ಮಂಗಳವಾರ, ಏಪ್ರಿಲ್ 29, 2025
HomeBreakingUrvashi rautela: ಸೀರೆಯಲ್ಲಿ ಅಂದ ತೋರಿದ ಊರ್ವಶಿ…!ಗ್ಲಾಮರಸ್ ಬೆಡಗಿಯ ಸೀರೆ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತಿರಿ…!

Urvashi rautela: ಸೀರೆಯಲ್ಲಿ ಅಂದ ತೋರಿದ ಊರ್ವಶಿ…!ಗ್ಲಾಮರಸ್ ಬೆಡಗಿಯ ಸೀರೆ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತಿರಿ…!

- Advertisement -

ಗ್ಮಾಮರಸ್ ಲುಕ್ ನಿಂದಲೇ ಪಡ್ಡೆಗಳ ಹೃದಯ ಕದಿಯೋ ಬೆಡಗಿ ಊರ್ವಶಿ ರೌಟೆಲ್ಲ ಮೊನ್ನೆ ಮೊನ್ನೆ ಮದುವೆಯೊಂದಕ್ಕೆ ಸೀರೆ ಉಟ್ಟಿದ್ದರು. ಅದರಲ್ಲೇನು ವಿಶೇಷಾ ಅಂದ್ರಾ ಊರ್ವಶಿ ಸೀರೆ ಉಟ್ಟಿದ್ದರಲ್ಲಿ ವಿಶೇಷವಿಲ್ಲ. ಬದಲಾಗಿ ಆಕೆ ಉಟ್ಟಿರೋ ಸೀರೆ ಬೆಲೆಯಲ್ಲಿತ್ತು ವಿಶೇಷ. ಹೌದು ಊರ್ವಶಿ ಬೇರೆಯವರ  ಮದುವೆಗೆ ಉಟ್ಟ ಸೀರೆಯ ಬೆಲೆ ಬರೋಬ್ಬರಿ ಅರ್ಧ ಕೋಟಿ ರೂಪಾಯಿ.

ಹಿರಿಯ ನಟ ಹಾಗೂ ರಾಜಕಾರಣಿ ಮನೋಕ್ ಕುಮಾರ್ ಮೊಮ್ಮಗಳು ಮುಸ್ಕಾನ್ ಗೋಸ್ವಾಮಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಪೋಟೋಗಳು ಎಲ್ಲೆಡೆಯೂ ಸಖತ್ ವೈರಲ್ ಆಗಿತ್ತು. ಇಷ್ಟಕ್ಕೂ ಪೋಟೋಗಳು ಹೈಲೈಟ್ ಆಗಿದ್ದಕ್ಕೆ ಕಾರಣ ಊರ್ವಶಿ ಮೈಮೇಲಿದ್ದ ಸೀರೆ.

ಈ ಮದುವೆಗಾಗಿ ಊರ್ವಶಿ ಬರೋಬ್ಬರಿ 58.75 ಲಕ್ಷ ರೂಪಾಯಿಯ ಸೀರೆ ಉಟ್ಟಿದ್ದರು. ಊರ್ವಶಿ ಧರಿಸಿದ್ದು ಗುಜರಾತಿ ಪಟೋಲಾ ಸೀರೆ. ಈ ಸೀರೆಯ ವಿಶೇಷತೆ ಎಂದರೇ ಇದು 300 ವರ್ಷವಾದರೂ ಹಾಳಾಗದ ಸೀರೆ. ಅಷ್ಟೇ ಅಲ್ಲ ಪ್ಯೂರ್ ರೇಷ್ಮೆಯಿಂದ ಮಾಡಲಾದ  ಈ ಸೀರೆ ಹೂವಿನಷ್ಟು ಹಗುರ.

https://www.instagram.com/reel/CQdijIQBSVR/?utm_medium=copy_link

ಊರ್ವಶಿ ಅಂದ ಹೆಚ್ಚಿಸಿದ ಈ ಸೀರೆ ಸಿದ್ಧಪಡಿಸುವುದರ ಹಿಂದೆಯೂ ಅಷ್ಟೇ ಶ್ರಮವಿದೆ. ಈ ಸೀರೆಯನ್ನು ನೇಯಲು ಅಂದಾಜು 600 ಗ್ರಾಂನಷ್ಟು ಅಸಲಿ ರೇಷ್ಮೆ ಬಳಸಲಾಗಿದ್ದು, 25 ದಿನಗಳ ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಬಣ್ಣ ತುಂಬಲು 75 ದಿನಗಳು ಬೇಕಾಗಿದ್ದು ಶ್ರಮಕ್ಕೆ ತಕ್ಕನಾಗಿ ಸುಂದರವಾಗಿ ಮೂಡಿಬಂದಿದೆ ಸೀರೆ.

https://www.instagram.com/reel/CQa5xg6hlAF/?utm_medium=copy_link

ಈ ಸೀರೆ ಜೊತೆಗೆ ವಜ್ರದ ಆಭರಣ ತೊಟ್ಟು ಸರಿಹೊಂದುವ ಹೇರಸ್ಟೈಲ್ ಜೊತೆ ಊರ್ವಶಿ ರೌಟೆಲಾ ಮಿಂಚಿದ್ದು, ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ  ಈ ಬರೋಬ್ಬರಿ ಅರ್ಧ ಕೋಟಿ ಬೆಲೆಬಾಳೋ ಸೀರೆಗೆ ಲಕ್ಷಾಂತರ ಅಭಿಮಾನಿಗಳು ಲೈಕ್ ಒತ್ತಿದ್ದಾರೆ.

RELATED ARTICLES

Most Popular