ತೆನೆ ಬಿಟ್ಟು ಕಮಲ ಹಿಡಿತಾರಾ ಕುಮಾರಸ್ವಾಮಿ ..? ಬಿಜೆಪಿ ಹೈಕಮಾಂಡ್ ಕೊಟ್ಟಿದೆ ಬಿಗ್ ಆಫರ್..! ಮತ್ತೆ ಎಚ್ಡಿಕೆ ಸಿಎಂ ಆಗೋದು ಪಕ್ಕಾ..!

ಬೆಂಗಳೂರು : ಮುಂದಿನ ಎಪ್ರೀಲ್ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ ? ತೆಲೆ ಹೊತ್ತ ಮಹಿಳೆಯನ್ನು ಬಿಟ್ಟು ಕಮಲ ಹಿಡಿಯುತ್ತಾರೆ ಎಚ್ ಡಿಕೆ. ಜೆಡಿಎಸ್ ಪಕ್ಷ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾ..? ಇಲ್ಲಾ ವಿಲೀನವಾಗುತ್ತಾ..?

ಹೌದು, ಇಂತಹದ್ದೊಂದು ಮಾತು ಇದೀಗ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಕ್ಕೆ ಬಂದು ಸರಿ ಸುಮಾರು ಒಂದೂವರೆ ವರ್ಷಗಳೇ ಕಳೆಯುವಷ್ಟರಲ್ಲಿಯೇ ರಾಜ್ಯ ಬಿಜೆಪಿ ಒಡೆದ ಮನೆಯಾಗಿದೆ. ಇನ್ನೊಂದಡೆ ಯಡಿಯೂರಪ್ಪ ಹೈಕಮಾಂಡ್ ವಿರುದ್ದವೇ ತೊಡೆತಟ್ಟಲು ಸಜ್ಜಾಗಿದ್ದಾರೆ. ಸಾಲದಕ್ಕೆ ಸಿಎಂ ಪುತ್ರನ ವಿರುದ್ದವೇ ಬಿಜೆಪಿ ನಾಯಕರು ಹೈಕಮಾಂಡ್ ಗೆ ದೂರುಕೊಟ್ಟಿದ್ದಾರೆ. ಜೊತೆಗೆ ಯಡಿಯೂರಪ್ಪ ಪದಚ್ಚ್ಯುತಿ ಪಕ್ಕಾ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಈ ನಡುವಲ್ಲೇ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಅಚ್ಚರಿಯ ಬೆಳೆವಣಿಗೆ ನಡೆಯುತ್ತಿದೆ. ಸದಾ ಬಿಜೆಪಿ ವಿರುದ್ದ ಹರಿಹಾಯುತ್ತಿದ್ದ ಮಾಜಿ ಮುಖ್ಯಮಂತ್ರಿ ಜಾತ್ಯಾತೀತ ನಾಯಕ ಎಚ್.ಡಿ.ಕುಮಾರಸ್ವಾಮಿ ಇದೀಗ ಬಿಜೆಪಿಯ ಪರ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಭೂಸ್ವಾಧೀನ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಕುಮಾರಸ್ವಾಮಿ ರೈತರ ಪರವಾಗಿ ನಿಲ್ಲದೇ, ಸರಕಾರದ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಗೋ ಹತ್ಯೆ ವಿಧೇಯಕ ಮಂಡನೆಯಲ್ಲಿಯೂ ಮೌನವಹಿಸಿದ್ದಾರೆ. ಸಾಲದಕ್ಕೆ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಮಾತ್ರವಲ್ಲ ಮುಂಬರುವ ಬಿಬಿಎಂಪಿ ಚುನಾವಣೆ, ಮೈಸೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜೊತೆ ದೋಸ್ತಿ ಪಕ್ಕಾ ಆಗಿದೆ. ಸಾಲದಕ್ಕೆ ಬಸವ ಕಲ್ಯಾಣ, ಬೆಳಗಾವಿ ಬೈ ಎಲೆಕ್ಷನ್ ನಲ್ಲಿಯೂ ಜೆಡಿಎಸ್ ಸ್ಪರ್ಧೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಎರಡು ಬಾರಿ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಇಷ್ಟೇ ಅಲ್ಲಾ ಬಿಜೆಪಿ ನಾಯಕರಾದ ಸಚಿವ ಆರ್.ಅಶೋಕ್, ಡಿಸಿಎಂ ಅಶ್ವಥ್ ನಾರಾಯಣ, ಮೈಸೂರು ಸಂಸದ ಪ್ರತಾಪ್ ಸಿಂಹ, ಸಚಿವ ಗೋಪಾಲಯ್ಯ ಕೂಡ ಕುಮಾರಸ್ವಾಮಿ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅನ್ನೋ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದೆ. ಅಷ್ಟೇ ಅಲ್ಲಾ ಬಿಜೆಪಿ ಹೈಕಮಾಂಡ್ ಜೊತೆಗೆ ಕುಮಾರಸ್ವಾಮಿ ಈಗಾಗಲೇ ಮಾತುಕತೆ ನಡೆಸಿದ್ದು, ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ ಸಿಎಂ ಆಫರ್ ಕೊಟ್ಟಿದೆ ಎನ್ನಲಾಗುತ್ತಿದೆ.

ಪ್ರಮುಖವಾಗಿ ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ 2 ಆಫರ್ ಗಳನ್ನು ಕೊಟ್ಟಿದೆ. ಒಂದು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಜೊತೆಗೆ ವಿಲೀನ ಮಾಡುವುದು. ಇನ್ನೊಂದು ಜೆಡಿಎಸ್ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು. ಹೌದು, ಜೆಡಿಎಸ್ ಪಕ್ಷ ಬಿಜೆಪಿ ಯ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ಆದ್ರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಖಚಿತ. ಒಂದೊಮ್ಮೆ ವಿಲೀನದ ಬದಲು ಮೈತ್ರಿ ಮಾಡಿಕೊಂಡ್ರೆ ಎಚ್.ಡಿ.ರೇವಣ್ಣ ಗೆ ಉಪಮುಖ್ಯಮಂತ್ರಿ ಪಟ್ಟ ದೊರೆಯಲಿದೆ. ಈ ಎರಡೂ ಆಫರ್ ಗಳನ್ನು ಹೈಕಮಾಂಡ್ ಕುಮಾರಸ್ವಾಮಿ ಅವರ ಮುಂದೆ ಇಟ್ಟಿದೆ.

ಕುಮಾರಸ್ವಾಮಿ ತಮ್ಮ ನಿರ್ಧಾರವನ್ನು ಜನವರಿ 5 ರ ಬಳಿಕ ತಿಳಿಸುವುದಾಗಿ ಬಿಜೆಪಿ ಹೈಕಮಾಂಡ್ ಗೆ ಹೇಳಿದ್ದಾರೆನ್ನಲಾಗುತ್ತಿದೆ. ಮಾತ್ರವಲ್ಲ ಕುಮಾರಸ್ವಾಮಿ ಅವರು ಬಿಜೆಪಿಯ ಕುರಿತು ವಿಶ್ವಾಸದ ಮಾತುಗಳನ್ನು ಆಡುತ್ತಿರೋದನ್ನು ಗಮನಿಸಿದ್ರೆ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಕಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಾತ್ರ ಈ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಂತೆ ಕಾಣಿಸುತ್ತಿಲ್ಲ.

ಈಗಾಗಲೇ ಬಿಜೆಪಿ ಜೊತೆಗೆ ಮೈತ್ರಿ ಸರಕಾರವನ್ನು ನಡೆಸಿದ್ದ ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರ ಜೊತೆಯಲ್ಲಿಯೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇನ್ನೊಂದೆಡೆ ಎಚ್.ಡಿ.ದೇವೆಗೌಡರು ನರೇಂದ್ರ ಮೋದಿ ಅವರ ಮೇಲೂ ವಿಶ್ವಾಸವಿಟ್ಟಿದ್ದಾರೆ. ಈ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿ ಹೊಸ ಪರ್ವ ಶುರುವಾಗೋದು ಖಚಿತ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು.

Comments are closed.