ಮಂಗಳವಾರ, ಏಪ್ರಿಲ್ 29, 2025
HomeBreakingಬೆಳ್ಳಿತೆರೆಗೆ ಸೋಜುಗದ ಸೂಜು ಮಲ್ಲಿಗೆ...! ಬಣ್ಣ ಹಚ್ಚುತ್ತಿದ್ದಾರೆ ಸ್ಯಾಂಡಲ್ ವುಡ್ ಸಿಂಗರ್ ...!!

ಬೆಳ್ಳಿತೆರೆಗೆ ಸೋಜುಗದ ಸೂಜು ಮಲ್ಲಿಗೆ…! ಬಣ್ಣ ಹಚ್ಚುತ್ತಿದ್ದಾರೆ ಸ್ಯಾಂಡಲ್ ವುಡ್ ಸಿಂಗರ್ …!!

- Advertisement -

ಸೋಜುಗದ ಸೂಜು ಮಲ್ಲಿಗೆ….ಎನ್ನುತ್ತ ಕನ್ನಡ ಸಿನಿರಸಿಕರ ಮನಗೆದ್ದ ಪ್ರತಿಭಾವಂತ ಗಾಯಕಿ ಅನನ್ಯ ಭಟ್ ಈಗ ಬಣ್ಣ ಹಚ್ಚಲಿದ್ದಾರೆ.

ಗಾಯನದ ಜೊತೆ ನಟನೆಗೂ ಸೈ ಎಂದಿರೋ ಅನನ್ಯ ಭಟ್ ಸ್ಯಾಂಡಲ್ ವುಡ್ ನಲ್ಲಿ ಸಿದ್ಧವಾಗ್ತಿರೋ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ‌.

ಸೇನಾಪುರ ಎಂಬ ಚಿತ್ರದಲ್ಲಿ ಅನನ್ಯ ಭಟ್ ನಟಿಸುತ್ತಿದ್ದು, ಈ ಚಿತ್ರ ಎರಡು ದಶಕದ ಹಿಂದೆ ಕರಾವಳಿಯ ಕುಂದಾಪುರ,ಬೈಂದೂರು ಹಾಗೂ ಭಟ್ಕಳ ಭಾಗದಲ್ಲಿ ನಡೆದ ಘಟನೆ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರ.

ಗುರು ಸವನ್ ನಿರ್ದೇಶನದ ಈ ಚಿತ್ರವನ್ನು ಅಮಿತ್ ಕುಮಾರ್ ಹಾಗೂ ರಾಹುಲ್ ದೇವ್ ನಿರ್ಮಿಸುತ್ತಿದ್ದಾರೆ.

ಸಿನಿಮಾಕ್ಕೆ ಅನನ್ಯ ಭಟ್ ಸಂಗೀತ ನೀಡಲಿದ್ದು, ಗಿರಿರಾಜ್, ದಿನೇಶ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿದ್ದಾರೆ.

ಈಗಾಗಲೆ ಎರಡು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನನ್ಯ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಸೈ ಎಂದಿದ್ದಾರೆ.

ಕೆಜಿಎಫ್ ಚಿತ್ರದ ಹಾಡಿಗಾಗಿ ಸೈಮಾ ಅವಾರ್ಡ್ ಪಡೆದ ಅನನ್ಯ ಭಟ್, ಬಳಿಕ ಸ್ಯಾಂಡಲ್ ವುಡ್ ಬಹುಬೇಡಿಕೆಯ ಗಾಯಕಿ ಯಾಗಿದ್ದು ಇದೀಗ ಬಣ್ಣ ಹಚ್ಚುವ ಮೂಲಕ ಕ್ಯಾಮರಾ ಮುಂದೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

RELATED ARTICLES

Most Popular