ನೀನೇನೂ ವರಿ ಮಾಡ್ಕೋಬೇಡಾ….! ನಂಗೇನು ಆಗಲ್ಲ…! ಮೇಘನಾ ರಾಜ್ ಸದಾ ನೆನಪಿಸಿಕೊಳ್ಳುವ ಸಾಲುಗಳು….!

ಜೂನ್ 7 ನೇ ತಾರೀಕು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಬದುಕಿನಲ್ಲಿ ಮರೆಯಲಾಗದ ಕಹಿ ದಿನ. ಅಂದು ಎಂದಿನಂತೆ ಬೆಳಗಾದರೂ ಸಂಜೆ ಮಾತ್ರ ಅತ್ಯಂತ ಕ್ರೂರವಾಗಿತ್ತು. ಈ ದಿನವನ್ನು ನೆನಪಿಸಿಕೊಂಡ ಮೇಘನಾ ರಾಜ್ ತಮ್ಮ ಸಂದರ್ಶನವೊಂದರಲ್ಲಿ ತಮ್ಮೊಂದಿಗೆ ಚಿರು ಆಡಿದ ಕೊನೆಯ ಮಾತನ್ನು ಹಂಚಿಕೊಂಡಿದ್ದಾರೆ.  

ಮೇಘನಾ ರಾಜ್ ಸಧ್ಯ ತಮ್ಮ ಮಡಿಲೇರಿದ ಜ್ಯೂನಿಯರ್ ಚಿರು ಜೊತೆ ತಾಯ್ತನದ ದಿನಗಳನ್ನು  ಎಂಜಾಯ್ ಮಾಡ್ತಿದ್ದಾರೆ. ಆದರೆ ಸದಾ ಚಿರುವಿನ ನೆನಪಿನಲ್ಲೇ ಇರೋ ಮೇಘನಾ ಸದಾ ಒಂದಿಲ್ಲೊಂದು ಚಿರುಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಸಧ್ಯ ತಮಿಳು ಪತ್ರಿಕೆಯೊಂದಕ್ಕೆ ನೀಡಿನ ಸಂದರ್ಶನದಲ್ಲಿ ಚಿರು ತಮ್ಮೊಂದಿಗೆ ಮಾತನಾಡಿದ ಕೊನೆಯ ಮಾತನ್ನು ನೆನಪಿಸಿಕೊಂಡ ಮೇಘನಾ ಕಣ್ಣೀರಿಟ್ಟಿದ್ದಾರೆ. ಜೂನ್ 7 ರಂದು ನಾವೆಲ್ಲರೂ ಚಿರು ಜೊತೆ ಮನೆಯಲ್ಲಿ ಇದ್ದೇವು. ನಾನು ಧ್ರುವ್ ಹಾಗೂ ಪ್ರೇರಣಾ ಧ್ರುವ್ ಮನೆಯ ಹೊರಭಾಗದಲ್ಲಿ ಇದ್ದೇವು.

ಆಗ ಚಿರು ತಂದೆ ಜೋರಾಗಿ ನಮ್ಮನ್ನು ಕರೆದರೂ, ಒಳಕ್ಕೆ ಹೋಗಿ ನೋಡಿದಾಗ ಚಿರು ಕೆಳಕ್ಕೆ ಬಿದ್ದಿದ್ದರು. ನಾವು ಯಾವತ್ತೂ ಅವರನ್ನು ಆ ಸ್ಥಿತಿಯಲ್ಲಿ ನೋಡಿರಲಿಲ್ಲ. ತಕ್ಷಣ ಪ್ರೇರಣಾ ಹಾಗೂ ಧ್ರುವ್ ತಮ್ಮ ಕಾರಿನಲ್ಲೇ ಚಿರುನನ್ನು ಆಸ್ಪತ್ರೆಗೆ ಕರೆದೊಯ್ದರು.  ಅಲ್ಲಿ ವೈದ್ಯರು ಎಮರ್ಜೆನ್ಸಿ ವಾರ್ಡ್ ಗೆ ಕರೆದೊಯ್ದು ಚಿರುಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದರು.

ಇದೆಲ್ಲವೂ ಏನಾಗುತ್ತಿದೆ ಎಂದು ನನಗೆ ಅರ್ಥವೇ ಆಗಲಿಲ್ಲ. ಕೆಲವೇ ಕ್ಷಣದಲ್ಲಿ ಚಿರು ಇನ್ನಿಲ್ಲ ಎಂದು ಘೋಷಿಸಿದರು. ನನಗೆ ಶಾಕ್ ಆಯ್ತು. ಆದರೆ ಆಸ್ಪತ್ರೆಗೆ  ಹೋಗೋ ಮುನ್ನ ಚಿರುಗೆ  ಸ್ವಲ್ಪ ಎಚ್ಚರವಾಗಿತ್ತು , ಅವಾಗ ನನ್ನ ಕಡೆ ನೋಡಿದ ಚಿರು ನಂಗೇನಾಗಲ್ಲ. ನೀನು ಟೆನ್ಸನ್ ತಗೋಬೇಡಾ ಎಂದಿದ್ದರು. ಅದೇ ನನ್ನೊಂದಿಗೆ ಚಿರು ಆಡಿದ  ಕೊನೆ ಮಾತು ಎಂದಿದ್ದಾರೆ.

 ಆದರೆ ಅದೇ ಕೊನೆಯ ಮಾತಾಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ಕಣ್ಣೀರಿಟ್ಟ ಮೇಘನಾ, ನಾನು ತಾಯಿ ಆಗ್ತಿರೋ ವಿಷ್ಯ ತಿಳಿದು ಚಿರು ತುಂಬಿ ಖುಷಿಯಾಗಿದ್ದರು. 5 ತಿಂಗಳು ಕಳೆದ ಮೇಲೆ ಈ ವಿಷಯವನ್ನು ತುಂಬಾ ಸ್ಪೆಶಲ್ ಆಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳೋ ಪ್ಲ್ಯಾನ್ ಇತ್ತು. ನಾನು ಪ್ರಗ್ನೆಂಟ್  ಅನ್ನೋ ವಿಷ್ಯ ತಿಳಿದ ಚಿರು ನನಗೆ ಸಪ್ರೈಸ್ ಗಿಫ್ಟ್ ಆಗಿ, ಒಂದು ಗೊಂಬೆ ತಂದುಕೊಟ್ಟಿದ್ದರು.

ಚಿರು ಕೊನೆ ಉಸಿರು ಎಳೆಯುವಾಗಲೂ ಆ ಗೊಂಬೆ ಚಿರು ಪಕ್ಕದಲ್ಲೇ ಇತ್ತು. ದುರಂತ ಅಂದ್ರೇ ಸ್ಪೆಶಲ್ ಆಗಿ ಅನೌನ್ಸ್ ಆಗಬೇಕಿದ್ದ ನನ್ನ ಮತ್ತು ಚಿರು ಮೊದಲ ಮಗುವಿನ ಸಂಗತಿ ಮಾತ್ರ  ಚಿರು ಸಾವಿನ ಸಂಗತಿ ಜೊತೆಗೆ ಎಲ್ಲರಿಗೂ ತಿಳಿಯಿತು ಅನ್ನೋದನ್ನು ಮೇಘನಾ ದುಃಖದಿಂದ ಹಂಚಿಕೊಂಡಿದ್ದಾರೆ.

https://kannada.newsnext.live/akashtapandavpur-photoshoot-babybump-trend/
https://kannada.newsnext.live/sandalwood-meghanaraj-druvsarja-meghanasarja-tara-gift/
https://kannada.newsnext.live/30year-old-spectator-for-a-mirro-finally-crazystar-has-a-double-role-with-cinema/

ಈಗಲೂ ಮೇಘನಾ ಗೆ ಚಿರು ಮಾತೇ ಕಿವಿಯಲ್ಲಿ ಧ್ವನಿಸಿದಂತೆ ಭಾಸವಾಗಿ, ಚಿರು ತನ್ನೊಂದಿಗೆ ಇದ್ದಾರೆ ಎಂಬ ಭಾವನೆ ಇದೆಯಂತೆ. ಇದೇ ಕಾರಣಕ್ಕೆ ಮೇಘನಾ ಜ್ಯೂನಿಯರ್ ಚಿರುಗೆ  ತಂದೆಯ ಸಿನಿಮಾ ಹಾಡುಗಳನ್ನೇ ಲಾಲಿ ಹಾಡಿ ತಂದೆಯ ನಂಟು ಬೆಸೆಯುತ್ತಿದ್ದಾರಂತೆ.

Comments are closed.