ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್,ಮೆಡಿಸಿನ್ ಇಲ್ಲ…! ಹುಶಾರಾಗಿರಿ…! ಆಪ್ತನನ್ನು ಕಳೆದುಕೊಂಡು ಕಣ್ಣಿರಿಟ್ಟ ನಟ ಅನಿರುದ್ಧ..!!

ಕೊರೋನಾ ವೈರಸ್ ಎರಡನೇ ಅಲೆಗೆ ರಾಜ್ಯವೇ ತತ್ತರಿಸಿ ಹೋಗಿದೆ. ರಾಜ್ಯರಾಜಧಾನಿಯಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ  ಕೊರೋನಾ ಸೋಂಕಿಗಿಂತ ಭೀಕರವಾಗಿ ಕಾಡುತ್ತಿದೆ. ನಿನ್ನೆಯಷ್ಟೇ ಕಿರುತೆರೆ ನಟನೊಬ್ಬ ತನ್ನ ಆತ್ಮೀಯರನ್ನು ಕಳೆದುಕೊಂಡು ಕಣ್ಣೀರಿಟ್ಟ ಬೆನ್ನಲ್ಲೇ ನಟ ಅನಿರುದ್ಧ ಆಪ್ತರನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದು, ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ. ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಅನಿರುದ್ಧ ನನ್ನ ಆಪ್ತರೊಬ್ಬರು  ನಿನ್ನೆ ಕೋವಿಡ್  ಸೋಂಕಿನಿಂದ ತೀರಿಕೊಂಡರು.  ಆದರೆ ಅವರು ಸೋಂಕಿನಿಂದ ಸಾಕಷ್ಟು ಪರದಾಡಿದರು.  ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ.  ಸಾಕಷ್ಟು ಹೋರಾಟ ಮಾಡಿದೇವು. ನಾನು ಸಾಕಷ್ಟು ಪೋನ್ ಕಾಲ್ಸ್ ಮಾಡಿ ಪ್ರಯತ್ನಿಸಿದೆ. ಆದರೂ ಆಸ್ಪತ್ರೆಯಲ್ಲಿ ಬೆಡ್ ಹೊಂದಿಸುವುದು ಕಷ್ಟವಾಯಿತು. ಹೀಗಾಗಿ ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.  

 ಸಾಕಷ್ಟು ಸರ್ಕಸ್ ಮಾಡಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದರೂ ಆಮೇಲೆ ಐಸಿಯು ಹಾಗೂ ಆಕ್ಸಿಜನ್ ಸಿಗುವುದಿಲ್ಲ. ಅದು ಸಿಕ್ಕಿದರೂ ಅಗತ್ಯ ಔಷಧಿ ಸಿಗುವುದಿಲ್ಲ. ಸಾಕಷ್ಟು ಪ್ರಭಾವ ಇದ್ದರೇ ಮಾತ್ರ ಸೌಲಭ್ಯಗಳು ಎಂಬ ಸ್ಥಿತಿ ಇದೆ. ನಾವು ಎಲ್ಲ ಪ್ರಯತ್ನ ಮಾಡಿದ ಬಳಿಕವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವುಕರಾಗಿದ್ದಾರೆ.

https://m.facebook.com/story.php?story_fbid=3836613949788205&id=100003189122576

ಶವಸಂಸ್ಕಾರದ ಸ್ಥಿತಿಯನ್ನು ವಿಡಿಯೋದಲ್ಲಿ ವಿವರಿಸಿರುವ ನಟ ಅನಿರುದ್ಧ, ಸಂಸ್ಕಾರಕ್ಕಾಗಿ ಅವರ ಶವವನ್ನು ಬನಶಂಕರಿ ಚಿತಾಗಾರಕ್ಕೆ ಕೊಂಡೊಯ್ದೇವು. ಆದರೆ ಅಲ್ಲಿ 40 ಅಂಬುಲೆನ್ಸ್ ಗಳಿದ್ದವು. ನಂತರ ಕೆಂಗೇರಿಗೆ ಹೋದೇವು. ಅಲ್ಲಿ 17 ನೇ ನಂಬರ್ ಟೋಕನ್ ಪಡೆದು ಅಂತ್ಯಸಂಸ್ಕಾರ ಮಾಡಿ ಬಂದೇವು. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅನಿರುದ್ಧ ದುಃಖ ಹಾಗೂ ವ್ಯವಸ್ಥೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಯಾರೂ ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ. ಮಾಸ್ಕ್ ಬಳಸಿ. ಸ್ಯಾನಿಟೈಸರ್  ಬಳಸಿ.  45 ವರ್ಷದವರು ಲಸಿಕೆ ಪಡೆದುಕೊಳ್ಳಿ ಎಂದಿದ್ದಾರೆ.

ನಿನ್ನೆಯಷ್ಟೇ ಗಟ್ಟಿಮೇಳ ಧಾರಾವಾಹಿ ನಟರೊಬ್ಬರು ತಮ್ಮ ಸಂಬಂಧಿಯನ್ನು ಕಳೆದುಕೊಂಡು ಫೇಸ್ ಬುಕ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಈಗ ಅನಿರುದ್ಧ ಕೂಡ ಆಪ್ತರನ್ನು ಕಳೆದುಕೊಂಡು ಸಂಕಟ ತೋಡಿಕೊಂಡಿದ್ದಾರೆ.

Comments are closed.