ಮಂಗಳವಾರ, ಏಪ್ರಿಲ್ 29, 2025
HomeBreakingಶೂಟಿಂಗ್ ಮುಗಿಸಿದ ಫ್ಯಾಂಟಮ್....!! ಸೆಟ್ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ‌ಗೊತ್ತಾ...?!

ಶೂಟಿಂಗ್ ಮುಗಿಸಿದ ಫ್ಯಾಂಟಮ್….!! ಸೆಟ್ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ‌ಗೊತ್ತಾ…?!

- Advertisement -

ಪೈಲ್ವಾನ್ ಬಳಿಕ ಸುದೀಪ್ ಅಭಿಯನದ ಬಹುನೀರಿಕ್ಷಿತ ಚಿತ್ರ ಫ್ಯಾಂಟಮ್ ಬಹುತೇಕ ಚಿತ್ರೀಕರಣ‌ ಮುಗಿಸಿದ್ದು ಚಿತ್ರದ ಸೆಟ್ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫ್ಯಾಂಟಮ್ ಚಿತ್ರದ ಆರಂಭದಿಂದಲೂ ಚಿತ್ರಕ್ಕೆ ಸಂಬಂಧಿಸಿದ ಒಂದೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತ ಬಂದಿದ್ದ ಸುದೀಪ್, ತಮ್ಮ ಫರ್ಸ್ಟ್ ಲುಕ್ ನ್ನು ಕೂಡ ಟ್ವೀಟ್ ಮೂಲಕ ರಿವೀಲ್ ಮಾಡಿದ್ದರು.

ಬಳಿಕ ಫ್ಯಾಂಟಮ್ ಕ್ಲೈಮ್ಯಾಕ್ಸ್ ಗಾಗಿ ಮತ್ತೆ ವರ್ಕೌಟ್ ಆರಂಭಿಸಿದ್ದನ್ನು ಪೋಟೋ ಸಮೇತ ಹೇಳಿದ್ದರು. ಇದೀಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿದಿರುವ ಸಂಗತಿಯನ್ನು ಸುದೀಪ್ ಕ್ಲೈಮ್ಯಾಕ್ಸ್ ಸೆಟ್ ಪೋಟೋ ಜೊತೆ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ಚಿತ್ರದಲ್ಲಿ ಇರೋ ಕಟ್ಟಡಗಳ ಜೊತೆಗೆ ಚಿತ್ರತಂಡ ನಿರ್ಮಿಸಿದ ಸೆಟ್ ನ್ನು ಕಿಚ್ಚ್ ಸುದೀಪ್ ಶ್ಲಾಘಿಸಿದ್ದಾರೆ. ಈ ಬಗ್ಗೆ ಮಧ್ಯಾಹ್ನ ಟ್ವೀಟ್ ಮಾಡಿರುವ ಸುದೀಪ್ ಚಿತ್ರದ ಕೊನೆಯ ಶೆಡ್ಯೂಲ್ ನ್ನು ಉಲ್ಲೇಖಿಸಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನವಿರುವ ಫ್ಯಾಂಟಮ್, ಆ್ಯಕ್ಷನ್, ಅಡ್ವೆಂಚರ್ ಹಾಗೂ ಫ್ಯಾನ್ ಇಂಡಿಯಾ ಆಗುವಂತಹ ಸಿನಿಮಾ ಎನ್ನಲಾಗಿದ್ದು, ಶಾಲಿನಿ ಆರ್ಟ್ ಬ್ಯಾನರ್ ಅಡಿಯಲ್ಲಿ ಮಂಜುನಾಥ ಗೌಡ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಕೊರೋನಾ ಎಫೆಕ್ಟ್ ಬಳಿಕ ಜೂನ್ ನಿಂದಲೇ ಪ್ಲ್ಯಾನ್ ಮಾಡಿ ಶೂಟಿಂಗ್ ಆರಂಭಿಸಿದ ಚಿತ್ರತಂಡ ಡಿಸೆಂಬರ್ ನಲ್ಲಿ ಅಂತಿಮ ಹಂತದ ಶೂಟಿಂಗ್ ಕೇರಳ ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಿದೆ.

ವಿಕ್ರಾಂತ್ ರೋಣಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತವಿದೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ, ಆಶೋಕ್ ಪ್ರಮುಖ ಪಾತ್ರದಲ್ಲಿದ್ದಾರೆ.

ಭಾರಿ ಬಜೆಟ್ ನ ಈ ಸಿನಿಮಾವನ್ನು ಏಕಕಾಲಕ್ಕೆ ಹಲವು ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಹೊಸವರ್ಷದಲ್ಲಿ ಚಿತ್ರ ತೆರೆಗೆ ಬರಲಿದೆ.

RELATED ARTICLES

Most Popular