ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಾಳಿಪಟ-2 ಚಿತ್ರತಂಡ ಸಖತ್ ಗಿಫ್ಟ್ ನೀಡಿದ್ದು, ವಿಭಿನ್ನ ವಿಶ್ ಜೊತೆ ಮೋಶನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಯೋಗರಾಜ್ ಭಟ್.

ಗಣಪನ ಹುಟ್ಟಿದ ಹಬ್ಬದ ಪ್ರಯುಕ್ತ ನಮ್ಮ ಗಾಳಿಪಟ -2 ಚಿತ್ರದ ಮೋಷನ್ ಪೋಸ್ಟರ್ ನ್ನು ಇಡೀ ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ. ಹ್ಯಾಪಿ ಹ್ಯಾಪಿ ಹುಟ್ದಬ್ಬ ಗಣಪ ಎಂದು ಯೋಗರಾಜ್ ಭಟ್ ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.

ಗಾಳಿಪಟ ಸಿನಿಮಾದ ಮೊದಲ ಭಾಗದಲ್ಲಿ ಕನ್ನಡ ಅಕ್ಷರಮಾಲೆ ಕಲಿಯಲು ಕಷ್ಟ ಪಡುತ್ತಿದ್ದ ಗಣಿ ಪಾತ್ರವನ್ನು ಆಧಾರವಾಗಿಟ್ಟುಕೊಂಡು ಚಿತ್ರತಂಡ ಗಣೇಶ್ ಗೆ ಹುದ್ದಿಟಹಬ್ಬದ ಶುಭಾಶಯ ಎಂದು ವಿಶ್ ಮಾಡಿದೆ.

ಇದರ ಜೊತೆಗೆ ಗಣೇಶ್ ಅವರ ಹೊಸ ಚಿತ್ರ ಸಖತ್ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಈ ಸಿನಿಮಾದ ಶೂಟಿಂಗ್ ಕೂಡ ಸದ್ಯದಲ್ಲೇ ಆರಂಭವಾಗಲಿದೆ.

ಗಣೇಶ್ ಹುಟ್ಟುಹಬ್ಬಕ್ಕೆ ನಟಿ ಅಮೂಲ್ಯಾ, ನಟ ಸುದೀಪ್, ರಮೇಶ್ ಅರವಿಂದ್, ಉಪೇಂದ್ರ,ಶರಣ್, ಪ್ರಣೀತಾ ಶುಭಾಶ್ ಸೇರಿದಂತೆ ಹಲವು ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಶುಭಹಾರೈಸಿದ್ದಾರೆ.
ಕೊರೋನಾ ಸಂಕಷ್ಟದ ಕಾರಣಕ್ಕೆ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಗಣೇಶ್ ನಿರ್ಧರಿಸಿದ್ದು, ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಯಾರು ಮನೆಗೆ ಬಂದು ಕಾಯಬೇಡಿ. ನಿಮ್ಮ ಅಕ್ಕಪಕ್ಕದವರಿಗೆ ನೆರವಾಗಿ ಹುಟ್ಟುಹಬ್ಬವನ್ನು ಸಂಭ್ರಮಿಸಿ ಎಂದು ಗಣೇಶ್ ಮನವಿ ಮಾಡಿದ್ದಾರೆ.