ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸಾಕಷ್ಟು ಜನಪ್ರಿಯತೆಯೊಂದಿಗೆ ಮನೆಮಾತಾಗಿರುವ ಧಾರಾವಾಹಿ ಜೊತೆ ಜೊತೆಯಲಿ. ಸ್ಯಾಂಡಲ್ ವುಡ್ ನ ನಟ ಅನಿರುದ್ಧ್ ಹಾಗೂ ಮೇಘಾ ಶೆಟ್ಟಿ ಜೊತೆಯಾಗಿರುವ ಈ ಧಾರಾವಾಗಿ ವಿಶಿಷ್ಟ ಕತೆ ಹಾಗೂ ನಿರೂಪಣೆ ಕಾರಣಕ್ಕೆ ಜನಮೆಚ್ಚುಗೆ ಗಳಿಸಿದೆ. ಈ ಮಧ್ಯೆ ಸದ್ಯ ಶೂಟಿಂಗ ಇಲ್ಲದೇ ಮನೆಲಿರುವ ನಟಿ ಮೇಘಾ ಶೆಟ್ಟಿ ಕೊರೋನಾ ಕಾಳಜಿ ಬಗ್ಗೆ ಮಾತನಾಡಿದ್ದಾರೆ.

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ಮನೋರಂಜನಾ ಚಟುವಟಿಕೆಗಳು ಸ್ಥಗಿತಗೊಂಡಿರೋದರಿಂದ ನಟಿ ಮೇಘಾ ಶೆಟ್ಟಿ ಮನೆಯಲ್ಲೇ ಇದ್ದಾರೆ. ಮನೆಯಿಂದಲೇ ಸೋಷಿಯಲ್ ಮೀಡಿಯಾ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿರುವ ಮೇಘಾ ಕೊರೋನಾ ನಿಯಮ ಪಾಲಿಸಿ ಎಂದು ಮನವಿ ಮಾಡಿದ್ದಾರೆ.

ಎಲ್ಲರೂ ಸೇಫ್ ಆಗಿದ್ದೀರಾ ಅಂತ ನಾನು ಅಂದುಕೊಂಡಿದ್ದೀನಿ. ನಾವೆಲ್ಲರೂ ಸೇಫ್ ಆಗಿರೋಣ. ಮತ್ತೊಮ್ಮೆ ಲಾಕ್ ಡೌನ್ ಆಗಿದೆ. ನಾವೆಲ್ಲರೂ ಮನೆಯಲ್ಲಿರೋ ಪರಿಸ್ಥಿತಿ ಬಂದಿದೆ. ಏನು ಮಾಡೋದಿಕ್ಕೆ ಸಾಧ್ಯವಿಲ್ಲ.ಮನೆಯಲ್ಲೇ ಸುರಕ್ಷಿತವಾಗಿರೋಣ. ಲಾಕ್ ಡೌನ್ ನಿಯಮ ಹಾಗೂ ಕೊರೋನಾ ಜಾಗೃತಿ ವಹಿಸೋಣ ಎಂದಿದ್ದಾರೆ ಮೇಘಾ ಶೆಟ್ಟಿ.
https://m.facebook.com/story.php?story_fbid=307660794286002&id=100051262515436
ಮಾಸ್ಕ್ ಧರಿಸೋದು,ಸ್ಯಾನಿಟೈಸರ್ ಬಳಸೋದು ಸಾಮಾಜಿಕ ಅಂತರ ಕಾಪಾಡೋದು ಎಲ್ಲವನ್ನು ಪಾಲಿಸೋಣ.ಅಷ್ಟೇ ಅಲ್ಲ ಎಲ್ಲರೂ ವಾಕ್ಸಿನೇಶನ್ ಕೂಡ ಹಾಕಿಸಿಕೊಳ್ಳೋಣ ಎಂದು ಮೇಘಾ ಶೆಟ್ಟಿ ಮನವಿ ಮಾಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು, ಹಲವು ಜಾಹೀರಾತುಗಳಲ್ಲೂ ಬಣ್ಣ ಹಚ್ಚಿದ್ದಾರೆ.
