ಭಾನುವಾರ, ಏಪ್ರಿಲ್ 27, 2025
HomeBreakingChandrachuda:ಜೈಲಿನೊಳಗೆ ರೆಬೆಲ್ ಆದ ಚಂದ್ರಚೂಡ…! ಚಕ್ರವರ್ತಿ ವರ್ತನೆಗೆ ಬೇಸತ್ತ ಸ್ಪರ್ಧಿಗಳು…!!

Chandrachuda:ಜೈಲಿನೊಳಗೆ ರೆಬೆಲ್ ಆದ ಚಂದ್ರಚೂಡ…! ಚಕ್ರವರ್ತಿ ವರ್ತನೆಗೆ ಬೇಸತ್ತ ಸ್ಪರ್ಧಿಗಳು…!!

- Advertisement -

ಬಿಗ್ ಬಾಸ್ ಕನ್ನಡ ಸೀಸನ್ 8 ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದ್ದು, ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ನಡೆದಿರುವಾಗಲೇ ಬಿಗ್ ಬಾಸ್ ಸ್ಪರ್ಧಿ ಚಂದ್ರಚೂಡ್ ಚಕ್ರವರ್ತಿ  ಕಳಪೆ ಸ್ಪರ್ಧಿ ಪಟ್ಟ ಹೊತ್ತು ಜೈಲು ಸೇರಿದ್ದು, ಅಲ್ಲಿಯೇ ಪ್ರತಿಭಟನೆ ನಡೆಸುವ ಮೂಲಕ ಅವಾಂತರ ಸೃಷ್ಟಿಸಿದ್ದಾರೆ.

ಬಿಗ್ ಬಾಸ್ ನಾಮಿನೇಶನ್ ಪ್ರಕ್ರಿಯೆ ಬಳಿಕ  ಚಕ್ರವರ್ತಿ ಚಂದ್ರಚೂಡ್ ಗೆ ಕಳಪೆ ಪ್ರದರ್ಶನದ ಪಟ್ಟ ಹೊರಿಸಿ ಕಳಪೆ ಸ್ಪರ್ಧಿ ಎಂದು ಪರಿಗಣಿಸಿ ಜೈಲಿಗೆ ಹಾಕಲಾಗಿದೆ. ತಮ್ಮನ್ನು ಕಳಪೆ ಸ್ಪರ್ಧಿ ಎಂದು ಪರಿಗಣಿಸಿ ನಾಮಿನೇಟ್ ಮಾಡಿದ ಸ್ಪರ್ಧಿಗಳ ವಿರುದ್ಧ ಕೋಪಗೊಂಡಿರುವ ಚಂದ್ರಚೂಡ್ ಜೈಲಿನಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ತಮ್ಮನ್ನು ನಾಮಿನೇಟ್ ಮಾಡಿದ ಸ್ಪರ್ಧಿಗಳಿಗೆ ಟಾಂಗ್ ನೀಡುತ್ತ, ಅವರ ವಿರುದ್ಧ ಹಾಡು ಬರೆದು ಹಾಡುತ್ತ ಹಂಗಾಮಾ ಸೃಷ್ಟಿಸಿದ್ದಾರೆ. ಅಲ್ಲದೇ ಜೈಲಿನ ಗೋಡೆಗಳಿಗೆ ಅವರ ವಿರುದ್ಧ ಪೋಸ್ಟರ್ ಹಚ್ಚಿ ಸಂಭ್ರಮಿಸುತ್ತಿದ್ದಾರೆ.

ಚಕ್ರವರ್ತಿಯನ್ನು ಪ್ರಿಯಾಂಕಾ, ತಿಮ್ಮೇಶ್, ಬ್ರೋಗೌಡ್,ಪ್ರಶಾಂತ ಸಂಬರಗಿ,ಶುಭಾ ಪೂಂಜಾ ಸೇರಿ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ನೊಂದ ಚಕ್ರವರ್ತಿ ಚಂದ್ರಚೂಡ್ ನಾನು ತರಕಾರಿ ಕಟ್ ಮಾಡಲ್ಲ. ನನ್ನನ್ನು ಕಳಪೆ ಎಂದು ನಾಮಿನೇಟ್ ಮಾಡಿದ್ದಕ್ಕೆ ಸೂಕ್ತ ಕಾರಣ ನೀಡಿ ಎಂದು ಗಲಾಟೆ ಮಾಡಿದ್ದಾರೆ.

ಅಲ್ಲದೇ, ಸಂಬರ ಕಾಗೆ, ಜೊಳ್ಳು ಮಳ್ಳು,ಅವಕಾಶವಾದಿಗಳು,ಸುಬ್ಬಿ ಒಟ್ಟಿಗೆ ಅನ್ನ ತಿಂದು ದ್ರೋಹ ಮಾಡಿದ ಪೋಸ್ಟರ್ ಎಂದೆಲ್ಲ  ಹೇಳುತ್ತ ಚಕ್ರವರ್ತಿ ಜೈಲಿನೊಳಗೆ ಪ್ರತಿಭಟನೆ ಮಾಡುತ್ತ ಕುಣಿಯುತ್ತಿದ್ದಾರೆ.

ತಾನೇ ಚೆನ್ನಾಗಿ ಆಡದ ಶುಭಾ ಪೂಂಜಾ ಕೂಡ ನನ್ನನ್ನು ಕಳಪೆ ಎಂದಿದ್ದಾರೆ. ಎಲ್ಲರೂ ಯಾಕೆ ಕಳಪೆ ಎಂದರು ಎಂಬುದನ್ನು ಮತ್ತೊಮ್ಮೆ ಹೇಳಬೇಕೆಂಬುದು ಚಂದ್ರಚೂಡ ವಾದ. ಇದಕ್ಕೆ ಉಳಿದವರು ಸ್ಪಷ್ಟನೆ ನೀಡಲು ಸಿದ್ಧರಿಲ್ಲ. ಅಲ್ಲದೇ ಚಂದ್ರಚೂಡ ಅತಿರೇಕದ ವರ್ತನೆಗಳಿಂದ ಇತರ ಸ್ಪರ್ಧಿಗಳು ಬೇಸತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ರಣಾಂಗಣವಾಗಿದೆ.

RELATED ARTICLES

Most Popular