ಬೇರೆ ಭಾಷೆಯ ಹಿರೋಯಿನ್ ಗಳು ಕನ್ನಡದಲ್ಲಿ ನಟಿಸೋ ಕಾಲ ಬದಲಾಗಿದ್ದು, ಸ್ಯಾಂಡಲ್ ವುಡ್ ಬೆಡಗಿಯರು ಬಾಲಿವುಡ್ ನಲ್ಲಿ ಸದ್ದು ಮಾಡ್ತಿದ್ದಾರೆ. ಸಧ್ಯ ಸ್ಯಾಂಡಲ್ ವುಡ್ ಸುಂದರಿಯೊಬ್ಬಳು ಬಿಗ್ ಬಿ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಅಂತಿದ್ದ ಕೊಡಗಿನ ಕುವರಿ ಅದೃಷ್ಟ ಮತ್ತೊಮ್ಮೆ ಖುಲಾಯಿ ಸಿದ್ದು, ರಶ್ಮಿಕಾ ಮಂದಣ್ಣ ಬಿಗ್ ಬೀ ಅಮಿತಾಬ್ ಬಚ್ಚನ್ ಗೆ ಮಗಳಾಗಿ ತೆರೆ ಹಂಚಿಕೊಳ್ಳಲಿದ್ದಾರೆ.

ಬಾಲಿವುಡ್ ನ ವಿಕಾಸ್ ಬಹ್ಲ ನಿರ್ದೇಶನದ ಚಿತ್ರದಲ್ಲಿ ಬಿಗ್ ಬೀ ರಶ್ಮಿಕಾ ಮಗಳಾಗಿ ನಟಿಸಲಿದ್ದು, ಇದು ತಂದೆ-ಮಗಳ ಕಥಾಹಂದರವನ್ನು ಹೊಂದಿದೆ.

ಈ ಸಿನಿಮಾಗೆ ಸಧ್ಯಕ್ಕೆ ಡೆಡ್ಲಿ ಎಂದು ಹೆಸರಿಡಲಾಗಿದ್ದು, ಚಿತ್ರದಲ್ಲಿ ನೀನಾ ಗುಪ್ತಾ ಕೂಡ ನಟಿಸಲಿದ್ದು, ಸಿನಿಮಾವನ್ನು ರಿಯಾಲನ್ಸ್ ಎಂಟರ್ ಟೈನ್ಮೆಂಟ್ ಈ ಚಿತ್ರ ನಿರ್ಮಿಸಲಿದ್ದು ಮಾರ್ಚ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಬಾದ್ ಶಾ ಜೊತೆ ವೀಡಿಯೋ ಸಾಂಗ್ ಜೊತೆ ಬಾಲಿವುಡ್ ಗೆ ಕಾಲಿಟ್ಟಿದ್ದ ರಶ್ಮಿಕಾ ಒಂದು ವಿಡಿಯೋ ಸಾಂಗ್ ಬೆನ್ನಲ್ಲೇ ಬಿಗ್ ಬೀ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದು ಸ್ಯಾಂಡಲ್ ವುಡ್ ಮಂದಿ ಹುಬ್ಬೆರಿಸುವಂತೆ ಮಾಡಿದೆ.

ಕೊರೋನಾದಿಂದ ಸಿನಿಮಾಗಳು ಸೆಟ್ಟೇರದೇ ಇದ್ದರೂ ಕೊಡಗಿನ ಕಿತ್ತಳೆ ಈ ರಶ್ಮಿಕಾ ಮಂದಣ್ಣ ಮಾತ್ರ ಕೈತುಂಬ ಅವಕಾಶ ಹೊಂದಿದ್ದು, ಕನ್ನಡದಲ್ಲಿ ಪೊಗರು ತೆರೆಗೆ ಬರುವ ಮುನ್ನವೇ ಪುಷ್ಪ ದಲ್ಲಿ ನಟಿಸಿದ್ದು ಬಹುಭಾಷೆ ತಾರೆಯಾಗಿ ಮಿಂಚುತ್ತ ಈಗ ಬಾಲಿವುಡ್ ನಲ್ಲಿ ದಂಡಯಾತ್ರೆ ಆರಂಭಿಸಿದ್ದಾರೆ.