ಸೋಮವಾರ, ಏಪ್ರಿಲ್ 28, 2025
HomeBreakingGanesh: ಹಿಂದಿನ ಜನ್ಮದಲ್ಲಿ ಗೋಲ್ಡನ್ ಸ್ಟಾರ್ ಹೆಂಡತಿ ಯಾರಾಗಿದ್ರು ಗೊತ್ತಾ?! ಗಣೇಶ್ ತೆರೆದಿಟ್ರು ರಹಸ್ಯದ...

Ganesh: ಹಿಂದಿನ ಜನ್ಮದಲ್ಲಿ ಗೋಲ್ಡನ್ ಸ್ಟಾರ್ ಹೆಂಡತಿ ಯಾರಾಗಿದ್ರು ಗೊತ್ತಾ?! ಗಣೇಶ್ ತೆರೆದಿಟ್ರು ರಹಸ್ಯದ ಗಣಿ…!!

- Advertisement -

ಕಿರುತೆರೆಯಿಂದ ಹಿರಿತೆರೆಗೆ ಬಂದು ಸಕ್ಸಸ್ ಕಂಡ ಹಲವು ನಟರಲ್ಲಿ ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಕೂಡ ಒಬ್ಬರು.  ಒಂದೊಂದೆ ಹಿಟ್ ಚಿತ್ರಗಳ ಮೂಲಕ  ಕನ್ನಡಿಗರ ಮನಗೆದ್ದ ವಿಶಿಷ್ಟ ಮ್ಯಾನರಿಸಂ ನ ನಟ ಗಣೇಶ್  ಹಾಗೂ ಯೋಗ್ ರಾಜ್ ಭಟ್ರದ್ದು ಹಿಟ್ ಜೋಡಿ. ಈ ಬಾಂಧ್ಯವದ ಬಗ್ಗೆ ಗಣೇಶ್ ಮನಬಿಚ್ಚಿ ಮಾತನಾಡಿದ್ದು, ಏನಂದ್ರು ಇಲ್ಲಿದೆ ಡಿಟೇಲ್ಸ್.

ಸದ್ದುಗದ್ದಲವಿಲ್ಲದೇ ಸೈಲೆಂಟ್ ಆಗಿಯೇ ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್ ವುಡ್ ನಲ್ಲಿ 15 ವರ್ಷ ಪೊರೈಸಿದ್ದಾರೆ. 2006 ರಲ್ಲಿ ಚೆಲ್ಲಾಟದ ಮೂಲಕ ಆರಂಭವಾದ ಸಿನಿಪಯಣ ಪ್ರಸ್ತುತ ಎರಡು ಮೂರು ಚಿತ್ರಗಳ ಬಿಡುಗಡೆಗೆ ಸಿದ್ಧವಾಗೋ ಹಂತ ತಲುಪಿದೆ.

ಗಾಳಿಪಟ-2 ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದ್ದು, ಮತ್ತೆ ಹಿಟ್ ಸಿನಿಮಾ ನೀಡುವ ಸಿದ್ಧತೆಯಲ್ಲಿದೆ ಭಟ್ರು ಹಾಗೂ ಗಣಿ ಜೋಡಿ. ತಮ್ಮ ಹಾಗೂ ನಿರ್ದೇಶಕ ಯೋಗ ರಾಜ್ ಭಟ್ ರ ಜೋಡಿ ಬಗ್ಗೆ ಮಾತನಾಡಿದ ಗಣೇಶ್ ನಮ್ಮಿಬ್ಬರ ಜಾತಕ ಚೆನ್ನಾಗಿ ಕೂಡಿ ಬಂದಿದೆ. ಬಹುಷಃ ಹಿಂದಿನ ಜನ್ಮದಲ್ಲಿ ನಾವಿಬ್ಬರೂ ಗಂಡ-ಹೆಂಡತಿ ಆಗಿದ್ವಿ ಎನ್ನಿಸುತ್ತೆ ಎಂಬ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಆಕಸ್ಮಿಕವಾಗಿ ಒಂದಾದ ಭಟ್ರು ಹಾಗೂ ನನ್ನ ಜೋಡಿ ಜನರಿಗೂ ಇಷ್ಟವಾಗಿದೆ. ಇದನ್ನು ಉಳಿಸಿಕೊಳ್ಳುವ ಆಸೆ ನಮ್ಮಿಬ್ಬರಿಗೂ ಇದೆ. ಇಬ್ಬರೂ ಕಿತ್ತಾಡುತ್ತೇವೆ. ಇದೇನ್ರಿ ಹುಚ್ಚುಹುಚ್ಚಾಗಿ ಡೈಲಾಗ್ ಬರೀತಿರಾ ಅಂತ ನಾನು ಭಟ್ರ ಕಾಲೆಳೆಯುತ್ತೇನೆ ಅಂತ ಗಣೇಶ್ ತಮ್ಮ ಹಾಗೂ ಯೋಗ್ ರಾಜ್ ಭಟ್ರ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ.

ಸಖತ್ ಸಿನಿಮಾದಲ್ಲಿ ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಗಣೇಶ್ ಇದು ನನ್ನ ಅಭಿನಯಕ್ಕೆ ಚಾಲೆಂಜ್ ಎನ್ನಿಸುವ ಪಾತ್ರ ,ಇದಲ್ಲದೇ ದಿ ಸ್ಟೋರಿ ಆಫ್ ರಾಯಗಡ್ ಮೂಲಕ ನನ್ನ ವಿಭಿನ್ನ ಮುಖವನ್ನು ಪ್ರೇಕ್ಷಕರು ನೋಡಬಹುದು ಎಂದಿದ್ದಾರೆ.

ಗಾಳಿಪಟ -2 ಬಳಿಕ , ಸಖತ್, ದಿ.ಸ್ಟೋರಿ ಆಫ್ ರಾಯಗಡ್, ತ್ರಿಬಲ್ ರೈಡಿಂಗ್ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಗಣೇಶ್ ಬ್ಯುಸಿಯಾಗಿದ್ದು, ತಮ್ಮ ಅಭಿಮಾನಿಗಳಿಗೆ ಮನೋರಂಜನೆಯ ಫುಲ್ ಮೀಲ್ಸ್ ಬಡಿಸಲಿದ್ದಾರೆ.  

RELATED ARTICLES

Most Popular