ಬೇಬಿ ಬಂಪ್ ಜೊತೆ ಕ್ಯಾಚಿ ಲೈನ್ಸ್….! ಬಿಗ್ ಬಾಸ್ ಹುಡುಗಿಯ ಮನಸೆಳೆವ ಪೋಟೋಶೂಟ್…!!

ಇದು ಎಲ್ಲವನ್ನು ಪೋಟೋಪ್ರೇಮ್ ನಲ್ಲಿ ಸೆರೆಹಿಡಿಯುವ ಕಾಲ. ಇದಕ್ಕೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ, ರಂಗಕಲಾವಿದೆ,ನಟಿ ಅಕ್ಷತಾ ಪಾಂಡವಪುರ ಹೊಸ ಸೇರ್ಪಡೆ.

೨೦೨೧ ರ ಜನವರಿಯಲ್ಲಿ ಹೊಸ ಅತಿಥಿಯ ನೀರಿಕ್ಷೆಯಲ್ಲಿರೋ ಅಕ್ಷತಾ ಪಾಂಡವಪುರ ಸಖತ್ತಾಗಿರೋ ಪೋಟೋಶೂಟ್ ಮಾಡಿಸಿದ್ದು, ಬೇಬಿ ಬಂಪ್ ಜೊತೆ ಬೋಲ್ಡ್ ಪೋಟೋಸ್ ಗೆ ಪೋಸು ನೀಡಿದ್ದಾರೆ.

ಇತ್ತೀಚಿಗಷ್ಟೇ ಸಂಪ್ರದಾಯ ಬದ್ಧವಾಗಿ ಅಕ್ಷತಾ ಸೀಮಂತ ಶಾಸ್ತ್ರ ನಡೆದಿದ್ದು, ನಟಿ ಜಯಶ್ರಿ, ಗಾಯಕ ನವೀನ ಸಜ್ಜು ಸೇರಿ ಹಲವರು ಪಾಲ್ಗೊಂಡಿದ್ದರು.ಇದರ ಬೆನ್ನಲ್ಲೇ ಅಕ್ಷತಾ ಫೋಟೋ ಶೂಟ್ ಪೋಸ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. Fab14photography ಸೆರೆ ಹಿಡಿದಿರೋ ಪೋಟೋಗಳು ಸುಂದರವಾಗಿ ಮೂಡಿಬಂದಿದೆ.

ಕಪ್ಪು ಸೀರೆ, ಟ್ರೆಡಿಂಗ್ ಒಡವೆಯ ಜೊತೆ ಅಕ್ಷತಾ ಸಖತ್ ಪೋಸು ನೀಡಿದ್ದು ಅದರೊಂದಿಗೆ ” ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೇ ಮತ್ತೆಂದೂ ಬಾರದ ಈ ಘಳಿಗೆ. ಇನ್ನೂ ಅನೇಕ ೨೦೨೧ ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನೀರಿಕ್ಷೆಯಲ್ಲಿ” ಎಂದು ಅಕ್ಷತಾ ಬರೆದುಕೊಂಡಿದ್ದಾರೆ.

ಲಾಕ್ ಡೌನ್ ಆರಂಭದ ವೇಳೆ ಅಕ್ಷತಾ ಯೋಗ ಹಾಗೂ ವ್ಯಾಯಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಕ್ಷತಾ ಆ ಬಳಿಕ ಕೊರೋನಾ ಸೋಂಕಿಗೂ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

https://kannada.newsnext.live/sandalwood-chiru-dhruv-heartattack-june7/
https://kannada.newsnext.live/puttagauri-in-the-hills-this-is-why-ranjani-has-such-a-condition/

ಸಧ್ಯ ೮ ತಿಂಗಳ‌ ಗರ್ಭಿಣಿಯಾಗಿರುವ ಅಕ್ಷತಾ ೨೦೨೧ ರ ಜನವರಿಯಲ್ಲಿ ಮಗುವಿನ ನೀರಿಕ್ಷೆಯಲ್ಲಿದ್ದಾರೆ.

https://kannada.newsnext.live/anushka-sharma-pregnancy-you-know-what-the-actress-said-with-the-photo/

Comments are closed.