2021ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟ

ಬೆಂಗಳೂರು :  2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ದಿನಾಂಕ ಪ್ರಕಟವಾಗಿದೆ‌. ಜುಲೈ 7 ಮತ್ತು 8ರಂದು ಸಿಇಟಿ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಕೊರೋನಾ ಭೀತಿ ನಡುವೆಯೂ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಇದರ ಬೆನ್ನಲ್ಲೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ದಿನಾಂಕ ನಿಗದಿಗೊಳಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಇಟಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸೇರಿ ಇನ್ನಿತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. ಕನ್ನಡ ಪರೀಕ್ಷೆಯನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಬರೆಯಲಿದ್ದಾರೆ.

ಸಿಇಟಿ ವೇಳಾಪಟ್ಟಿ :
7-7-2021 ಬುಧವಾರ ಬೆಳಗ್ಗೆ 10.30ರಿಂದ 11.50: ಜೀವವಿಜ್ಞಾನ
7-7-2021 ಬುಧವಾರ ಮಧ್ಯಾಹ್ನ 2.30ರಿಂದ 3.50: ಗಣಿತ
8-7-2021 ಗುರುವಾರ ಬೆಳಗ್ಗೆ 10.30ರಿಂದ 11.50: ಭೌತ ವಿಜ್ಞಾನ
8-7-2021 ಗುರುವಾರ ಮಧ್ಯಾಹ್ನ 2.30ರಿಂದ 3.50: ರಸಾಯನವಿಜ್ಞಾನ
9-7-2021 ಶುಕ್ರವಾರ ಬೆಳಗ್ಗೆ 11.30ರಿಂದ 12.30: ಕನ್ನಡ
(ಬೆಂಗಳೂರಿನಲ್ಲಿ ಮಾತ್ರ)

Comments are closed.