ಭಾನುವಾರ, ಜೂನ್ 15, 2025
HomeBreakingಸಲಗ ರಿಲೀಸ್ ಗೂ ಡೇಟ್ ಫಿಕ್ಸ್….! ಒಟಿಟಿಗೆ ನೋ ಎಂದ ದುನಿಯಾ ವಿಜಯ್…!!

ಸಲಗ ರಿಲೀಸ್ ಗೂ ಡೇಟ್ ಫಿಕ್ಸ್….! ಒಟಿಟಿಗೆ ನೋ ಎಂದ ದುನಿಯಾ ವಿಜಯ್…!!

- Advertisement -

ಒಟಿಟಿ ಕುರಿತು ಚರ್ಚೆ ಜೋರಾಗಿರುವ ಬೆನ್ನಲ್ಲೇ,  ನನ್ನ ಚಿತ್ರ ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ತೆರೆಗೆ ಬರೋದಿಲ್ಲ.  ಥಿಯೇಟರ್  ನ್ಲಲೇ ಬಿಡುಗಡೆ ಮಾಡೋದು ನಾನು ಎಂದು ದುನಿಯಾ ವಿಜಿ ಅಬ್ಬರಿಸಿದ್ದಾರೆ.

 ಸಲಗ ಸಿನಿಮಾ ರಿಲೀಸ್ ಬಗ್ಗೆ ನಾನಾ ರೀತಿಯ ಗೊಂದಲಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿರುವ ದುನಿಯಾ ವಿಜಯ್,  ಥೀಯೇಟರ್ ನಲ್ಲಿ ಕೇವಲ ಶೇಕಡಾ 50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಜನರು ಥಿಯೇಟರ್ ಗೆ ಬರ್ತಾರೋ ಇಲ್ವೋ ಅನ್ನೋ ಗೊಂದಲದಲ್ಲಿ ಸಿನಿಮಾ ರಿಲೀಸ್ ಲೇಟ್ ಆಗ್ತಿದೆ.

ಸಲಗವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಸಲಗ ನಾನು ನಿರ್ದೇಶಿಸಿರುವ ಮೊದಲ ಚಿತ್ರ. ಹೀಗಾಗಿ ಯಾವುದೇ ಕಾರಣಕ್ಕೂ ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗೋದಿಲ್ಲ. ಥಿಯೇಟರ್ ನಲ್ಲೇ ನಾನು ಸಿನಿಮಾ ಬಿಡುಗಡೆ ಮಾಡ್ತಿನಿ ಎಂದಿದ್ದಾರೆ.

ಸಲಗ ಸಿನಿಮಾ ಈಗಾಗಲೇ ರಿಲೀಸ್ ಗೆ ಸಿದ್ಧವಾಗಿದ್ದು, ಎಲ್ಲ ಅಂದುಕೊಂಡಂತೆ ಆದರೇ ಜನವರಿ ಅಂತ್ಯ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಸಲಗ ರಿಲೀಸ್ ಡೇಟ್ ಅನೌನ್ಸ್ ಮಾಡೋದಾಗಿ ದುನಿಯಾ ವಿಜಿ ಹೇಳಿದ್ದಾರೆ.

ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿಬಂದಿರುವ ಸಲಗವನ್ನು ದುನಿಯಾ ವಿಜಿ ನಿರ್ದೇಶಿಸಿದ್ದು, ದುನಿಯಾವಿಜಯ್, ಸಂಜನಾ,ಡಾಲಿಧನಂಜಯ್ ಸೇರಿದಂತೆ ಹಲವರು ಮುಖ್ಯಪಾತ್ರದಲ್ಲಿದ್ದಾರೆ. ಸಲಗದ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ.

RELATED ARTICLES

Most Popular