ಭಾನುವಾರ, ಏಪ್ರಿಲ್ 27, 2025
HomeBreakingಬಾಲನಟನಾಗಿ ಬಂದ ಪುನೀತ್ ಗೆ 45 ರ ಸಂಭ್ರಮ…! ಪವರ್ ಸ್ಟಾರ್ ಸಿನಿಜರ್ನಿಗೆ ಸ್ಟಾರ್ ಗಳ...

ಬಾಲನಟನಾಗಿ ಬಂದ ಪುನೀತ್ ಗೆ 45 ರ ಸಂಭ್ರಮ…! ಪವರ್ ಸ್ಟಾರ್ ಸಿನಿಜರ್ನಿಗೆ ಸ್ಟಾರ್ ಗಳ ಶುಭಹಾರೈಕೆ…!!

- Advertisement -

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ….ಚಂದ್ರ ಮೇಲೆ ಬಂದ ಎಂದು ಹಾಡುತ್ತ ಬಾಲನಟನಾಗಿ ಚಂದನವನಕ್ಕೆ ಕಾಲಿಟ್ಟು ಪವರ್ ಸ್ಟಾರ್ ಆಗಿ ಬೆಳೆದು ನಿಂತ ನಾಯಕನಟ,ಗಾಯಕ ಹಾಗೂ ಆಂಕ್ಯರ್ ಖ್ಯಾತಿಯ ಪುನೀತ್ ರಾಜಕುಮಾರ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು 45 ವರ್ಷಗಳು ಪೊರೈಸಿವೆ.

ಈ ಶುಭ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಪ್ರೀತಿಯಿಂದ ತನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ ಎಲ್ಲರಿಗೂ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು ಎಂದಿದ್ದಾರೆ.

ಬಾಲನಟನಾಗಿ ಬಹುತೇಕ ಹಿರಿಯ ನಟ-ನಟಿಯರ ಜೊತೆ ನಟಿಸಿದ್ದ ಪುನೀತ್ ಅಲಿಯಾಸ್ ಅಪ್ಪು ಸ್ಯಾಂಡಲ್ ವುಡ್ ನಲ್ಲಿ 45 ವರ್ಷ ಪೊರೈಸಿದ ನಾಯಕನಿಗೆ ಕನ್ನಡದ ಎಲ್ಲ ನಟ-ನಟಿಯರು ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ.

45 ವರ್ಷ ಎಂದರೇ ಅದು ನಿಮ್ಮ ಇಡಿ ಜೀವನ. ಇದು ಅತಿದೊಡ್ಡ ಸಾಧನೆ. ಇನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟುಮತ್ತಷ್ಟು ಸಾಧನೆ ಮಾಡಿ ಎಂದು ಪುನೀತ್ ಗೆ ಅಭಿನಯ ಚಕ್ರವರ್ತಿ ಸುದೀಪ್ ಶುಭಹಾರೈಸಿದ್ದಾರೆ.

ನೀವು ನಿಮ್ಮ ಸಿನಿಮಾ ಜರ್ನಿಯ ಮೂಲಕ ನಿಜವಾಗಿಯೂ ಪವರ್ ಸ್ಟಾರ್ ಎಂಬುದನ್ನು ಸಾಬೀತುಮಾಡಿದ್ದೀರಿ ಅಪ್ಪು ಸರ್ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರೇ, 45 ವರ್ಷಗಳ ಸುಂದರ ಪ್ರಯಾಣ.

ಅಭಿನಂದನೆಗಳು ಮತ್ತು ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದಿರುವ ಸೃಜನ್ ಲೊಕೇಶ್ ತಂದೆ ಲೋಕೇಶ್ ಜೊತೆ ಅಪ್ಪ ಇರುವ ಪೋಟೋ ಹಂಚಿಕೊಂಡಿದ್ದಾರೆ.

ಶಿಶುವಾಗಿದ್ದಾಗಲೂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಪುನೀತ್ ರಾಜಕುಮಾರ್ ಇದುವರೆಗೂ 25 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದು, 45 ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ.

ಇದಕ್ಕೆ ಅಭಿಮಾನಿಗಳು ಕಾಮನ್ ಡಿಪಿ ರಿಲೀಸ್ ಮಾಡಿದ್ದು ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.

RELATED ARTICLES

Most Popular