ಸೋಮವಾರ, ಏಪ್ರಿಲ್ 28, 2025
HomeBreakingಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್...! ಸಿಸಿಬಿ ಎದುರು ಹಾಜರಾದ ಶಿವಪ್ರಕಾಶ್ ಚಿಪ್ಪಿ...!!

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್…! ಸಿಸಿಬಿ ಎದುರು ಹಾಜರಾದ ಶಿವಪ್ರಕಾಶ್ ಚಿಪ್ಪಿ…!!

- Advertisement -

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾನೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಶಿವಪ್ರಕಾಶ್ ಗುರುವಾರ ಸಿಸಿಬಿ ಎದುರು ತನ್ನ ವಕೀಲರ ಜೊತೆ ಹಾಜರಾಗಿದ್ದು, ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ವಿಚಾರಣೆ ನಡೆಸಲಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಂಗಳೂರಿನಿಂದ ತಲೆಮರೆಸಿಕೊಂಡಿದ್ದ ಚಿಪ್ಪಿ, ೧೫ ದಿನಗಳ ಹಿಂದೆ ನ್ಯಾಯಾಲಯದ ಎದುರು ಹಾಜರಾಗಿದ್ದು no coercive order ಪಡೆದುಕೊಂಡಿದ್ದ ಎನ್ನಲಾಗಿದೆ.ಈ ಅದೇಶ ಪಡೆದ ಚಿಪ್ಪಿ ಕಳೆದ ನಾಲ್ಕು ದಿನಗಳ ಹಿಂದೆ ಸಿಸಿಬಿಗೆ ಬಂದಿದ್ದು ವಿಚಾರಣಾಧಿಕಾರಿ ಇಲ್ಲದ ಹಿನ್ನೆಲೆಯಲ್ಲಿ ವಾಪಸ್ಸಾಗಿದ್ದ.

ಬಳಿಕ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದು ಈ ಹಿನ್ನೆಲೆಯಲ್ಲಿ ಇಂದು ವಕೀಲರ ಜೊತೆ ಸಿಸಿಬಿ ಕಚೇರಿಗೆ ಬಂದಿದ್ದಾನೆ.

ಚಿಪ್ಪಿಗೆ ಈ ಪ್ರಕರಣದಲ್ಲಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹಲವು ಗಣ್ಯ ವ್ಯಕ್ತಿಗಳು ಸಹಾಯ ನೀಡಿದ್ದಾರೆ ಎನ್ನಲಾಗಿದ್ದು, ಹೀಗಾಗಿ ತಲೆಮರೆಸಿಕೊಂಡಿದ್ದ ಶಿವಪ್ರಕಾಶ್, ಸೂಕ್ತ ಪ್ಲ್ಯಾನ್ ಹಾಗೂ ಮುಂಜಾಗ್ರತಾ ಕ್ರಮಗಳ ಜೊತೆ ಸಿಸಿಬಿಗೆ ಹಾಜರಾಗಿದ್ದಾರೆ.

ಚಿಪ್ಪಿ ಬುದ್ಧಿವಂತಿಕೆಯಿಂದ ಕಾನೂನು ಬಳಕೆಮಾಡಿಕೊಂಡು ಸಿಸಿಬಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ.

ಏನಿದು No Coercive Order- ಇದು ಬೇಲ್ ಮಾದರಿಯಲ್ಲೇ ನ್ಯಾಯಾಲಯದಿಂದ ನೀಡುವ ಅದೇಶವಾಗಿದ್ದು, ಈ ಆರ್ಡರ್ ಇರುವಾಗ ಪ್ರಕರಣದಲ್ಲಿ ಚಾರ್ಜಶೀಟ್ ಸಲ್ಲಿಕೆಯಾಗುವರೆಗೂ ,ಆರೋಪಿಯನ್ನು ಬಂಧಿಸುವಂತಿಲ್ಲ. ಆದರೆ ಆತನನ್ನು ವಿಚಾರಣೆ ಮಾಡಬಹುದು. ಷರತ್ತುಗಳ ಮೇಲೆ ಈ ಆದೇಶ ನೀಡಲಾಗುತ್ತದೆ. ಒಂದೊಮ್ಮೆ ಆರೋಪಿ ತನಿಖೆಗೆ ಸಹಕರಿಸದೇ ಇದ್ದಲ್ಲಿ ಅಥವಾ ತನಿಖೆಗೆ ಕರೆದಾಗ ಬಾರದೇ ಇದ್ದರೇ ಈ ಆದೇಶ ರದ್ದಿಗೆ ತನಿಖಾ ಅಧಿಕಾರಿ ನ್ಯಾಯಾಲಯದ ಮೊರೆ ಹೋಗಬಹುದು.

RELATED ARTICLES

Most Popular