ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇದೀಗ ಸ್ಯಾಂಡಲ್ ವುಡ್ ನ ಹಿರಿಯ ನಟನ ಇಬ್ಬರು ಮಕ್ಕಳಿಗೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟ ಇಬ್ಬರು ಪುತ್ರರಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಉಳಿದಂತೆ ನಟ ದಿಗಂತ್ ಹಾಗೂ ಐಂದ್ರಿತಾ ರೇ ಕೂಡ ಸಿಸಿಬಿ ವಿಚಾರಣೆಯನ್ನು ಎದುರಿಸಿದ್ದಾರೆ. ಇದೆಲ್ಲದರ ಬೆನ್ನಲ್ಲೆ ಮತ್ತಿಬ್ಬರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬಂದಿದೆ.
ಹಿರಿಯ ನಟನ ಪುತ್ರರ ಪೈಕಿ ಓರ್ವ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿದ್ರೆ, ರಾಗಿಣಿ ದ್ವಿವೇದಿ ಹಾಗೂ ಐಂದ್ರಿತಾ ರೇ ಜೊತೆಗೆ ನಟಿಸಿದ್ದಾನೆ. ಇನ್ನೋರ್ವ ಪುತ್ರ ಒಂದು ಸಿನಿಮಾದಲ್ಲಷ್ಟೇ ನಟಿಸಿದ್ದಾನೆ.

ನಟ, ಖಳನಟನ ಪಾತ್ರದಲ್ಲಿ ಈಗಾಗಲೇ ಮಿಂಚಿರುವ ಹಿರಿಯ ನಟನ ಮಗನ ವಿರುದ್ದ ಈ ಹಿಂದೆಯೇ ಗಾಂಜಾ ಪ್ರಕರಣದ ಆರೋಪ ಕೇಳಿಬಂದಿತ್ತು. ಮೂರು ವರ್ಷದ ಹಿಂದೆ ಜಯನಗರದ ಸಮೀಪದಲ್ಲಿ ಅಬಕಾರಿ ಉದ್ಯಮಿಯ ಕುಟುಂಬ ಸದಸ್ಯರೋರ್ವರ ಕಾರು ಅಪಘಾತವಾದ ವೇಳೆಯಲ್ಲಿ ಗಾಂಜಾ ಪತ್ತೆಯಾಗಿತ್ತು.
ಉದ್ಯಮಿಯ ಜೊತೆಗೆ ಸ್ನೇಹ ಹೊಂದಿದ್ದ ಕಾರಣಕ್ಕೆ ಹಿರಿಯ ನಟನ ಓರ್ವ ಮಗ ಸಿಸಿಬಿ ವಿಚಾರಣೆಗೂ ಒಳಗಾಗಿದ್ದ. ಇಬ್ಬರು ಮಕ್ಕಳು ಕೂಡ ಗಾಂಜಾ ವ್ಯಸನಿಗಳಾಗಿದ್ದಾರೆಂಬ ಆರೋಪ ಕೇಳಿಬಂದಿತ್ತು. ಇದೀಗ ಸಿಸಿಬಿ ವಿಚಾರಣೆಗೆ ಒಳಪಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.