ಪೊಗರುದಸ್ತಾಗಿ ಕೂಲಿಂಗ್ ಗ್ಲಾಸ್ ಹಾಕಿ…! ಸಿನಿಮಾ ನೋಡಿ…! ಅಭಿಮಾನಿಗಳಿಗೆ ಧ್ರುವ್ ಸರ್ಜಾ ಸಂದೇಶ…!!

ಸಂಕ್ರಾಂತಿ ಬಳಿಕ ಸಾಲು-ಸಾಲು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದೆ. ಈ ಪೈಕಿ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಪೊಗರು ಸಖತ್ ಹವಾ ಸೃಷ್ಟಿಸಿದೆ. ಈ ಚಿತ್ರದ ಬಗ್ಗೆ ವಿವರಣೆ ನೀಡಿರೋ ನಟ ಧ್ರುವ್ ಸರ್ಜಾ ಕೂಲಿಂಗ್ ಗ್ಲಾಸ್ ಹಾಕ್ಕೊಳ್ಳಿ ಎನ್ನೋ ಸ್ಪೆಶಲ್ ಸಂದೇಶ ನೀಡಿದ್ದಾರೆ.

ಮೊದಲೆಲ್ಲ ಸಿನಿಮಾ ಬಗ್ಗೆ ಮಾತಾಡೋಕೆ ಸುದ್ದಿಗೋಷ್ಠಿ ಮಾಡ್ತಿದ್ದ ನಟ-ನಟಿಯರು, ನಿರ್ದೇಶಕರು ಈಗ ಸೋಷಿಯಲ್ ಮೀಡಿಯಾ ಮೊರೆ ಹೋಗ್ತಿದ್ದಾರೆ.  ಅಷ್ಟೇ ಸೋಷಿಯಲ್ ಮೀಡಿಯಾ ಕೂಡ ಸಿನಿಮಾ ಪ್ರಿಯರನ್ನು ರಂಜಿಸಲು ಮುಂದಾಗಿವೆ. ಇನ್ ಸ್ಟಾಗ್ರಾಂನಲ್ಲಿ ರಿಲೀಸ್ ಗೆ ಸಿದ್ಧವಾಗಿರೋ ಪೊಗರು ಸಿನಿಮಾಕ್ಕಾಗಿ ಹೊಸ ಇಮೋಜಿ ರಿಲೀಸ್ ಆಗಿದೆ.

ಪೊಗರು ಕೂಲಿಂಗ್ ಗ್ಲಾಸ್  ಜೊತೆಗೆ ರಿಲೀಸ್ ಡೇಟ್ ಕೂಡ ಇದ್ದು, ಇದು ಧ್ರುವ್ ಸರ್ಜಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಪೊಗರು ರಿಲೀಸ್ ಡೇಟ್ ನ್ನು ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದು ಅನೌನ್ಸ್ ಮಾಡಿದ್ದ ಧ್ರುವ್ ಸರ್ಜಾ ಇದೀಗ ಇಮೋಜಿ ಬಗ್ಗೆನೂ ವಿಭಿನ್ನ ಲೈವ್ ಕೊಟ್ಟಿದ್ದಾರೆ.

ಧ್ರುವ್ ಪೊಗರು ಸಿನಿಮಾದಲ್ಲಿ ಬಳಸಿದಂತ ಕೂಲಿಂಗ್ ಗ್ಲಾಸ್ ನ್ನೇ ಇಮೋಜಿಯಲ್ಲೂ ಬಳಸಲಾಗಿದೆ. ಇದನ್ನು ಹಾಕ್ಕೊಂಡು ಲೈವ್ ಮಾಡಿರೋ ಧ್ರುವ್ ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ನಂದಕಿಶೋರ್ ಸಾರಥ್ಯದಲ್ಲಿ ಮೂಡಿಬಂದಿರೋ ಪೊಗರು ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ದು, ಧ್ರುವ್ ಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ.

Comments are closed.