200 ವರ್ಷಗಳ ಬಳಿಕ ವಿನಾಶಕಾರಿ ಪ್ರವಾಹ ..!! 125 ಮಂದಿಯನ್ನು ಬಲಿ ಪಡೆಯಿತು ರಣ ಭೀಕರ ಮಳೆ

ಬರ್ಲಿನ್‌ : ಯುರೋಪ್‌ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಪಶ್ಚಿಮ ಯುರೋಪ್‌ ಹಾಗೂ ಜರ್ಮನಿಯಲ್ಲಿ ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ. ಇದೀಗ ಪ್ರವಾಹದಲ್ಲಿ ಕೊಚ್ಚಿ ಹೋದವರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.

ಯುರೋಪ್‌ ಹಾಗೂ ಜರ್ಮನಿಯಲ್ಲಿ ವಿನಾಶಕಾರಿ ಪ್ರವಾಹ ಉಂಟಾಗಿದೆ. ಈಗಾಗಲೇ ಜರ್ಮನಿಯಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅಲ್ಲದೇ ಪಶ್ವಿಮ ಯುರೋಪ್‌ ನಲ್ಲಿ ಮೂವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದ ಎಂದು ಯುರೋಪ್‌ ಮಾಧ್ಯಮಗಳು ವರದಿ ಮಾಡಿವೆ.

ಸುಮಾರು ಇನ್ನೂರು ವರ್ಷಗಳ ಅವಧಿಯಲ್ಲಿ ದಾಖಲಾದ ಭೀಕರ ಪ್ರವಾಹ ಇದಾಗಿದೆ. ಪಶ್ಚಿಮ ಜರ್ಮನಿ ಯ ರಹಿನೆಲ್ಯಾಂಡ್‌ – ಪಾಲಿಟಿನೇಟ್‌ ಪ್ರದೇಶಗಳಲ್ಲಿ ಅತೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ನದಿ ತೀರದ ಪ್ರದೇಶದಲ್ಲಿ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗಿದೆ.

ಜರ್ಮನಿಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ನೆರೆಯ ರಾಷ್ಟ್ರಗಳಲ್ಲಿ ಸಂಭವಿಸಿದ ಸಾವುನೋವುಗಳು ಒಟ್ಟು ಸಾವಿನ ಸಂಖ್ಯೆ 125 ಕ್ಕಿಂತ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.