ಅವಕಾಶ ಅರಸಿ ಬೇರೆ ಭಾಷೆಯತ್ತ ಕಲಾವಿದರು ಮುಖ ಮಾಡೋದು ಸಹಜವಾದ ವಿಚಾರ.ಅಂತಹುದೇ ಪ್ರಯತ್ನವೊಂದರಲ್ಲಿ ಕನ್ನಡತಿ ಹರ್ಷಿಕಾ ಪೂಣಚ್ಚ್ ಉತ್ತರ ಭಾರತದತ್ತ ಮುಖಮಾಡಿದ್ದಾರೆ.

ತೆಲುಗು,ತಮಿಳು,ಮಲೆಯಾಳಂ,ಕೊಡವ,ಕನ್ನಡದ ಬಳಿಕ ನಟಿ ಹರ್ಷಿಕಾ ಪೂಣಚ್ಚ್ ಈಗ ಭೋಜಪುರಿ ಭಾಷೆಯ ಸಿನಿಮಾದಲ್ಲಿ ನಟಿಸಲಿದ್ದು, ಆರ್ಶೀವಾದ ಮಾಡಿ ಎಂದು ಕನ್ನಡಿಗರನ್ನು ಕೋರಿದ್ದಾರೆ.
ಸೌತ ಇಂಡಸ್ಟ್ರಿಯಿಂದ ಭೋಜಪುರಿ ಭಾಷೆಯಲ್ಲಿ ನಟಿಸಿದ ಕೆಲವೇ ನಟಿಯರಲ್ಲಿ ಹರ್ಷಿಕಾ ಕೂಡ ಒಬ್ಬರಾಗಿದ್ದು, ಇನ್ನೂ ಹೆಸರಿಡದ ಚಿತ್ರದಲ್ಲಿ ಹರ್ಷಿಕಾ ನಟ ಪವನ್ ಸಿಂಗ್ ಜೊತೆ ನಟಿಸಲಿದ್ದಾರೆ.

ಚಿತ್ರದ ಸಂಪೂರ್ಣ ಶೂಟಿಂಗ್ ಲಂಡನ್ ನಲ್ಲಿ ನಡೆಯಲಿದ್ದು, ಈಗಾಗಲೇ ಶೇಕಡಾ ೫೦ ರಷ್ಟು ಶೂಟಿಂಗ್ ಮುಗಿದಿದೆ ಎನ್ನಲಾಗಿದೆ. ಬಾಕಿ ಶೂಟಿಂಗ್ ಗಾಗಿ ಹರ್ಷಿಕಾ ಲಂಡನ್ ನಲ್ಲೇ ಬೀಡುಬಿಟ್ಟಿದ್ದಾರೆ.

ಶ್ರೀಮಂತ ಮನೆತನದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಹರ್ಷಿಕಾ ಅದಕ್ಕಾಗಿ ಭರ್ಜರಿ ಸಿದ್ಧತೆ ಕೂಡ ಮಾಡಿಕೊಂಡಿದ್ದಾರಂತೆ. ಯಾಶಿ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ವನ್ನು ಪ್ರೇಮಾಂಶುಸಿಂಗ್ ನಿರ್ದೇಶಿಸುತ್ತಿದ್ದು ೨೦೨೧ ರಲ್ಲಿ ಚಿತ್ರ ತೆರೆಗೆ ಬರಲಿದೆ.