ರೂಪಾಂತರಿ ಕೋವಿಡ್ ಪರೀಕ್ಷಾ ವರದಿ ನಂತರವೇ ಶಾಲಾರಂಭದ ಕುರಿತು ನಿರ್ಧಾರ : ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ರೂಪಾಂತರಿ ಕೋವಿಡ್‌ ವೈರಸ್‌ ಪತ್ತೆ ಕಾರ್ಯ ನಡೆಸಲಾಗುತ್ತಿದ್ದು. ವಂಶವಾಯಿ ವರದಿ ಬಂದ ಬಳಿಕ ಶಿಕ್ಷಣ ಸಚಿವರು ಜನವರಿ 1 ರಿಂದ ಶಾಲೆ, ಪಿಯು ಕಾಲೇಜು ಆಂಭಿಸುವ ನಿರ್ಧಾರವನ್ನು ಪರಾಮರ್ಶಿಸಬೇಕೆ ಬೇಡವೇ ಎಂದು ತೀರ್ಮಾನಿಸುತ್ತಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ಸರಕಾರ ಜನವರಿ 1 ರಿಂದಲೇ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಿಲು ನಿರ್ಧರಿಸಿದೆ. ಆದರೆ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದರೆ ಇಂದು ರೂಪಾಂತರಿ ಕೋವಿಡ್‌ ವೈರಸ್‌ ಪತ್ತೆ ಪರೀಕ್ಷಾ ವರದಿ ಬರಲಿದೆ. ವರದಿ ಬಂದ ಬಳಿಕ ಸಚಿವ ಸುರೇಶ್‌ ಕುಮಾರ್‌ ಅವರು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ನಿಗದಿಯಂತೆ ಶಾಲೆ ಕಾಲೇಜು ಆರಂಭಿಸಬೇಕಾ. ಇಲ್ಲಾ ಹಿಂದಿನ ನಿರ್ಧಾರವನ್ನು ಪರಾಮರ್ಶಿಸಬೇಕಾ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಎಷ್ಟು ಮಂದಿಗೆ ರೂಪಾಂತರಿ ಕೋವಿಡ್ ವೈರಸ್ ಸೋಂಕು ಕಾಣಿಸಿಕೊಳ್ಳಲಿದೆ. ರಾಜ್ಯದಲ್ಲಿ ಹೊಸ ಕೊರೊನಾ ವೈರಸ್ ಸೋಂಕಿನ ಗಂಭೀರತೆಯ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಕನಿಷ್ಠ ಸಂಖ್ಯೆಯಲ್ಲಿ ಪಾಸಿಟಿವ್‌ ಬಂದರೆ ಭಯ ಪಡಬೇಕಾಗಿಲ್ಲ. ಅಗತ್ಯ ಕ್ರಮಗಳನ್ನು ಕೈಗೊಂಡು ಶಾಲಾರಂಭ ಹಾಗೂ ವಿದ್ಯಾಗಮ ಯೋಜನೆಯನ್ನು ಆರಂಭಿಸಲಾಗುತ್ತದೆ. ಒಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾದ್ರೆ ಮಾತ್ರ ನಿರ್ಧಾರವನ್ನು ಪರಾಮರ್ಶಿಸಲಾಗುತ್ತದೆ ಎಂದಿದ್ದಾರೆ.

Comments are closed.