ಕೊರೋನಾ ಎರಡನೇ ಅಲೆಯಿಂದ ಲಾಕ್ ಡೌನ್ ಘೋಷಣೆಯಾಗಿದ್ದು, ದೇಶದಾದ್ಯಂತ ಮನೋರಂಜನಾ ಕ್ಷೇತ್ರ ಬಾಗಿಲು ಮುಚ್ಚಿದೆ. ಹೀಗಾಗಿ ಮನೆಯಲ್ಲೇ ಬಿಡುವಿನ ಸಮಯ ಕಳೆಯುತ್ತಿರೋ ನಟಿಮಣಿಯರು ಹಾಟ್ ಹಾಟ್ ಪೋಟೋಗಳ ಜೊತೆ ಗಮನ ಸೆಳೆಯುತ್ತಿದ್ದು, ಈಗ ಸ್ವಲ್ಪ ತೋರಿಸಿ ಸ್ವಲ್ಪ ಮುಚ್ಚಿಡಿ ಎನ್ನುತ್ತ ಅಧ್ಯಕ್ಷ ಬೆಡಗಿ ಹೆಬಾ ಪಟೇಲ್ ಗಮನ ಸೆಳೆದಿದ್ದಾರೆ.

ತಮ್ಮ ಬೋಲ್ಡ್ ನುಡಿ ಹಾಗೂ ಹಾಟ್ ಹಾಟ್ ಪೋಟೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ ನಟಿ ಹೆಬಾ ಪಟೇಲ್ ಸ್ವಲ್ಪ ಮುಚ್ಚಿಡಿ ಸ್ವಲ್ಪ ತೋರಿಸಿ ಎನ್ನುತ್ತ ಮೈಮಾಟ ಪ್ರದರ್ಶಿಸುವ ಪೋಟೋ ಹಂಚಿಕೊಂಡಿದ್ದಾರೆ.

https://www.instagram.com/p/CP7cCefDSZW/?utm_medium=copy_link
ಇನ್ ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಹೆಬಾ ಪಟೇಲ್, ಸಾಕಷ್ಟು ಪೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಪೋಟೋಗಳ ಜೊತೆ ಆಕರ್ಷಕ ಕ್ಯಾಪ್ಸನ್ ಗಳನ್ನು ಬರೆಯೋ ಹೆಬಾ, ಇನ್ನಷ್ಟು ಪೋಟೋದ ಜೊತೆ ನಾನು ಉಡುಗೆಯನ್ನು ಹಾಗೂ ಹೊರಗೆ ಹೋಗುವುದನ್ನು ಕಡಿಮೆ ಮಾಡಿದ್ದೇನೆ ಎಂದು ಬರೆದಿದ್ದಾರೆ.

ಹೆಬಾ ಹಂಚಿಕೊಂಡಿರೋ ಬೋಲ್ಡ್ ಆಂಡ್ ಬ್ಯುಟಿಫುಲ್ ಪೋಟೋಗಳಿಗೆ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಲೈಕ್ ಒತ್ತಿದ್ದು ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಟ ಶರಣ್ ಜೊತೆ ನಾಯಕಿಯಾಗಿ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ ಹೈದ್ರಾಬಾದ್ ಮೂಲಕ ಹೆಬಾ ಪಟೇಲ್ ಸಧ್ಯ ಸೋಷಿಯಲ್ ಮೀಡಿಯಾದ ಸೆಂಟ್ರಲ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.