ಸೋಮವಾರ, ಏಪ್ರಿಲ್ 28, 2025
HomeBreakingಪೊಗರಿನಲ್ಲಿ ಪೊಗರುದಸ್ತಾಗೇ ಗೆದ್ದ ಧ್ರುವ್ ಸರ್ಜಾ….! ಮಾಸ್ ಮತ್ತು ಕ್ಲಾಸ್ ಸಿನಿಮಾಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್…!!

ಪೊಗರಿನಲ್ಲಿ ಪೊಗರುದಸ್ತಾಗೇ ಗೆದ್ದ ಧ್ರುವ್ ಸರ್ಜಾ….! ಮಾಸ್ ಮತ್ತು ಕ್ಲಾಸ್ ಸಿನಿಮಾಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್…!!

- Advertisement -

ಕೊನೆಗೂ ಆಕ್ಷ್ಯನ್ ಪ್ರಿನ್ಸ್  ಅಭಿಮಾನಿಗಳ ಕಾಯುವಿಕೆ ಫಲಕೊಟ್ಟಿದೆ. ಫೈಟಿಂಗ್ ಮಾತ್ರವಲ್ಲದೇ ಎಮೋಶನಲ್ ಕತೆಯನ್ನು ಕಟ್ಟಿಕೊಟ್ಟ ಪೊಗರು ಚಿತ್ರಕತೆ ಗೆದ್ದಿದ್ದು ಸಖತ್ ಪವರ್ ಫುಲ್ ಪ್ರದರ್ಶನ ಕಾಣ್ತೀರೋ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.

ಮಲತಂದೆ-ತಾಯಿ ಕತೆಯಂತಹ ಸೂಕ್ಷ್ಮವಾದ ವಿಷಯವನ್ನು ಇಟ್ಟುಕೊಂಡು ಅದರೊಂದಿಗೆ ನಾಯಕನ ವೈಭವೀಕರಣ , ಫೈಟಿಂಗ್ ಹಾಗೂ ಭಾವನಾತ್ಮಕ ದೃಶ್ಯ ಹೀಗೆ ಎಲ್ಲವನ್ನು ಬೆರೆಸಿ ಸುಂದರವಾದ ಮಾಸ್ ಸಿನಿಮಾವನ್ನು ಕಟ್ಟಿಕೊಡುವಲ್ಲಿ ಚಿತ್ರತಂಡ ಗೆದ್ದಿದೆ.

ಕರುಣೆ ಇಲ್ಲದೇ ಎಲ್ಲವೂ ಹಣದಿಂದಲೇ ಸಾಧ್ಯ ಎಂದುಕೊಳ್ಳುವ ಯುವಕನೊಬ್ಬ ಭಾವನಾತ್ಮಕ ಜೀವಿಯಾಗಿ ಬದಲಾಗುವ ಹಾಗೂ ಪ್ರೀತಿಸದ, ಗೌರವಿಸದ ತಂದೆಯನ್ನು ದ್ವೇಷಿಸುವ ಯುವಕ ತಂದೆ-ತಾಯಿಯನ್ನು ಪ್ರೀತಿಸುವಂತೆ ಪರಿರ್ತನೆಯಾಗುವ ದೃಶ್ಯಗಳನ್ನು ಸಿನಿಮಾ ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದು ಪ್ರೇಕ್ಷಕರನ್ನು ಹಿಡಿದಿಡುತ್ತದೆ.

ಆದರೆ ಭರ್ಜರಿ ರೌಡಿ ಲುಕ್ ಹಾಗೂ ಮಾಸ್ ಎಂಟ್ರಿಯ ನಾಯಕ ಭಾವನಾತ್ಮಕ ವ್ಯಕ್ತಿಯಾಗಿ ಬದಲಾಗೋದು ಹೇಗೆ ಅನ್ನೋದನ್ನು ಅರಿತುಕೊಳ್ಳೋದಕ್ಕೆ ನೀವು ಸಿನಿಮಾ ನೋಡಲೇಬೇಕು.

ಉದ್ದುದ್ದ ಭಾಷಣ ಮಾದರಿಯ ಡೈಲಾಗ್, ಫೈಟಿಂಗ್, ಧ್ರುವ್ ಸರ್ಜಾನ ಮಾಸ್ ಎಂಟ್ರಿ ಹಾಡು,ಸೆಂಟಿಮೆಂಟ್ ದೃಶ್ಯ ಹೀಗೆ ಎಲ್ಲವನ್ನು ಒಳಗೊಂಡ ಪೊಗರು ಪೊಗರದಸ್ತಾಗೇ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ವಿದೇಶಿ ಬಾಕ್ಸರ್ ಗಳ ಜೊತೆಗಿನ ಫೈಟಿಂಗ್, ದ್ರುವ್ ಲುಕ್ ಅಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇನ್ನೂ ನಾಯಕಿ ರಶ್ಮಿಕಾ ಮಂದಣ್ಣ ಅಗತ್ಯವಿರುವಷ್ಟೇ ನಟನೆಯಿಂದ ಮನಗೆದ್ದಿದ್ದರೇ, ಪವಿತ್ರಾ ಲೋಕೇಶ್, ರವಿಶಂಕರ್, ರಾಘವೇಂದ್ರ ರಾಜ್ ಕುಮಾರ್, ಡಾಲಿಧನಂಜಯ್, ಮಯೂರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸಕ್ಸಸ್ ಆಗಿದ್ದಾರೆ.

ಒಂದೇ ಸಿನಿಮಾದಲ್ಲಿ ಯುವಕ ಹಾಗೂ 17 ರ ಹರೆಯದ ಬಾಲಕನ ಪಾತ್ರಕ್ಕಾಗಿ ಧ್ರುವ್ ಸರ್ಜಾ ಮಾಡಿರೋ ವರ್ಕೌಟ್ ಸಿನಿಮಾದ ಮೇಲೆ ಅವರಿಗಿರೋ ಶೃದ್ಧೆಯನ್ನು ತೋರಿಸಿದ್ರೆ ಹಾಡುಗಳು ಕಿವಿಗೆ ಇಂಪಾಗಿದ್ದು ಮನಸೆಳೆಯುತ್ತಿದೆ. ಒಟ್ಟಿನಲ್ಲಿ ನಾಲ್ಕು ವರ್ಷಗಳ ಕಾಯುವಿಕೆ ಬಳಿಕ ಒಂದೊಳ್ಳೆ ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರಿಗೆ ಸಿಕ್ಕಿರೋದರಲ್ಲಿ ಅನುಮಾನವೇ ಇಲ್ಲ.  

RELATED ARTICLES

Most Popular