ಪೊಗರು ಯಶಸ್ಸಿನ ಖುಷಿಯಲ್ಲಿ ಹೊಸ ಚಿತ್ರಕ್ಕಾಗಿ ಸಜ್ಜಾಗ್ತಿರೋ ಆಕ್ಷ್ಯನ್ ಪ್ರಿನ್ಸ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದು, ಹೊಸ ಲುಕ್ ಅಭಿಮಾನಿಗಳನ್ನು ಸೆಳೆಯುತ್ತಿದೆ. ಹೊಸ ಅವತಾರದಲ್ಲಿ ಮಿಂಚ್ತಿರೋ ಧ್ರುವ್ ಸರ್ಜಾ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಪೊಗರು ಚಿತ್ರಕ್ಕಾಗಿ ತಮ್ಮ ಗೆಟಪ್ ಬದಲಾಯಿಸಿಕೊಂಡಿದ್ದ ಧ್ರುವ್ ಸರ್ಜಾ ಉದ್ದನೆಯ ಕೂದಲು,ದಾಡಿ ಬೆಳೆಸಿ ರೌಡಿ ಲುಕ್ ನೀಡಿದ್ದರು. ಸಿನಿಮಾ ಮುಗಿಯುತ್ತಿದ್ದಂತೆ ಅರ್ಧ ಕೂದಲನ್ನು ಕ್ಯಾನ್ಸರ್ ಪೀಡಿತರಾಗಿ ದಾನ ಮಾಡಿದ್ದ ಧ್ರುವ್ ಸರ್ಜಾ ಇತರರಿಗೂ ಮಾದರಿ ಎನ್ನಿಸಿದ್ದರು.

ಆದರೆ ಒಂದಿಷ್ಟು ಉದ್ದನೆಯ ಕೂದಲು ಧ್ರುವ್ ಸರ್ಜಾ ಲುಕ್ ಮೊದಲಿನಂತೆ ಮಾಡಿತ್ತು. ಈ ಬಗ್ಗೆ ದುಬಾರಿ ಮುಹೂರ್ತದ ವೇಳೆ ಮಾತನಾಡಿದ್ದ ಧ್ರುವ್ ಸರ್ಜಾ, ಸದ್ಯದಲ್ಲೇ ಈ ಕೂದಲಿಗೂ ಕತ್ತರಿ ಬೀಳಲಿದೆ. ದುಬಾರಿಯಲ್ಲಿ ನಿಮಗೆ ನನ್ನ ಹೊಸ ಲುಕ್ ನೋಡಲು ಸಿಗುತ್ತೆ ಎಂದಿದ್ದರು.

ಇದೀಗ ಧ್ರುವ್ ಸರ್ಜಾ ಹೊಸ ಲುಕ್ ರಿವೀಲ್ ಆಗಿದ್ದು, ಉದ್ದನೆಯ ಕೂದಲು, ಕಾಡಿನಂತಹ ದಾಡಿಗೆ ಮುಕ್ತಿಕೊಟ್ಟಿರುವ ಧ್ರುವ್ ಸರ್ಜಾ 10 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ.

ನಗರದಲ್ಲಿ ನಿನ್ನೆ ನಡೆದ ನಿರ್ದೇಶಕ ಚೇತನ್ ಕುಮಾರ್ ಮದುವೆಯಲ್ಲಿ ಧ್ರುವ್ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಜೊತೆ ಪಾಲ್ಗೊಂಡಿದ್ದರು. ಈ ವೇಳೆ ವೈಟ್ ಆಂಡ್ ವೈಟ್ ಪೈಜಾಮಾ ಜುಬ್ಬದಲ್ಲಿ ಧ್ರುವ್ ಸರ್ಕಾ ಕ್ಲೀನ್ ಶೇವ್ ಮಾಡಿ ಚಿಕ್ಕ ಹುಡುಗನಂತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಮಾಸ್ ಲುಕ್ ನಿಂದ ಕ್ಲಾಸ್ ಲುಕ್ ಬಂದಿರೋ ಧ್ರುವ್ ಸರ್ಜಾ ಪೋಟೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಅಣ್ಣಾ ಹೊಸ ಲುಕ್ ಸೂಪರ್ ಅಂತ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಧ್ರುವ್ ಸರ್ಜಾ ಹೊಸ ಚಿತ್ರ ದುಬಾರಿ ಶೂಟಿಂಗ್ ಲಾಕ್ ಡೌನ್ ತೆರವಾಗುತ್ತಿದ್ದಂತೆ ಆರಂಭವಾಗಲಿದ್ದು, ಬೆಂಗಳೂರು ಸುತ್ತಮುತ್ತಲಿನ ಲೋಕೇಶನ್ ನ ಶೂಟಿಂಗ್ ಮುಗಿಸಿದ ಬಳಿಕ ಚಿತ್ರತಂಡ ವಿದೇಶಕ್ಕೆ ಹಾರೋ ನೀರಿಕ್ಷೆಯಲ್ಲಿದೆ. ಹೀಗಾಗಿ ಧ್ರುವ್ ಸರ್ಜಾ ಕೂಡ ದುಬಾರಿ ಲುಕ್ ಗೆ ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ.