ಮತ್ತೆ ಮುಖಾಮುಖಿಯಾಗ್ತಿದ್ದಾರೆ ದಚ್ಚು-ಕಿಚ್ಚ…! ಸ್ಟಾರ್ ವಾರ್ ಗೆ ಕಾರಣವಾಗುತ್ತಾ ಸಿನಿಮಾ?

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಹೊಸದಲ್ಲ. ಒಂದು ಕಾಲದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ದ ನಟರೆಲ್ಲ ಸ್ಟಾರ್ ಗಳಾದ ಮೇಲೆ ಮುಖತಿರುಗಿಸಿಕೊಂಡು ಓಡಾಡೋದು ಕಾಮನ್. ಈಗ ಮತ್ತೊಮ್ಮೆ ಥಿಯೇಟರ್ ನಲ್ಲಿ ದಚ್ಚು ಕಿಚ್ಚ ಮುಖಾಮುಖಿಯಾಗೋ ದಿನ ಹತ್ತಿರವಾಗಿದೆ .

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು.ಆದರೆ ಈಗ ಮಾತ್ರ ಇಬ್ಬರು ಎಂದೂ ಸೇರದ ತೀರ.

ಹೀಗಿರೋ ಸ್ಟಾರ್ ಗಳು ಫೆ‌. ೫ ರಂದು ಮುಖಾಮುಖಿಯಾಗಲಿದ್ದು ಥಿಯೇಟರ್ ನಲ್ಲಿ ಸ್ಟಾರ್ ವಾರ್ ಫಿಕ್ಸ್ ಎನ್ನಲಾಗ್ತಿದೆ.

ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರ ಇನ್ನೂ ತೆರೆಗೆ ಬರೋ ಸೂಚನೆ ನೀಡಿಲ್ಲ. ಇನ್ನು ದರ್ಶನ್ ರ ಬಹುನೀರಿಕ್ಷಿತ ಚಿತ್ರ ರಾಬರ್ಟ್ ತೆರೆಗೆ ಬರೋದು ಮಾರ್ಚ್ ೧೧ ಕ್ಕೆ.

ಹೀಗಿರುವಾಗ ದಚ್ಚು ಮತ್ತು ಕಿಚ್ಚ ನಡುವೆ ಎಲ್ಲಿ ನಡೆಯುತ್ತೇ ಫೈಟಿಂಗ್ ಅಂತಿದ್ದಿರಾ. ಫೈಟ್ ನಡೆಯುತ್ತೆ. ಯಾಕೆಂದರೇ ಫೆ‌. 5ರಂದು ಡೈನಾಮಿಕ್ ಪ್ರಿನ್ಸ್ ಅಭಿನಯದ ಇನ್ಸಪೆಕ್ಟರ್ ವಿಕ್ರಂ ಮತ್ತು ಬಿಗ್ ಬಾಸ್ ನಟ ಚಂದನ್ ಆಚಾರ ನಟನೆಯ ಮಂಗಳವಾರ ರಜಾದಿನ ತೆರೆಗೆ ಬರಲಿದೆ.

ಈ ಸಿನಿಮಾದಲ್ಲಿ ದಚ್ಚು ಹಾಗೂ ಕಿಚ್ಚ ಗೆಸ್ಟ್ ರೋಲ್ ಮಾಡಿದ್ದಾರೆ. ಹೀಗಾಗಿ ಈ ಎರಡು ಚಿತ್ರದ ಮೂಲಕ ಇಬ್ಬರೂ ಸ್ಟಾರ್ ಗಳು ಮತ್ತೆ ಟಕ್ಕರ್ ಕೊಡೋ ಮುನ್ಸೂಚನೆ ನೀಡಿದ್ದಾರೆ.

ಪ್ರಜ್ವಲ್ ದೇವರಾಜ್ ಚಿತ್ರದಲ್ಲಿ ದರ್ಶನ್ ನಟಿಸಿದ್ದರೇ, ಬಿಗ್ ಬಾಸ್ ಚಂದನ್ ಆಚಾರ ನಟಿಸಿದ ಮಂಗಳವಾರ ರಜಾ ದಿನದಲ್ಲಿ ನಟ ಸುದೀಪ್ ಅತಿಥಿ ಪಾತ್ರಮಾಡಿದ್ದಾರೆ.

ಹೀಗಾಗಿ ಎರಡೂ ಸ್ಟಾರ್ ಗಳ ಫ್ಯಾನ್ಸ್ ನಡುವೆ ಮತ್ತೆ ವಾರ್ ಶುರುವಾಗೋ ಲಕ್ಷಣವಿದ್ದು ಫೆ.೫ ಕ್ಕೆ ರಿಲೀಸ್ ಆಗೋ ಚಿತ್ರದ ಮೇಲೆ ಕುತೂಲಹ ಹೆಚ್ಚಿದೆ.

Comments are closed.