ಧ್ರುವ್ ಗೆ ಜೋಡಿಯಾದ ಶ್ರೀಲೀಲಾ…! ದುಬಾರಿಗೆ ಸಿಕ್ಕಾಯ್ತು ನಾಯಕಿ…!

ಸಧ್ಯ ಸ್ಯಾಂಡಲ್ ವುಡ್ ನಲ್ಲೇ ದುಬಾರಿಯದ್ದೇ ಸುದ್ದಿ. ಆಕ್ಷ್ಯನ್ ಪ್ರಿನ್ಸ್  ಧ್ರುವ್ ಸರ್ಜಾ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ತಿರೋ ಈ ಸಿನಿಮಾ 2021 ರಲ್ಲಿ ಶೂಟಿಂಗ್ ಆರಂಭಿಸಲಿದ್ದು,  ಸಧ್ಯ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಶ್ರೀಲೀಲಾ ಒಲಿದಿದ್ದಾರೆ.

ನಂದಕಿಶೋರ್ ನಿರ್ದೇಶಿಸುತ್ತಿರುವ   ಚಿತ್ರಕ್ಕಾಗಿ  ನಾಯಕಿ ಹುಡುಕಾಟ ಆರಂಭವಾಗಿತ್ತು. ಪಾತ್ರಕ್ಕೆ ಸರಿಹೊಂದೋ ನಾಯಕಿ ಹುಡುಕಾಟದಲ್ಲಿದ್ದ ನಂದಕಿಶೋರ್ ಗೆ ಶ್ರೀಲೀಲಾ ಸೈ ಎಂದಿದ್ದಾರೆ. ಡಿಸೆಂಬರ್ ನಿಂದಲೇ ಶೂಟಿಂಗ್ ಆರಂಭಿಸೋ ಸಿದ್ಧತೆಯಲ್ಲಿದ್ದ ಚಿತ್ರತಂಡ ಇದೀಗ ಚಿತ್ರೀಕರಣವನ್ನು ಮುಂದೂಡಿದ್ದು, 2021 ಜನವರಿಯಿಂದ ಶೂಟಿಂಗ್ ಆರಂಭಿಸಲಿದೆ.

ಉದಯ ಮೆಹ್ತಾ ನಿರ್ಮಾಣದ  ಚಿತ್ರಕ್ಕಾಗಿ ಧ್ರುವ್ ಸರ್ಜಾ ತಮ್ಮ ಹೇರ್ ಸ್ಟೈಲ್ ಕೂಡ ಬದಲಾಯಿಸಿಕೊಂಡಿದ್ದು ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಧ್ಯ  ಶೂಟಿಂಗ್ ಗಾಗಿ ಲೊಕೇಶನ್ ಆಯ್ಕೆ ಸೇರಿದಂತೆ  ವಿವಿಧ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 

ಧ್ರುವ್ ಸರ್ಜಾ ಜೊತೆ ನಾಯಕಿಯಾಗಿ ಶ್ರೀಲೀಲಾ ನಟಿಸಲಿರುವ ಸುದ್ದಿಯನ್ನು ಸ್ವತಃ ನಂದಕಿಶೋರ್ ಹಂಚಿಕೊಂಡಿದ್ದಾರೆ.

https://kannada.newsnext.live/sandalwood-chiru-dhruv-heartattack-june7/
https://kannada.newsnext.live/anushka-sharma-pregnancy-you-know-what-the-actress-said-with-the-photo/

ಶ್ರೀಲೀಲಾ, ಎಪಿ ಅರ್ಜುನ್ ನಿರ್ಮಾಣದ ಕಿಸ್ ಹಾಗೂ ಶ್ರೀಮುರುಳಿಯ ಜೊತೆಗಿನ ಭರಾಟೆ ಸಿನಿಮಾದಲ್ಲಿ ನಟಿಸಿದ್ದರು. ಈಗ ದುಬಾರಿಯಲ್ಲಿ ಧ್ರುವ್ ಸರ್ಜಾಗೆ ಜೊತೆಯಾಗಲಿದ್ದಾರೆ.

https://kannada.newsnext.live/sandalwood-meghanaraj-druvsarja-meghanasarja-tara-gift/

Comments are closed.