ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಜೂನ್ ನಲ್ಲಿ ಮತ್ತೆ ಆರಂಭವಾಗಲಿದೆ. ಜೂನ್ ಕೊನೆಯವಾರದಲ್ಲಿ ಅಂದ್ರೆ ಜೂನ್ 28 ರಿಂದ ಮತ್ತೆ ದೊಡ್ಮನೆ ಆಟ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಬಿಗ್ ಬಾಸ್ ಸೀಸನ್ 8 ಶೋ ಮತ್ತೆ ಆರಂಭವಾಗಲಿದೆ ಎಂಬ ವಿಚಾರವನ್ನು ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಖಚಿತಪಡಿಸಿದ್ದು, ಅಧಿಕೃತವಾದ ದಿನಾಂಕ ಘೋಷಣೆಯೊಂದೆ ಬಾಕಿ ಇದೆ.

ಕೊರೋನಾ ಎರಡನೇ ಅಲೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಬಿಗ್ ಬಾಸ್ ಶೋವನ್ನು ಅರ್ಧಕ್ಕೆ ನಿಲ್ಲಿಸಿ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಈಗ ಎರಡನೇ ಅಲೆಯ ಅಬ್ಬರ ತಗ್ಗಿರೋದರಿಂದ ಮತ್ತೆ ಶೋ ಆರಂಭಿಸಲು ವಾಹಿನಿ ಸಜ್ಜಾಗಿದೆ.

ಅರ್ಧಕ್ಕೆ ಶೋ ನಿಲ್ಲಿಸಿ ಮನೆಗೆ ಮರಳಿದ್ದ ಸ್ಪರ್ಧಿಗಳಿಗೆ ಈಗಾಗಲೇ ಒಂದೊಂದು ಡೋಸ್ ಲಸಿಕೆ ಕೊಡಿಸಿ ಕ್ವಾರಂಟೈನ್ ಮಾಡಲಾಗಿದ್ದು, ಇನ್ನೇನು ಕೆಲವೇ ದಿನದಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಅಂಗಳದಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.

ನಿಧಿ ಸುಬ್ಬಯ್ಯ,ಕೆ.ಪಿ.ಅರವಿಂದ್, ದಿವ್ಯಾ ಸುರೇಶ್, ಶಮಂತ್ ಗೌಡ್, ರಘುಗೌಡ್, ವೈಷ್ಣವಿ ಗೌಡ್,ಪ್ರಶಾಂತ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಮಂಜುಪಾವಗಡ್,ಶುಭಾ ಪೂಂಜಾ, ಪ್ರಿಯಾಂಕಾ ತಿಮ್ಮೇಶ್ ಮತ್ತೆ ದೊಡ್ಮನೆಯಲ್ಲಿ ತಮ್ಮ ಆಟ ಆರಂಭಿಸಲಿದ್ದಾರೆ.

ಬಿಗ್ ಬಾಸ್ ನ ಪ್ರಮುಖ ಆಕರ್ಷಣೆಯಾಗಿದ್ದ ಲವ್ವರ್ ಬಾಯ್ಸ್ ಅರವಿಂದ್ ಹಾಗೂ ದಿವ್ಯಾ ಉರುಡುಗ ಕೂಡ ಮತ್ತೆ ತಮ್ಮ ಪ್ರೀತಿಯ ಆಟ ಮುಂದುವರೆಸಲಿದ್ದಾರಾ ಎಂಬ ಕುತೂಹಲ ಮೂಡಿದೆ. 16 ಸ್ಪರ್ಧಿಗಳು ಬಿಗ್ ಬಾಸ್ ಆರಂಭದಲ್ಲಿ ಕಣದಲ್ಲಿದ್ದು, ಈ ಪೈಕಿ ಈಗಾಗಲೇ ನಾಲ್ವರು ಎಲಿಮಿನೇಟ್ ಆಗಿ ಹೊರಬಂದಿದ್ದರು.