ಹೈಡ್ರಾಮಾಗಳ ಬಳಿಕ ಬಿಗ್ ಬಾಸ್ ಮನೆಯಲ್ಲಿ ಈಗ ಕಣ್ಣೀರ ಕೋಡಿಯೇ ಹರಿದಿದ್ದು, ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಕಣ್ಣೀರಿಟ್ಟು ಪ್ರೇಕ್ಷಕರ ಬೇಸರ ತರಿಸಿದ್ದಾರೆ. ಪ್ರಶಾಂತ್ ಸಂಬರಗಿ, ಚಂದ್ರಚೂಡ್, ಮಂಜು ಹಾಗೂ ದಿವ್ಯಾ ಸುರೇಶ್ ಈ ಕಣ್ಣೀರ ಕಹಾನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬಿಗ್ ಬಾಸ್ ಸ್ಥಗಿತಗೊಂಡ ವೇಳೆ ಹೊರಬಂದಿದ್ದ ಸ್ಪರ್ಧಿಗಳು ಮಾಧ್ಯಮಗಳಲ್ಲಿ ಒಬ್ಬರ ಬಗ್ಗೆ ಮತ್ತೊಬ್ಬರು ಮನಬಂದಂತೆ ಹೇಳಿಕೆ ನೀಡಿದ್ದರು. ಈಗ ಮತ್ತೆ ದಿಢೀರ್ ಶೋ ಆರಂಭಗೊಂಡಿರೋದರಿಂದ ಪರ-ವಿರೋಧ ಹೇಳಿಕೆ ನೀಡಿದವರೆಲ್ಲ ಮತ್ತೆ ಒಂದಾಗಿ ಬದುಕಬೇಕಾಗಿದೆ.

ಇದೇ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ರಣರಂಗವೇ ನಡೆದು ಹೋಗಿದೆ. ನನ್ನ ಹಾಗೂ ಮಂಜು ಪಾವಗಡ ಬಗ್ಗೆ ಪ್ರಶಾಂತ್ ಸಂಬರಗಿ ಮತ್ತು ಚಂಧ್ರಚೂಡ್ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದಿವ್ಯಾ ಸುರೇಶ್ ಕಣ್ಣೀರ ಧಾರೆಯನ್ನೇ ಹರಿಸಿದ್ದಾರೆ.

ಇನ್ನು ಚಂದ್ರಚೂಡಗೆ ಸಖತ್ ತಿರುಗೇಟು ನೀಡಿದ್ದ ಮಂಜು ಪಾವಗಡ್ ಕೂಡ ಸುಮ್ಮನೇ ಕುಳಿತಾಗ ಭಾವುಕರಾಗಿದ್ದಾರೆ ನಿಧಿ ಸುಬ್ಬಯ್ಯ ಬಳಿ ಕಣ್ಣೀರು ಹಾಕಿದ್ದಾರೆ. ಆದರೆ ಅರವಿಂದ್ ಸೇರಿದಂತೆ ಉಳಿದ ಸ್ಪರ್ಧಿಗಳು ಮಂಜು ಪಾವಗಡ್ ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕೆಂದು ತಿಳುವಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಯಾರೊಂದಿಗೂ ಮಾತನಾಡದಂತೆ ಪ್ರಶಾಂತ್ ಸಂಬರಗಿಗೆ ಟಾಸ್ಕ್ ನೀಡಲಾಗಿದ್ದು, ಈ ಟಾಸ್ಕ್ ನಿಂದ ಸಂಬರಗಿ ಜೊತೆ ಮಾತನಾಡಲಾಗದೇ ಚಂದ್ರಚೂಡ್ ಕಣ್ಮೀರು ಹಾಕಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಶೋ ಪುನರಾರಂಭವಾಗುತ್ತಿದ್ದಂತೆ ಮತ್ತೆ ಗೇಮ್ ಪ್ಲ್ಯಾನ್, ಎಮೋಶನಲ್ ಗೇಮ್ ಪ್ಲೈ ಆರಂಭಗೊಂಡಿದ್ದು, ಪ್ರೇಕ್ಷಕರ ಮನಗೆಲ್ಲುವ ಸಾಹಸ ಜೋರಾಗಿದೆ.