ವಾಟ್ಸಪ್ ಪ್ರೈವಸಿ ನೀತಿ…! ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಬಳಕೆದಾರ..!!

ನವದೆಹಲಿ: ವಾಟ್ಸಪ್ ನ ಹೊಸ ಫಿಚರ್ ಹಾಗೂ ಅದು ಸೃಷ್ಟಿಸಿರುವ ಆತಂಕದ ನಡುವೆ ದೆಹಲಿಯಲ್ಲಿ ವಕೀಲರೊಬ್ಬರು ವಾಟ್ಸಪ್ ನ ಪ್ರೈವೆಸಿ ಪಾಲಿಸಿಗೆ ತಡೆಕೋರಿ ನ್ಯಾಯಾಲಯ ಮೊರೆ ಹೋಗಿದ್ದಾರೆ.

ದೆಹಲಿಯ ಹೈಕೋರ್ಟ್ ಗೆ ಈ ಕುರಿತು ಅರ್ಜಿ ಸಲ್ಲಿಕೆಯಾಗಿದ್ದು ವಕೀಲರಾದ ಚೈತನ್ಯ ರೋಹಿಲ್ಲ ಅರ್ಜಿ ಸಲ್ಲಿಸಿದ್ದಾರೆ.ವಾಟ್ಸಪ್ ಹೊಸ ಪ್ರೈವೆಸಿ ನೀತಿಯನ್ನು ಜಾರಿಗೊಳಿಸುವ ಮೂಲಕ ಭಾರತೀಯರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದೆ.

ಅಲ್ಲದೇ ಈಗ ವಾಟ್ಸಪ್ ಜನಜನಿತವಾಗಿದ್ದು ಸರ್ಕಾರಿ ಕಚೇರಿ ಸೇರಿದಂತೆ ಹಲವೆಡೆ ಬಳಕೆಯಾಗುತ್ತಿದೆ. ಹೀಗಾಗಿ ಹೊಸ ನೀತಿಯಿಂದ ಬಳಕೆದಾರರ ಗೌಪ್ಯತೆಯ ಹಕ್ಕಿಗೆ ಧಕ್ಕೆಯಾಗಲಿದೆ.

ಹೀಗಾಗಿ ಹೊಸ ಪ್ರೈವೆಸಿ ಪಾಲಿಸಿಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಚೈತನ್ಯ ರೋಹಿಲ್ಲ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೊಳಗಾಗಿರುವ ವಾಟ್ಸಪ್ ಪ್ರೈವೆಸಿ ಬಗ್ಗೆ ಜನರು ಆತಂಕಿತರಾಗಿದ್ದು ಈಗಾಗಲೇ ಬದಲಿ ಆ್ಯಪ್ ಗಳ‌ ಮೊರೆ ಹೋಗುತ್ತಿದ್ದಾರೆ.

https://kannada.newsnext.live/7minutes-of-tearing-cake-came-to-kundapur-7th-heaven/

Comments are closed.