Unlock : ಪಾಸಿಟಿವಿಟಿ ದರ ಆಧರಿಸಿ ಅನ್ ಲಾಕ್, ತಜ್ಞರಿಂದಲೂ ಸಲಹೆ : ಸಚಿವ ಸುಧಾಕರ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಪಾಸಿಟಿವಿಟಿ ಆಧಾರದಲ್ಲಿ ಕ್ರಮ ಕೈಗೊಳ್ಳುವಂತೆ ತಜ್ಞರು ಕೂಡ ಸಲಹೆ ನೀಡಿದ್ದು, ಸಂಜೆ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸುತ್ತೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಸಿಟಿವಿಟಿ ದರ ಆಧರಿಸಿಯೇ ಅನ್ ಲಾಕ್ ಆದೇಶವನ್ನು ಜಾರಿ ಮಾಡುತ್ತೇವೆ. ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರೋ ಜಿಲ್ಲೆಗಳ ಸಂಖ್ಯೆ 13, ಶೇ.5 ಕ್ಕಿಂತ ಹೆಚ್ಚಿರುವ ಜಿಲ್ಲೆಗಳು 16 ಹಾಗೂ ಶೇ 5 ಮತ್ತು ಶೇ.10ರ ನಡುವಿನ ಪಾಸಿಟಿವಿಟಿ ದರ ಇರುವ ಜಿಲ್ಲೆಗಳ ಸಂಖ್ಯೆ 13 ಇದೆ. ಇನ್ನು ಮೈಸೂರಿನಲ್ಲಿ ಶೇ.10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ. ಹೀಗಾಗಿ ಪಾಸಿಟಿವಿಟಿ ಆಧಾರದಲ್ಲಿಯೇ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಜಾರಿ ಮಾಡುತ್ತೇವೆ. ಮುಂದಿನ 14 ದಿನಗಳ ಅನ್ ಲಾಕ್ ಕುರಿತು ಕ್ರಮಕೈಗೊಳ್ಳು ತ್ತೇವೆ. ಸಿಎಂ ಯಡಿಯೂರಪ್ಪ ಅವರು ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ತಜ್ಞರು ಲಾಕ್ ಡೌನ್ ಸಡಿಲಿಕೆ ಬಗ್ಗೆಯೂ ಸಲಹೆ ನೀಡಿದ್ದಾರೆ. ಸೋಮವಾರ ರಾಜ್ಯದಲ್ಲಿ ಸುಮಾರು 5 ರಿಂದ 7 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡುವ ಚಿಂತನೆ ನಡೆಸಲಾಗಿದೆ. ರಾಜ್ಯ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಿದ್ದವಾಗಿದೆ ಎಂದಿದ್ದಾರೆ.

ಜೂನ್ 21ರಂದು ರಾಜ್ಯದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗದಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ. ಯೋಗ ಮಾಡುವವರಿಗೆ ಕೊರೊನಾ ಸೋಂಕು ಬಾಧಿಸಿಲ್ಲ. ಹೀಗಾಗಿ ಯೋಗ ದಿನಾಚರಣೆಯ ದಿನ ಸಿಎಂ ಯಡಿಯೂರಪ್ಪ ಅವರು ಕೂಡ ಯೋಗ ಮಾಡಲಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಯೋಗ ಮಾಡಲಿದ್ದಾರೆ. ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆಯನ್ನ ಆಯೋಜಿಸಲಾಗುತ್ತಿದೆ. ಯೋಗ ಗುರುಗಳು ಮಾಡುವ ಯೋಗವನ್ನು ಪ್ರಸಾರ ಮಾಡಲಾಗುತ್ತದೆ ಎಂದಿದ್ದಾರೆ.

Comments are closed.