ಅಗತ್ಯವಿದೆ. ಆದರೆ ಹಲವರು ಇದನ್ನು ಬಳಸಲು ಮುಜುಗರ ಪಡುತ್ತಾರೆ.

ಆದರೆ ನಾನು ಹೇಳುತ್ತೇನೆ.  ನೀವು ಇನ್ ಹೇಲರ್ ಬಳಸಲು ಯಾವುದೇ ರೀತಿ ಮುಜುಗರ ಪಡಬೇಡಿ.  ಜನರಿಗೂ ಮನವಿ ಮಾಡುತ್ತೇನೆ. ಅಸ್ತಮಾ ರೋಗಿಗಳು ಇನ್ ಹೇಲರ್ ಬಳಸುವುದನ್ನು ನೋಡಿ ನೀವು ಬೇರೆ ರೀತಿಯಲ್ಲಿ ವರ್ತಿಸಬೇಡಿ. ಅದು ಅವರ ಜೀವರಕ್ಷಕ ಎಂಬುದನ್ನು ಅರಿಯಿರಿ.

ಇಂದು ನಾನು ಎಂದು  ಹೇಳುತ್ತಿದ್ದೇನೆ. ಹಾಗೇ ಈ ಅಭಿಯಾನದಲ್ಲಿ  ಕೈ ಜೋಡಿಸಿ ಎಂದು ನನ್ನ ಸ್ನೇಹಿತರು, ಪಾಲೋವರ್ಸ್,ಕುಟುಂಬದವರಿಗೂ ಮನವಿ ಮಾಡುತ್ತೇನೆ.

ಅಸ್ತಮಾ ರೋಗಿಗಳಿಗೆ ಎಲ್ಲರ  ಬೆಂಬಲದ ಅಗತ್ಯವಿದೆ ಎಂದು ಮುಕ್ತವಾಗಿ  ಕಾಜಲ್ ಅಗರವಾಲ್ ಹೇಳಿಕೊಂಡಿದ್ದಾರೆ.

Comments are closed.