ಒಂದು ಕಾಲದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಸದ್ಯ ಚಿತ್ರರಂಗದಿಂದ ದೂರವಾಗಿದ್ದರೂ ಸೋಷಿಯಲ್ ಮೀಡಿಯಾದಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಅಪ್ಡೇಟ್ ಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸುವ ರಮ್ಯ, ತಮ್ಮ ಮದುವೆಗೆ ಯಾರು ಬರಲ್ಲ ಅಂತ ಹೇಳಿದ್ದಾರೆ. ಇದಕ್ಕೆ ಕಾರಣವೇನು ಓದಿ.

ಸದ್ಯ ನಟನೆ ಹಾಗೂ ರಾಜಕೀಯ ಎರಡರಿಂದಲೂ ಬ್ರೇಕ್ ಪಡೆದಿರುವ ರಮ್ಯ ಎಲ್ಲಿದ್ದಾರೆ ಯಾರಿಗೂ ಗೊತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾ ಅವರ ಖಾಯಂ ವಿಳಾಸವಾಗಿದೆ. ಇತ್ತೀಚಿಗೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ರಮ್ಯ ಹಲವು ಸಂಗತಿ ಹಂಚಿಕೊಂಡಿದ್ದಾರೆ.

ನಿಮ್ಮ ಫೆವರಿಟ್ ಫುಡ್ ಯಾವುದು ಎಂಬ ಪ್ರಶ್ನೆಗೆ ಉತ್ತರ ಕರ್ನಾಟಕದ ಬದನೆಕಾಯಿ ಎಂದಿರುವ ರಮ್ಯ, ಮುಂದಿನ ಬರ್ತಡೇಗೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ 39 ನೇ ವಯಸ್ಸಿನ ಬರ್ತಡೆಗೆ ಏನು ಮಾಡಲು ಸಾಧ್ಯ? ಕೇಕ್ ತಿನ್ನಬಹುದು ಎಂದಿದ್ದಾರೆ.

ಅಷ್ಟೇ ಅಲ್ಲ ಸ್ನೇಹಿತರ ಮದುವೆಗೆ ಹೋಗಲು ನನಗೆ ಬೇಸರ. ಯಾರು ಹೋಗುತ್ತಾರೆ ಎಂದ ಉದಾಸೀನ. ಅದಕ್ಕಾಗಿ ಅಮ್ಮ ನೀನು ಯಾರ ಮದುವೆಗೂ ಹೋಗದಿದ್ದರೇ, ನಿನ್ನ ಮದುವೆಗೂ ಯಾರು ಬರಲ್ಲ ಎನ್ನುತ್ತಿದ್ದರು ಎಂದಿದ್ದಾರೆ.

ಆದರೆ ಎಲ್ಲೂ ಕೂಡ ರಮ್ಯ ಮದುವೆಯಾಗುತ್ತಾರಾ? ಆಗೋದಾದರೇ ಯಾವಾಗ ಅನ್ನೋ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಸ್ನೇಹಿತರೆಂದರೇ ಇಷ್ಟ ಎಂದಿರುವ ರಮ್ಯ ಸ್ನೇಹಿತರ ಬರ್ತಡೆಗೆ ಮರೆಯದೇ ಹೂವಿನ ಬೊಕ್ಕೆ ಕಳುಹಿಸುತ್ತೇನೆ ಎಂದಿದ್ದಾರೆ.

ಆದರೆ ಅಭಿಮಾನಿಗಳ ಸೆಲೆಕ್ಟೆಡ್ ಪ್ರಶ್ನೆಗೆ ಮಾತ್ರ ಉತ್ತರಿಸಿದ ರಮ್ಯ, ಮದುವೆ ಯಾವಾಗ? ನಟನೆಗೆ ಮರಳುತ್ತಾರಾ? ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಾರಾ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿಯೂ ಕೇಳಿಸದಂತೆ ನಾಟಕವಾಡಿದ್ದಾರೆ.
https://instagram.com/divyaspandana?utm_medium=copy_link
ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಮ್ಯ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಿಂದ ದೂರವಾದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಕಾಂಗ್ರೆಸ್, ಕರ್ನಾಟಕದಿಂದಲೂ ದೂರವಾಗಿದ್ದು, ಕೇವಲ ನೆಟ್ಟಿಗರ ಪಾಲಿಗೆ ರಮ್ಯ ಕಾಣಸಿಗುತ್ತಾರೆ.
.