ನಟ ಉಪೇಂದ್ರ ನಟನೆಗೆ ಮುನ್ನವೇ ಕನ್ನಡಿಗರಿಗೆ ಆಪ್ತವಾಗಿದ್ದು ನಿರ್ದೇಶನದಮೂಲಕ. ಶ್ , ಉಪೇಂದ್ರದಂತಹ ಸಿನಿಮಾ ನೀಡಿದ ರಿಯಲ್ ಸ್ಟಾರ್ ಉಪ್ಪಿ ಮತ್ತೆ ಆಕ್ಷ್ಯನ್ ಕಟ್ ಹೇಳಲು ಸಿದ್ಧವಾಗಿದ್ದು, ಲಾಕ್ ಡೌನ್ ನಲ್ಲಿ ಹಲವು ಕತೆ ಹೆಣೆದಿದ್ದು ಸದ್ಯವೇ ನಿರ್ದೇಶನಕ್ಕೆ ಮರಳುತ್ತೇನೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿನ ಉಪೇಂದ್ರ,ಲಾಕ್ ಡೌನ್ ನಲ್ಲಿ ಹಲವು ಕತೆ ಸಿದ್ಧಪಡಿಸಿದ್ದೇನೆ. ಅದರಲ್ಲಿ ಒಂದು ಇಂಟ್ರಸ್ಟಿಂಗ್ ಹಾಗೂ ಥ್ರಿಲ್ಲಿಂಗ್ ಕತೆ ಸಿಕ್ಕಿದೆ. ಸದ್ಯದಲ್ಲೇ ನಿರ್ದೇಶನಕ್ಕೆ ಮರಳುತ್ತೇನೆ ಎಂದಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಲಗಾಮ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದು, ಇದಾದ ಬಳಿಕ ಆರ್.ಚಂದ್ರು ನಿರ್ದೇಶನದ ಕಬ್ಜ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತೇನೆ. ಈಗಾಗಲೇ ಕಬ್ಜಕ್ಕಾಗಿ ಸೆಟ್ ಗಳು ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಳ್ಳುತ್ತೇನೆ ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ.

ಪ್ರಜಾಕೀಯದ ಚಟುವಟಿಕೆಗಳ ಬಗ್ಗೆಯೂ ಮಾತನಾಡಿದ ಉಪೇಂದ್ರ, ಪ್ರಜಾಕೀಯದಲ್ಲಿ ಜನರೇ ಹೈಕಮಾಂಡ್. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪ್ರಜಾಕೀಯದ ಸಿದ್ಧಾಂತ, ಉದ್ದೇಶ ಮನೆ ಮನೆಗೂ ತಲುಪಬೇಕೆಂಬ ಆಸೆ ಇದೆ. ಅದಕ್ಕಾಗಿ ಕರ್ನಾಟಕದಾದ್ಯಂತ ಮನೆ ಮನೆಗೂ ಯಾತ್ರೆ ಆಯೋಜಿಸಲಿದ್ದೇನೆ.