ಸೋಮವಾರ, ಏಪ್ರಿಲ್ 28, 2025
HomeBreakingಕಾಫಿನಾಡಿನ ಸುಂದರಿ, ಪರಮಾತ್ಮಾ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ…!

ಕಾಫಿನಾಡಿನ ಸುಂದರಿ, ಪರಮಾತ್ಮಾ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ…!

- Advertisement -

ಬಬ್ಲಿ ಆಕ್ಟಿಂಗ್ ಮತ್ತು ಮುಗ್ಧ ಮುಖದಿಂದಲೇ ಸ್ಯಾಂಡಲ್ ವುಡ್ ನಲ್ಲಿ ಮೆಚ್ಚುಗೆ ಗಳಿಸಿದ ಕಾಫಿನಾಡಿನ ಸುಂದರಿ ದೀಪಾ ಸನ್ನಿಧಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ದೀಪಾ ಸದ್ಯ ಹೊಸ ಚಿತ್ರಕ್ಕಾಗಿ ಕಾದಿದ್ದಾರೆ.

ಚಿಕ್ಕಮಗಳೂರಿನ ಕಾಫಿ ಎಸ್ಟೆಟ್ ಮಾಲೀಕರ ಮಗಳಾಗಿ ಜನಿಸಿದ ದೀಪಾ ಸನ್ನಿಧಿ ವೃತ್ತಿಯಲ್ಲಿ ಇಂಜೀನಿಯರಿಂಗ್ ಪದವೀಧರೆ. ಓದೋ ಕಾಲದಲ್ಲೇ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದರೂ ಪದವಿಗಾಗಿ ಸಿನಿಮಾ ಬಿಟ್ಟ ಹುಡುಗಿ ದೀಪಾ ಸನ್ನಿಧಿ.

ಮಾಡೆಲ್ ಆಗಿರೋ ದೀಪಾ ಸನ್ನಿಧಿ 2011 ರಲ್ಲಿ ಸಾರಥಿ ಸಿನಿಮಾದಲ್ಲಿ ದಚ್ಚುಗೆ ಜೋಡಿಯಾಗೋ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದಾಚೆಗೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ ದೀಪಾ, ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.

ಪರಮಾತ್ಮಾ ಸಿನಿಮಾ ದೀಪಾ ನಟನೆಗೆ ಫುಲ್ ಮಾರ್ಕ್ಸ್ ತಂದು ಕೊಟ್ಟಿದ್ದು, ಕೊನೆಯದಾಗಿ ಚೌಕ್ ಹಾಗೂ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದ್ದು, ಸದ್ಯ ಹೊಸ ಚಿತ್ರಗಳಿಗಾಗಿ ಕಾದಿದ್ದಾರೆ.

ಸುವರ್ಣ ಅವಾರ್ಡ್ ಹಾಗೂ ಬೆಂಗಳೂರು ಟೈಂ ಮೋಸ್ಟ್ ಪ್ರಾಮಿಸಿಂಗ್ ಡೆಬ್ಯು ಆಕ್ಟರೆಸ್  ಗೌರವಕ್ಕೂ ದೀಪಾ ಸನ್ನಿಧಿ ಪಾತ್ರರಾಗಿದ್ದಾರೆ.

RELATED ARTICLES

Most Popular