ಸ್ಪೆಶಲ್ ಬೇಬಿಬಂಪ್ ಪೋಟೋಶೂಟ್….! ನೀರಿನಲ್ಲಿ ಬೆತ್ತಲಾದ ದಂಪತಿ…!!

ಪೋಟೋಶೂಟ್ ಹೆಸರಿನಲ್ಲಿ ಯುವಜನತೆ ಎತ್ತ ಸಾಗುತ್ತಿದ್ದಾರೆ ಎಂಬ ಗಂಭೀರ ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ ಕೇರಳದ ದಂಪತಿಗಳಿಬ್ಬರು ಬೇಬಿಬಂಪ್ ಜೊತೆ ನೀರಿನಲ್ಲಿ ಬೆತ್ತಲೆಯಾಗಿ ಪೋಟೋಗೆ ಪೋಸ್ ನೀಡಿ ಹೊಸ ಚರ್ಚೆ‌ಹುಟ್ಟುಹಾಕಿದ್ದಾರೆ.

ತಾಯ್ತನದ ನೆನಪನ್ನು ಶಾಶ್ವತವಾಗಿಸುವ ಉದ್ದೇಶದಿಂದ ನಡೆಸೋ ಬೇಬಿ ಬಂಪ್‌ ಶೂಟಿಂಗ್ ನಲ್ಲಿ ಈ ದಂಪತಿ ಪೂರ್ತಿ ಬೆತ್ತಲಾಗಿ ನೀರಿಗಿಳಿದಿದ್ದು ಅಲ್ಲೇ ಪರಸ್ಪರ ಆಲಂಗಿಸಿಕೊಂಡು ಪೋಸು ನೀಡಿದ್ದಾರೆ.

ಇನ್ನು ಕೆಲವೆಡೆ ತಮ್ಮ ಭವಿಷ್ಯದ ಮಗುವಿನ ಬಗ್ಗೆ ಕನಸು ಕಾಣುತ್ತಿರುವಂತೆ, ಪರಸ್ಪರ ಮಾತನಾಡಿಕೊಳ್ಳುವಂತೆ ಪೋಸ್ ನೀಡಿದ್ದು ಎಲ್ಲ ಪೋಟೋದಲ್ಲೂ ಗಂಡ ಹೆಂಡತಿ ಮೈ ಮೇಲೆ ನೂಲಿನಷ್ಟು ಬಟ್ಟೆಯೂ ಇಲ್ಲ.

ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಸಖತ್ ಸಂಚಲನ ಮೂಡಿಸಿದೆ. ಅಲ್ಲದೇ ಯಾವುದು ಸರಿ ಯಾವುದು ತಪ್ಪು. ಇದು ಅಶ್ಲೀಲವೋ? ಕಲಾತ್ಮಕತೆಯೋ ಎಂಬ ಚರ್ಚೆ ನಡೆದಿದೆ.

ಈ ಪೋಟೋಗಳನ್ನು ಕೇರಳದ ಫೇಮಸ್ ವೆಡ್ಡಿಂಗ್ ಮತ್ತು ಬೇಬಿಬಂಪ್  ಪೋಟೋಗ್ರಾಫರ್  ಅತೀರಾ ಜಾಯ್ ಸೆರೆ ಹಿಡಿದಿದ್ದು ಪೋಟೋಗಳು ಸುಂದರ ಪರಿಸರದಲ್ಲಿ ಮೂಡಿಬಂದಿದೆ.

ಬೆತ್ತಲೆಯಾಗಿ ನಿಂತ ಪತಿ ಕೊಳಲು ನುಡಿಸುತ್ತಿದ್ದರೇ, ಬೆತ್ತಲೆಯಾಗಿ ನೀರಲ್ಲಿ ನಿಂತ ಪತ್ನಿ ಅದನ್ನು ಆಲಿಸುತ್ತಿರುವಂತೆ ಪೋಟೋ ತೆಗೆಯಲಾಗಿದೆ.

ಈ ಪೋಟೋ ಕಾನ್ಸೆಪ್ಟ್ ಪೋಟೋಗ್ರಾಫರ್ ಅತಿರಾ ಜಾಯ್ ದು ಎನ್ನಲಾಗಿದ್ದು, ಈಕೆ ಪ್ರಗತಿಪರ ಚಿಂತನೆಯ ಪೋಟೋಗ್ರಾಫರ್ ಆಗಿದ್ದು, ಪರಸ್ಪರ ಮದುವೆಯಾದ ಹೆಣ್ಣುಮಕ್ಕಳ ಪೋಟೋಶೂಟ್ ಸೇರಿದಂತೆ ಈ ರೀತಿಯ ಹಲವು ಬೋಲ್ಡ್ ಪೋಟೋಶೂಟ್ ನಡೆಸಿದ ಖ್ಯಾತಿ ಅತಿರಾ ಜಾಯ್ ಗಿದೆ.

ಒಟ್ಟಿನಲ್ಲಿ ಪೋಟೋಶೂಟ್ ಹೆಸರಿನಲ್ಲಿ ಜನರು ನೈತಿಕ ಚೌಕಟ್ಟನ್ನೇ ದಾಟುತ್ತಿದ್ದಾರೆ ಎಂಬ ಕೂಗು ಜೋರಾಗಿದ್ದು ಈ ಪೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ.

Comments are closed.