ಸಿನಿಮಾರಂಗಕ್ಕೆ ಅಲ್ಲು ಕುಟುಂಬದ ನಾಲ್ಕನೇ ಜನರೇಶನ್ ಎಂಟ್ರಿ..! ನಟನೆಗೂ ಸೈ ಎಂದ ಸ್ಟೈಲಿಶ್ ಸ್ಟಾರ್ ಪುತ್ರಿ….!

ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಅರ್ಜುನ್ ಕ್ಯೂಟ್  ಬೇಬಿ ಡಾಲ್. ಸೋಷಿಯಲ್ ಮೀಡಿಯಾದಲ್ಲಿ ತನ್ನ ಪೋಟೋಶೂಟ್ ಗಳಿಂದಲೇ ಗಮನ ಸೆಳೆದ ಮುದ್ದುಕಂದಮ್ಮ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದ್ದು, ಬಾಲನಟಿಯಾಗಿ ಬಣ್ಣ ಹಚ್ಚಲಿದ್ದಾಳೆ.

ನಟ ಅಲ್ಲು ಅರ್ಜುನ್ ಪುತ್ರಿ ನಾಲ್ಕು ವರ್ಷದ ಅರ್ಹಾ ಅರ್ಜುನ್ ಶಕುಂತಲಂ ಸಿನಿಮಾದ ಮೂಲಕ ಬಾಲನಟಿಯಾಗಿ ಬಣ್ಣ ಹಚ್ಚಲಿದ್ದಾರೆ. ಆ ಮೂಲಕ ದಶಕಗಳಿಂದ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಅಲ್ಲು ಮನೆತನದ ನಾಲ್ಕನೇ ಜನರೇಶನ್ ಸಿನಿಮಾ ರಂಗಕ್ಕೆ ಬಂದಂತಾಗಿದೆ.

ಸ್ವತಃ ಅಲ್ಲು ಅರ್ಜುನ್ ಪುತ್ರಿ ಸಿನಿಮಾದಲ್ಲಿ ನಟಿಸುತ್ತಿರುವ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಶಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ಜನರೇಶನ್  ನಟನೆಗೆ ಇಳಿಯುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.

ಪುತ್ರಿ ಅರ್ಹಾ ಗೆ ನಟನೆಯ ಅವಕಾಶ ನೀಡಿದ ಗುಣಶೇಖರ್ ಹಾಗೂ ನೀಲಿಮಾ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ಕೂಡ ನಟಿಸಲಿದ್ದಾರೆ ಎಂದಿದ್ದಾರೆ. ಇಡಿ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

ಮುದ್ದಿನ ಅರ್ಹಾ ಶಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ.

ಅವಳು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಾಳೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. ಈಗಾಗಲೇ ಅರ್ಹಾ ಶಕುಂತಲಂ ಸೆಟ್ ಸೇರಿಕೊಂಡಿದ್ದು 10 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾಳಂತೆ.

Comments are closed.