ಸೋಮವಾರ, ಏಪ್ರಿಲ್ 28, 2025
HomeBreakingಕಿಚ್ಚನ ಬಲಕ್ಕೆ ಮಹಿಳಾ ಸೇನೆ...! ಸುದೀಪ್ ಹೆಸರಲ್ಲಿ ಒಂದಾದ್ರು 5 ಸಾವಿರ ...

ಕಿಚ್ಚನ ಬಲಕ್ಕೆ ಮಹಿಳಾ ಸೇನೆ…! ಸುದೀಪ್ ಹೆಸರಲ್ಲಿ ಒಂದಾದ್ರು 5 ಸಾವಿರ ಮಹಿಳೆಯರು….!!

- Advertisement -

ಸಿನಿಮಾ ನಟ-ನಟಿಯರಿಗೆ ಅಭಿಮಾನಿಗಳು,ಅಭಿಮಾನಿಗಳ ಸಂಘ ಎಲ್ಲವೂ ಮಾಮೂಲು. ಆದರೆ ಅಭಿಮಾನಿ ಸಂಘದಲ್ಲಿ ಮಹಿಳೆಯರು ಕಾಣಸಿಗೋದು ಅಪರೂಪ.ಆದರೆ ಇದಕ್ಕೆ ಕಿಚ್ಚಸುದೀಪ್ ಹೊರತಾಗಿದ್ದು ಅಭಿನವ ಚಕ್ರವರ್ತಿ ಹೆಸರಲ್ಲೇ ಮಹಿಳಾ ಅಭಿಮಾನಿಗಳ ಸಂಘ ಹುಟ್ಟಿದೆ.

ಇಷ್ಟಕ್ಕೂ ಕಿಚ್ಚ ಸುದೀಪ್ ಮೇಲಿನ ಅಭಿಮಾನದಿಂದ ಮಹಿಳಾಮಣಿಗಳು ಸಾವಿರ ಸಂಖ್ಯೆಯಲ್ಲಿ ಒಂದಾಗಿರೋದು ಬೆಂಗಳೂರಿನಲ್ಲಿ ಅಲ್ಲ.ಬದಲಾಗಿ ದೂರದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ ಸುದೀಪ್ ಅಭಿಮಾನಿ ಮಹಿಳೆಯರೆಲ್ಲ ಒಂದಾಗಿ ಸಂಘ ಕಟ್ಟಿದ್ದು ಅದಕ್ಕೆ ಮಹಾಸೇವಕ್ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲ ಈ ಸೇನೆ ಮೂಲಕ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ‌.ನಟನಿಗಾಗಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳು ಒಂದೇ ಸಂಘದ ಅಡಿಯಲ್ಲಿ ಒಂದಾಗಿರೋದು ಇದೇ ಮೊದಲು ಎಂದು ಸುದೀಪ್ ಸಂಘದ ಮಹಿಳೆಯರು ಹೇಳಿಕೊಂಡಿದ್ದಾರೆ.

ತಮ್ಮ ಸಂಘ ಹಾಗೂ ತಾವು ಸುದೀಪ್ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಲು ಇಚ್ಚಿಸುವುದಾಗಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹೇಳಿಕೊಂಡಿದ್ದು ಈ ಕುರಿತು 1 ನಿಮಿಷದ ವಿಡಿಯೋ ಮಾಡಿ ಸುದೀಪ್ ಗೆ ಕಳುಹಿಸಿದ್ದಾರೆ. ಸುದೀಪ್ ಸಂಘಟನೆಯ ಹೆಣ್ಣುಮಕ್ಕಳು ಆರೇಂಜ್ ಬಣ್ಣದ ಸೀರೆಯನ್ನು ತಮ್ಮ ಯೂನಿಫಾರ್ಂ ಮಾಡಿಕೊಂಡಿದ್ದಾರೆ.

ಈ ವಿಡಿಯೋ ವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದು ಸಂಘದ ಮಹಿಳಾ ಸದಸ್ಯರಿಗೆ ಧನ್ಯವಾದ ಹೇಳಿದ್ದಲ್ಲದೇ ಶುಭಕೋರಿದ್ದಾರೆ.

RELATED ARTICLES

Most Popular