ಸೋಮವಾರ, ಏಪ್ರಿಲ್ 28, 2025
HomeBreakingಲವ್ ಯೂ ರಚ್ಚು ಎಂದ ಕೃಷ್ಣ….! ಹೊಸ ಪ್ರಪೋಸಲ್ ಗೆ ನಾಚಿ ನೀರಾದ ಡಿಂಪಲ್ ಬೆಡಗಿ…!!

ಲವ್ ಯೂ ರಚ್ಚು ಎಂದ ಕೃಷ್ಣ….! ಹೊಸ ಪ್ರಪೋಸಲ್ ಗೆ ನಾಚಿ ನೀರಾದ ಡಿಂಪಲ್ ಬೆಡಗಿ…!!

- Advertisement -

ಸ್ಯಾಂಡಲ್ವುಡ್ ಒಂದೊಂದೆ ಚಿತ್ರಗಳು ತೆರೆ ಕಾಣಲು ಸಿದ್ಧವಾಗುತ್ತಿರುವಂತೆಯೇ ಇನ್ನೊಂದೆಡೆ ಒಂದೊಂದೆ ಚಿತ್ರಗಳು ಶೂಟಿಂಗ್, ಪ್ರೊಡಕ್ಷನ್ ಹೀಗೆ ನಾನಾಚಟುವಟಿಕೆಯಲ್ಲಿ ಬ್ಯುಸಿಯಾಗ ತೊಡಗಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಬೆಡಗಿಗೆ ಲವ್ ಯೂ ರಚ್ಚು ಅನ್ನೋ ಹೊಸ ಪ್ರಪೋಷಲ್ ಬಂದಿದೆ.

ಚಂದನವನದ ಅತ್ಯಂತ ಬೇಡಿಕೆಯ ನಟಿ ಎನ್ನಿಸಿರುವ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ರಿಯಾಲಿಟಿ ಶೋದ ಜಡ್ಜ್ಮೆಂಟ್ ನಲ್ಲೂ ಬ್ಯುಸಿಯಾಗಿರೋ ರಚಿತಾ ರಾಮ್ ಗೆ ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ಲವ್ ಯೂ ರಚ್ಚು ಎಂದಿದ್ದಾರೆ. ಇದಕ್ಕೆ ರಚಿತಾ ರಾಮ್ ಕೂಡ ಜೈ ಎಂದಿದ್ದಾರೆ.

ಇದೇನು ಹೊಸ ಕತೆ ಅಂದ್ರಾ….ರಚಿತಾ ರಾಮ್ ಹಾಗೂ ಅಜಯ್ ರಾವ್ ಜೊತೆಯಾಗಿ ನಟಿಸಲಿರೋ ಹೊಸ ಚಿತ್ರದ ಹೆಸರು ಲವ್ ಯೂ ರಚ್ಚು. ಕತೆ ಕೇಳಿ ಫುಲ್ ಇಂಪ್ರೆಸ್ ಆದ ರಚಿತಾ ರಾಮ್ ಈ ಪ್ರಾಜೆಕ್ಟ್ ಗೆ ತುಂಬ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ.

ಖ್ಯಾತ ನಿರ್ದೇಶಕ ಶಶಾಂತ್ ಚಿತ್ರಕಥೆ ಬರೆದಿದ್ದು, ಹೊಸ  ನಿರ್ದೇಶಕ ಶಂಕರ್ ರಾಜ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಗುರುದೇಶಪಾಂಡೆ ಸಿನಿಮಾ ನಿರ್ಮಿಸುತ್ತಿದ್ದು,  ಈ ತಂಡದ ಜೊತೆ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದಿದ್ದಾರೆ ನಟಿ ರಚಿತಾರಾಮ್.

ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿರುವ  ಈ ಕತೆಯಲ್ಲಿ ಅಜಯ್ ರಾವ್  ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,  ಅಭಿಮಾನಿಗಳು  ಕಾತುರರಾಗಿ ಕಾಯುತ್ತಿದ್ದಾರೆ.

RELATED ARTICLES

Most Popular